Tuesday, August 16, 2022

ಆಪತ್ತಿನಲ್ಲಿದೆ ದೇಶದ ಪ್ರಧಾನ ಮಂತ್ರಿಗಳ ಕಚೇರಿಯ ಘನತೆ..? – ಪ್ರಧಾನಿ ಕಚೇರಿಗೆ ನುಸುಳಿದ್ದಾನೆ ಖಾಸಗಿ ವ್ಯಕ್ತಿ..? – ARE WE STUPID..?

Must read

ಭಾರತ ದೇಶದ ಗೌರವಾನ್ವಿತ ಹಾಗೂ ಘನತೆವೆತ್ತ ಪ್ರಧಾನಮಂತ್ರಿಗಳ ಕಚೇರಿ ಅಕ್ಷರಶಃ ಆಪತ್ತಿನಲ್ಲಿದೆ. ಪ್ರಧಾನಿಗಳ ಕಚೇರಿಗೆ ಖಾಸಗಿ ವ್ಯಕ್ತಿಯೊಬ್ಬ ನುಸುಳಿದ್ದಾನೆ. ಆ ಖಾಸಗಿ ವ್ಯಕ್ತಿ, ನಮ್ಮ ದೇಶದ ಪ್ರಧಾನಮಂತ್ರಿಗಳ ಹೆಸರಿನಲ್ಲಿ ಹಾಡಹಗಲೇ ಸಾವಿರಾರು ಕೋಟಿ ರೂಪಾಯಿ ಲೂಟಿ ಹೊಡೆಯುತ್ತಿದ್ದಾನೆ. ಆ ಖಾಸಗಿ ವ್ಯಕ್ತಿಯ ಹೆಸರೇನು ಗೊತ್ತಾ..? ಆ ಹೆಸರೇ ನರೇಂದ್ರ ಮೋದಿ.
ಆಶ್ಚರ್ಯಗೊಳ್ಳಬೇಡಿ. ಇದು ಪಿಎಂ ಕೇರ್ಸ್ ಫಂಡ್​ಗೆ ಸಂಬಂಧಿಸಿದ ಸ್ಟೋರಿ. ದೇಶಾದ್ಯಂತ ಪಿಎಂ ಕೇರ್ಸ್ ಫಂಡ್ ಹೆಸರಿನಲ್ಲಿ ಜನರಿಂದ ಹಣವನ್ನ ಸಂಗ್ರಹ ಮಾಡಲಾಗಿದೆ. ಈ ಪಿಎಂ ಕೇರ್ಸ್ ಫಂಡ್​ನ ಮುಖ್ಯಸ್ಥರ ಹೆಸರು ನರೇಂದ್ರ ಮೋದಿ. ಈ ನರೇಂದ್ರ ಮೋದಿಯವರ ಜೊತೆಯಲ್ಲಿ ಅಮಿತ್ ಶಾ, ರಾಜನಾಥ್ ಸಿಂಗ್ ಹಾಗೂ ನಿರ್ಮಲಾ ಸೀತಾರಾಮನ್ ಎನ್ನುವ ಇನ್ನೂ ನಾಲ್ಕು ಜನರಿದ್ದಾರೆ. ಇವರೆಲ್ಲರೂ ಪ್ರೈವೆಟ್ ಪರ್ಸನ್​ಗಳೇ. ಆದರೆ ಇವರೆಲ್ಲರ ವಿಳಾಸ ಒಂದೇ. ನಮ್ಮ ದೇಶದ ಪ್ರಧಾನ ಮಂತ್ರಿಗಳ ಕಚೇರಿ.

ಪಿಎಂ ಕೇರ್ಸ್ ಫಂಡ್​ನ ಒಂದು ಖಾಸಗಿ ಫಂಡ್ ಎಂದು ಸ್ವತಃ ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್​ನಲ್ಲಿ ಸ್ಪಷ್ಟಪಡಿಸಿದೆ. ಅದು ಖಾಸಗಿ ಫಂಡ್ ಎಂದ ಮೇಲೆ, ಆ ಹಣಕ್ಕೂ ದೇಶದ ಪ್ರಧಾನಿಗಳಿಗೂ ಸಂಬಂಧವಿಲ್ಲ. ಸಂಬಂಧವಿಲ್ಲ ಎಂದ ಮೇಲೆ, ನರೇಂದ್ರ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್ ಹಾಗೂ ನಿರ್ಮಲಾ ಸೀತಾರಾಮನ್ ಎಲ್ಲರೂ ಖಾಸಗಿ ವ್ಯಕ್ತಿಗಳೇ ಆಗುತ್ತಾರೆ. ಈ ಖಾಸಗಿ ವ್ಯಕ್ತಿಗಳು ದೇಶದ ಜನರಿಂದ ಹಣ ಸಂಗ್ರಹ ಮಾಡುತ್ತಿರುವುದು ಎಷ್ಟು ಸರಿ. ARE WE STUPID..?

Latest article