Tuesday, October 26, 2021

ಪಿಎಂ ಕಚೇರಿಯಲ್ಲೇ ಕುಳಿತವರಿಂದ ಖಾಸಗಿ ಹಣ ಸಂಗ್ರಹ..! ಇದೆಂಥಾ ಕಲೆಕ್ಷನ್..? – ARE WE STUPID..?

Must read

ಪಿಎಂ ಕೇರ್ಸ್​ ಫಂಡ್​ನ ಹಣ ಕಳಪೆ ಗುಣಮಟ್ಟದ ವೆಂಟಿಲೇಟರ್​ ಪೂರೈಕೆಗೆ ಬಳಕೆಯಾಗಿತ್ತು. ದೇಶದ ವೈದ್ಯ ಸಮೂಹ ಈ ವೆಂಟೆಲೇಟರ್​ ನೋಡಿ ಬೆಚ್ಚಿಬಿದ್ದಿತ್ತು. ಇಡೀ ದೇಶದ ಜನ ಒದ್ದಾಡುತ್ತಿದ್ದಾಗ ದೇಶದ ಜನಗಳಿಗೆ ನೆರವಾಗಲಿ ಎಂದು ಸಂಗ್ರಹವಾದ ನಿಧಿ ನೆರವಿಗೆ ಬರಲಿಲ್ಲ. ಯಾರ ಔಷಧಿ ಖರ್ಚಿಗೂ ಈ ಫಂಡ್​ನಿಂದ ನಯಾಪೈಸೆ ಬಿಡುಗಡೆಯಾಗಲಿಲ್ಲ. ಅನೇಕರ ಮನೆಗಳಲ್ಲಿ ಹೆಣ ಬಿದ್ದಾಗಲೂ ಇದೇ ಫಂಡ್​ನಿಂದ ನಯಾಪೈಸೆ ಪರಿಹಾರ ಸಿಗಲಿಲ್ಲ. ಅಪ್ಪನನ್ನೋ, ಅಮ್ಮನನ್ನೋ ಕಳೆದುಕೊಂಡ ಕಂದಮ್ಮಗಳು ಕಣ್ಣೀರು ಹಾಕುತ್ತಾ ಇದ್ದಾಗ ಈ ಹಣ ಅವರಿಗೆ ಪರಿಹಾರವಾಗಲಿಲ್ಲ. ಇದೇ ಹಣ ವ್ಯಾಕ್ಸಿನ್​ಗಾಗಿ ಬಳಕೆಯಾಗಲಿಲ್ಲ. ವ್ಯಾಕ್ಸಿನ್​ಗೆ ಮೂರು ಮೂರು ಬೆಲೆ ನಿಗದಿ ಮಾಡಿ ಮಾರಿದ್ದು ಇದೇ ದೇಶದಲ್ಲಿಯೇ ಅಲ್ಲವೇ. ಪಿಎಂ ಕೇರ್ಸ್​ ಫಂಡ್​ ಹಣ ವ್ಯಾಕ್ಸಿನ್​ಗೂ ಕೊಡಲಿಲ್ಲ ಎಂದ ಮೇಲೆ ಅದರ ಉದ್ದೇಶವೇ ಬಿದ್ದು ಹೋದಂತೆ ಅಲ್ಲವೇ? ಉದ್ದೇಶ ಬಿದ್ದಿದ್ದು ಏಕೆ ಗೊತ್ತಾ? ಇದು ಖಾಸಗಿ ಟ್ರಸ್ಟ್​ ಮತ್ತು ಖಾಸಗಿ ವ್ಯಕ್ತಿಗಳಿಗೆ ಹಣ ಹೋಗಿದೆ ಆ ಕಾರಣಕ್ಕೆ ಅಷ್ಟೇ!

ದೇಶದ ಘನತೆವೆತ್ತ ಪ್ರಧಾನ ಮಂತ್ರಿ ಹುದ್ದೆ, ರಕ್ಷಣಾ ಮಂತ್ರಿ ಹುದ್ದೆ, ಗೃಹ ಮಂತ್ರಿ ಹುದ್ದೆ ಮತ್ತು ವಿತ್ತ ಮಂತ್ರಿ ಹುದ್ದೆ ಎಲ್ಲವನ್ನೂ ಈ ಟ್ರಸ್ಟ್​ಗಾಗಿ ಬಳಸಲಾಗಿದೆ. ದೇಶದ ಜನಕ್ಕೆ ಇದು ಸರ್ಕಾರದ್ದೇ ಎಂದು ನಂಬಿಸಲು ಮತ್ತು ಬಿಂಬಿಸಲು ಅಷ್ಟೇ. ಸರ್ಕಾರಕ್ಕೆ ಮಾತ್ರ ಸಿಗುವ GOV.IN  ಈ ಟ್ರಸ್ಟ್​ಗೆ ಸಿಕ್ಕಿದೆ. ಇದು ಸಿಗಲು ಹೇಗೆ ಸಾಧ್ಯವಾಯಿತು ಎಂದು ಯಾರಾದರೂ ಸಣ್ಣ ತನಿಖೆ ಮಾಡಬೇಕಿತ್ತಲ್ಲವೇ? ಅದೂ ಆಗಿಲ್ಲ. ಇನ್ನೊಂದು ಕಡೆ ದೇಶದ PMO ಕಚೇರಿ ಇದೇ ಖಾಸಗಿ ಟ್ರಸ್ಟ್​ನ  ಕೇರ್​ ಆಫ್​ ವಿಳಾಸ. ಅಲ್ಲಿಗೆ ಸರ್ಕಾರದ ಕಚೇರಿಯನ್ನ ಖಾಸಗಿಯಾಗಿ ದುರುಪಯೋಗ ಪಡಿಸಿಕೊಂಡಿದ್ದಕ್ಕೆ ಒಂದು ಸಣ್ಣ ತನಿಖೆ ಆಗಬೇಡವೇ? ಅದೂ ಆಗಿಲ್ಲ. ಇದೇ ಟ್ರಸ್ಟ್​ ಖಾಸಗಿಯಾಗಿ ನೋಂದಣಿಯಾಗಿರುವುದು ದೆಹಲಿಯ ಸಬ್​ ರಿಜಿಸ್ಟ್ರಾರ್​ ಆಫೀಸ್​ನಲ್ಲಿ. ಪ್ರಧಾನಿ ಮಂತ್ರಿಗಳೇ ಮುಖ್ಯಸ್ಥರಿರುವ ಖಾಸಗಿ ಟ್ರಸ್ಟ್​ ಮಾಡಿಕೊಡಲು ಈ ರಿಜಿಸ್ಟ್ರಾರ್​ಗೆ ಹೇಗೆ ಸಾಧ್ಯವಾಯಿತು ಎಂದು ಒಂದು ತನಿಖೆ ನಡೆದಿಲ್ಲ ಎಂದರೆ ಆಶ್ಚರ್ಯವಲ್ಲವೇ? ಇದು ಪ್ರಭಾವದ ಮಹಿಮೆಯೋ? ಒತ್ತಡದ ಕಾರಣವೋ? ಅಥವಾ ಈ ನಾಲ್ಕು ಜನರ ಸಿಂಡಿಕೇಟ್​ ಅಷ್ಟು ಬಲಶಾಲಿಯೋ ಗೊತ್ತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಕೇವಲ 4 ದಿನಗಳಿಗೆ 3076 ಕೋಟಿ ಸಂಗ್ರಹವಾಗಿರಬೇಕಾದರೆ, 545 ದಿನಗಳು ಅಥವಾ ಒಂದೂವರೆ ವರ್ಷಕ್ಕೆ ಇಲ್ಲಿ ಅದಿನ್ನೆಷ್ಟು ಲಕ್ಷ ಕೋಟಿ ಸಂಗ್ರಹವಾಗಿರಬೇಡ? ARE WE STUPID?

Also read:  ಕೋವಿಡ್​ ಹೆಸರಿನಲ್ಲಿ ಎತ್ತಿದ ಹಣ ಪಿಎಂ ಕೇರ್ಸ್​ ಫಂಡ್..! ಜನ ಸಾಯುತ್ತಿದ್ರೂ ನಯಾಪೈಸೆ ನೆರವಿಲ್ಲ..!

 

 

 

More articles

Latest article