ನಮ್ಮ ದೇಶದ ಪ್ರಧಾನ ಮಂತ್ರಿಗಳ ಹೆಸರು ನರೇಂದ್ರ ಮೋದಿ. ಆದರೆ ಪಿಎಂ ಕೇರ್ಸ್ ಫಂಡ್ ವಿಚಾರದಲ್ಲಿ ಇದೇ ನರೇಂದ್ರ ಮೋದಿಯವರು ಖಾಸಗಿ ವ್ಯಕ್ತಿ ಎನಿಸಿಕೊಂಡಿದ್ದಾರೆ. ಒಂದೇ ಕಚೇರಿಯಲ್ಲಿ ದೇಶದ ಪ್ರಧಾನಿಗಳೂ ಇದ್ದಾರೆ. ಖಾಸಗಿ ವ್ಯಕ್ತಿ ನರೇಂದ್ರ ಮೋದಿಯೂ ಇದ್ದಾರೆ. ಪ್ರಧಾನಿಗಳ ಕಚೇರಿಯನ್ನ ಬಳಸುತ್ತಿದ್ದಾರೆ. ಖಾಸಗಿ ಫಂಡ್ಅನ್ನು ಕಲೆಕ್ಟ್ ಮಾಡುತ್ತಿದ್ದಾರೆ. ಪ್ರಧಾನಿಗಳ ಸಹಿಯನ್ನ ಬಳಕೆ ಮಾಡಿದ್ದಾರೆ. ಖಾಸಗಿ ಡೊನೇಷನ್ ಕಲೆಕ್ಟ್ ಮಾಡುತ್ತಿದ್ದಾರೆ. ಸರ್ಕಾರದ GOV url ಬಳಸುತ್ತಿದ್ದಾರೆ. ಖಾಸಗಿ ಡೊನೇಷನ್ ಕಲೆಕ್ಟ್ ಮಾಡುತ್ತಿದ್ದಾರೆ.
ಘನತೆವೆತ್ತ ಪ್ರಧಾನಿಗಳ ಕಚೇರಿಯಲ್ಲಿ ಇದ್ದುಕೊಂಡು ಇಷ್ಟೆಲ್ಲಾ ಮಾಡಲು ಆ ಖಾಸಗಿ ವ್ಯಕ್ತಿಗೆ ಅದೆಂಥಾ ಧೈರ್ಯ. ಅದೆಂತಾ ಕಾನ್ಫಿಡೆನ್ಸ್. ಈ ಬಗ್ಗೆ ನಮ್ಮ ದೇಶದ ಘನತೆವೆತ್ತ ಸುಪ್ತೀಂ ಕೋರ್ಟ್ ಕೂಡಲೇ ತನಿಖೆ ನಡೆಸಬೇಕಿದೆ. ದೂದ್ ಕಾ ದೂದ್.. ಪಾನಿ ಕಾ ಪಾನಿ ಮಾಡಲೇಬೇಕಿದೆ.. ಯಾಕಂದ್ರೆ, ಇಲ್ಲಿ ಲೂಟಿಯಾಗುತ್ತಿರುವುದು ನಮ್ಮ ದೇಶದ ಪ್ರಧಾನ ಮಂತ್ರಿಗಳ ಹೆಸರಿನಲ್ಲಿ. ಪಿಎಂ ಕೇರ್ಸ್ ಫಂಡ್ ಹೆಸರಿನಲ್ಲಿ. ಇದೆಂತಾ ಡೊನೇಷನ್..? ARE WE STUPID..?