Tuesday, August 16, 2022

ಪಂಚ ರಾಜ್ಯ ಚುನಾವಣೆ ವೇಳೆಯಲ್ಲೇ ಭದ್ರತಾ ಲೋಪವೇ..?

Must read

ದೇಶದಲ್ಲಿ ಬಡತನ ಪ್ರಮಾಣ ಹೆಚ್ಚುತ್ತಿದೆ.. ನಿರುದ್ಯೋಗಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ.. ದೇಶದ ಮಧ್ಯಮವರ್ಗ ಹಾಗೂ ಬಡ ಜನತೆ ಜೀವನ ಸಾಗಿಸುವುದು ನಿಜಕ್ಕೂ ದೊಡ್ಡ ಸವಾಲಾಗಿ ಪರಿಣಮಿಸಿದೆ.. ಇಂತಹ ಸಂದರ್ಭದಲ್ಲಿ ಪುನಃ ಚುನಾವಣೆ ಎದುರಾಗಿದೆ.. ಪಂಚ ರಾಜ್ಯಗಳಲ್ಲಿ ಚುನಾವಣೆ ಎದುರಾಗಿದೆ.. ಚುನಾವಣೆ ಗೆಲ್ಲಲೇಬೇಕು ಎನ್ನುವ ಕಾರಣಕ್ಕೆ ಇನ್ನಿಲ್ಲದ ಪ್ರಚಾರದ ಅಬ್ಬರವೂ ನಡೆದಿದೆ.. ಭರವಸೆಗಳ ಜಾತ್ರೆಯೇ ಶುರುವಾಗಿ ಹೋಗಿದೆ..

2014ರಲ್ಲಿ ದೇಶಾದ್ಯಂತ ದೊಡ್ಡ ಸಂಚಲನವೇ ಶುರುವಾಗಿತ್ತು.. ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಸುನಾಮಿಯೇ ಎದ್ದಿತ್ತು.. ಎಲ್ಲೆಲ್ಲೂ ನರೇಂದ್ರ ಮೋದಿಯವರ ಭಾಷಣಗಳಿಗೆ, ಅವರ ಭರವಸೆಗಳಿಗೆ ಜನ ಮನಸೋತು ಹೋಗಿದ್ದರು.. ಯಾಕಂದ್ರೆ, ಅವರ ಒಂದೊಮದು ಭರವಸೆಯೂ ಹೊಸ ಜಗತ್ತನ್ನೇ ತೋರಿಸುತ್ತಿತ್ತು..

ಭಾರತದ ಪ್ರತಿಯೊಬ್ಬರಿಗೂ 15 ಲಕ್ಷ ಕೊಡ್ತಿವಿ.. ವಿದೇಶಗಳಲ್ಲಿ ಇರುವ ಕಪ್ಪು ಹಣವನ್ನ ತರ್ತೀವಿ ಎನ್ನುವ ಭಾಷಣ ಮಾಡುತ್ತಲೇ ಭಾರತವನ್ನ ಗೆದ್ದವರು ನರೇಂದ್ರ ಮೋದಿ.. ಆದ್ರೆ, ಅವರು ಹೇಳಿದ ಭರವಸೆ ಈಡೇರ್ತಾ.. ಯಾರಿಗೆ 15 ಲಕ್ಷ ಬಂದಿದೆ.. ಯಾವ ಭರವಸೆ ಈಡೇರಿದೆ.. ಪ್ರಿಯ ವೀಕ್ಷಕರೇ ಯಾರು ಕಪ್ಪು ಹಣದ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನ ಹೇಳಿದ್ದರೋ ಅದೇ ವ್ಯಕ್ತಿ ಭಾರತದ ಕೋಟಿ ಕೋಟಿ ಜನರಿಂದ ಪಿಎಂ ಕೇರ್ಸ್​ ಫಂಡ್​ ಹೆಸರಿನಲ್ಲಿ ಹಣ ಸಂಗ್ರಹ ಮಾಡಿದ್ದಾರೆ.

ಕೊರೊನಾ ಸಮಯದಲ್ಲಿ ಜನರಿಂದ ಕೋಟಿ ಕೋಟಿ ಹಣ ಸಂಗ್ರಹ ಮಾಡಿದವರು ಕೆಲವೇ ದಿನಗಳಲಿ ಆ ಹಣವನ್ನ ತಮ್ಮ ಖಾಸಗಿ ನಿಧಿ ಎಂದು ಘೋಷಿಸಿಕೊಂಡಿದ್ದಾರೆ.. ಜಸ್ಟ್​ ಯೋಚನೆ ಮಾಡಿ, ಯಾವ ವ್ಯಕ್ತಿ ವಿದೇಶಗಳಲ್ಲಿರುವ ಕಪ್ಪು ಹಣವನ್ನ ತರುವೆ ಎಂದು ಹೇಳಿದ್ದರೋ, ಅದೇ ವ್ಯಕ್ತಿ ಈಗ ದೇಶದ 130 ಕೋಟಿ ಜನ ದಾನದ ರೂಪದಲ್ಲಿ ಕೊಟ್ಟ ಹಣವನ್ನ ಪ್ರೈವೇಟ್​ ಫಂಡ್​ ಎಂದು ಘೋಷಿಸಿಕೊಂಡಿದ್ದಾರೆ.. ಎಷ್ಟು ಹಣ ಕಲೆಕ್ಟ್​ ಆಗಿದೆ, ಎಷ್ಟು ಖರ್ಚು ಮಾಡಿದ್ರು, ಎಷ್ಟು ಉಳಿದಿದೆ ಅನ್ನೋ ಲೆಕ್ಕ ಕೊಡೋಕೆ ರೆಡಿ ಇಲ್ಲ.. ಈಗ ಹೇಳಿ ಇವರು ಕಪ್ಪು ಹಣವನ್ನ ತರುತ್ತಾರೋ ಅಥವಾ ಜನರ ಹಣವನ್ನೂ ಜೇಬಿಗೆ ಹಾಕಿಕೊಳ್ತಾರೋ..?

Also read:  ಸಿಎಂ ಭೇಟಿ ಬಳಿಕ ಯತ್ನಾಳ್​​ ಇಂಟ್ರಸ್ಟಿಂಗ್​ ಹೇಳಿಕೆ: ನಿರಾಣಿ ಎಂದಿಗೂ ಸಿಎಂ ಆಗಲ್ಲ ಎಂದ ವಿಜಯಪುರ ಶಾಸಕ

ಇಂಟರೆಸ್ಟಿಂಗ್​ ಏನಂದ್ರೆ ಇದೇ ನರೇಂದ್ರ ಮೋದಿಯವರು ಪ್ರಧಾನಿಯಾಗುವ ಮುನ್ನ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎನ್ನುವ ಭರವಸೆ ಕೊಟ್ಟಿದ್ದರು.. ಆದ್ರೆ ಪರಿಸ್ಥಿತಿ ಏನಾಗಿದೆ.. ದೇಶಾದ್ಯಂತ ಕೋಟಿ ಕೋಟಿ ಯುವಕರು ಇದ್ದ ಉದ್ಯೋಗಗಳನ್ನೇ ಕಳೆದುಕೊಂಡು ಮನೆಯಲ್ಲಿ ಕುಳಿತಿದ್ದಾರೆ.. 30 ಸಾವಿರಕ್ಕೂ ಹೆಚ್ಚು ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಸಾವಿರಾರು ಉದ್ಯಮಿಗಳು ಈ ದೇಶದ ಸಹವಾಸವೇ ಬೇಡ ಎಂದು ದೇಶವನ್ನೇ ತೊರೆದಿದ್ದಾರೆ.. ಉದ್ಯಮಿಗಳೇ ದೇಶ ತೊರೆದರೆ ಉದ್ಯೋಗ ಸೃಷ್ಟಿಯಾಗುತ್ತಾ.. ಇದಕ್ಕೆಲ್ಲಾ ಹೊಣೆ ಯಾರು..?

ನೋಟ್​ ಬ್ಯಾನ್​ ಎನ್ನುವ ಒಂದು ನಿರ್ಧಾರ ದೇಶದ ಅರ್ಥ ವ್ಯವಸ್ಥೆಯ ಮೇಲೆ ಉಂಟು ಮಾಡಿದ ಪರಿಣಾಮವನ್ನ ಇಂದಿಗೂ ಅರ್ಥಶಾಸ್ತ್ರಜ್ಞರೇ ಜೀರ್ಣಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ.. ಇನ್ನು ಜಿಎಸ್​ಟಿ ಎನ್ನುವ ತೆರಿಗೆ ದೇಶದ ಉದ್ಯಮಿಗಳನ್ನ ಹಣ್ಣುಗಾಯಿ ನೀರುಗಾಯಿ ಮಾಡಿಬಿಟ್ಟಿದೆ.. ಯಾವ ಮಟ್ಟಿಗೆ ಅಂದ್ರೆ, ದೇಶದಲ್ಲಿ ಜನ ಹವಾಯಿ ಚಪ್ಪಲಿ ಖರೀದಿಸೋಕೂ ನೂರು ಬಾರಿ ಯೋಚನೆ ಮಾಡುವಂತಾ ಸ್ಥಿತಿ ನಿರ್ಮಾಣವಾಗಿದೆ.. ಯಾಕಂದ್ರೆ, ಚಪ್ಪಲಿ ಮೇಲಿನ ಜಿಎಸ್​ಟಿ ಪ್ರಮಾಣವನ್ನೂ 5 ರಿಂದ 12 ಪರ್ಸೆಂಟ್​ಗೆ ಏರಿಕೆ ಮಾಡಿದ್ದಾರೆ.. ಯಾರು ಹವಾಯಿ ಚಪ್ಪಲಿ ಹಾಕುವವರ ಬಗ್ಗೆ ಮಾತನಾಡಿದ್ದರೋ, ಯಾರು ಹವಾಯಿ ಚಪ್ಪಲಿ ಹಾಕುವವರು ವಿಮಾನದಲ್ಲಿ ಒಡಾಡಬೇಕು ಎಂದಿದ್ದರೋ, ಅವರೇ ಇಂದು ಜನರನ್ನ ಬರಿಗಾಲಿನಲ್ಲಿ ನಡೆಯುವಂತೆ ಮಾಡಿಬಿಟ್ಟಿದ್ದಾರೆ.

Also read:  ಸಿಆರ್​​ಪಿಎಫ್ ಕ್ಯಾಂಪಸ್ ಬಳಿ ಭೀಕರ ಅಪಘಾತ: ಸಬ್ ಇನ್ಸ್ಪೆಕ್ಟರ್ ಸೇರಿ ಇಬ್ಬರ ದುರ್ಮರಣ

ಈ ಕಾರಣಕ್ಕಾಗಿಯೇ.. ಈ ಕಾರಣಗಳಿಗಾಗಿಯೇ ದೇಶದ ಜನ ಆಕ್ರೋಶಗೊಂಡಿರುವುದು.. ದೇಶಾದ್ಯಂತ ಆರ್ಥಿಕ ಮುಗ್ಗಟ್ಟು ಎದುರಾಗಿರುವುದು.. ಪಂಚ ರಾಜ್ಯಗಳ ಚುನಾವಣೆಯ ಸಂದರ್ಭದಲ್ಲಿ ಎದುರಾದ ಈ ಜನಾಕ್ರೋಶವನ್ನ ಹೇಗಾದ್ರೂ ಮಟ್ಟ ಹಾಕಲೇಬೇಕು.. ಜನರ ಗಮನವನ್ನ ಹೇಗಾದ್ರೂ ಮಾಡಿ ಬೇರೆಡೆ ಸೆಲೆಯಲೇಬೇಕು.. ಅದಕ್ಕಾಗಿ ಏನ್​ ಮಾಡೋದು.. ಏನ್​ ಮಾಡೋದು.. ಯೋಚನೆ ಬರಲೇಬೇಕಲ್ಲಾ… ಯಾಕಂದ್ರೆ ಪಾಕಿಸ್ತಾನ ಸೈಲೆಂಟ್​ ಆಗಿದೆ.. ಕಾಶ್ಮೀರ ವಿಚಾರ ಮುಗಿದಿದೆ.. ಬಾಂಗ್ಲಾ ಬಾಯಿ ಮುಚ್ಚಿಕೊಂಡಿದೆ.. ಚೀನಾ ವಿರುದ್ಧ ಧ್ವನಿ ಎತ್ತೋಕೆ ಆಗುತ್ತಿಲ್ಲ.. ಈ ಪರಿಸ್ಥಿತಿಯಲ್ಲಿ ಎದುರಾಗಿದ್ದೇ ರೈತ ಚಳವಳಿ.

ದೇಶಾದ್ಯಂತ ರೈತರ ಆಕ್ರೋಶ ಭುಗಿಲೆದ್ದಿದೆ.. ಇದೇ ಕಾರಣಕ್ಕೆ ಪಂಜಾಬ್​ನಲ್ಲಿ ಪ್ರಧಾನಿಗಳ ವಿರುದ್ಧ ರೈತರು ಪ್ರತಿಭಟನೆ ನಡೆಸಿದರು.. ಪ್ರಧಾನಿಗಳ ದಾರಿಯನ್ನೇ ಅಡ್ಡ ಹಾಕಿದರು.. ಇದನ್ನ ದೇಶದ ಜನರಿಗೂ ನಂಬಿಸಲಾಯ್ತು.. ತನಿಖೆ ನಡೆಸೋಕೂ ಮೊದಲೇ ಪ್ರಧಾನಿಗಳ ಹತ್ಯೆಗೆ ಸ್ಕೆಚ್​ ಹಾಕಲಾಗಿತ್ತು ಎನ್ನುವ ಹೊಸ ಹೊಸ ಕಥೆಗಳನ್ನ ಜನರ ಮುಂದಿಡಲಾಯ್ತು.. ಪ್ರಿಯ ವೀಕ್ಷಕರೇ, ನಿಮಗೆಲ್ಲಾ ನೆನಪಿರಲಿ.. ನರೇಂದ್ರ ಮೋದಿಯವರು ಪ್ರಧಾನಮಂತ್ರಿಗಳಾದ ಮೇಲೆ ಹಿಂದೆಂದೂ ಇರದಂತಾ ಭದ್ರತೆ ನಮ್ಮ ಪ್ರಧಾನಿಗಳಿಗೆ ಸಿಕ್ಕಿದೆ.. 8 ಸಾವಿರದ 400 ಕೋಟಿ ಬೆಲೆ ಏರ್​ ಇಂಡಿಯಾ ಒನ್​ ಹೆಸರಿನ ವಿಮಾನವನ್ನ ನಮ್ಮ ಹಿಂದಿನ ಯಾವ ಪ್ರಧಾನಿಯೂ ಬಳಕೆ ಮಾಡಿರಲಿಲ್ಲ.. 12 ಕೋಟಿ ಮೌಲ್ಯದ ಬಾಂಬ್​ ಸಿಡಿದರೂ ರಕ್ಷಣೆ ನೀಡುವ ಅದ್ಭುತ ಕಾರನ್ನ ಹಿಂದಿನ ಯಾವ ಪ್ರಧಾನಿಗಳೂ ಬಳಕೆ ಮಾಡಿರಲಿಲ್ಲ.. ಮೋದಿಯವರು ಬಂದ ಬಳಿಕ ಎನ್​ಎಸ್​ಜಿಯ ಕ್ಷಮತೆಯನ್ನ ದ್ವಿಗುಣಗೊಳಿಸಿದ್ದಾರೆ.. ಅದರಲ್ಲೂ ಗೃಹಮಂತ್ರಿ ಅಮಿತ್​ ಶಾ ಅವರು ದೇಶದ ಭದ್ರತೆಯ ವಿಚಾರದಲ್ಲಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ.. ಹೀಗಿದ್ರೂ.. ಹೀಗಿದ್ರೂ.. ಇಷ್ಟೆಲ್ಲಾ ಇದ್ರೂ ಪಂಜಾಬ್​ ರಾಜ್ಯದಲ್ಲಿ ಪ್ರಧಾನಿಗಳ ಪ್ರಾಣಕ್ಕೆ ಆಪತ್ತು ಎದುರಾಗಿತ್ತಾ..?

Also read:  ಮನೆಯ ಬಳಿಯಿದ್ದ ಮೇಕೆ ಹೊತ್ತೊಯ್ದ ಚಿರತೆ: ಗ್ರಾಮಸ್ಥರಲ್ಲಿ ಆತಂಕ

NSG ಭದ್ರತೆಯಲ್ಲಿ ಸಾಗುವ ಭಾರತದ ಪ್ರಧಾನಿಗಳ ಸಂಚಾರವನ್ನು ನಮ್ಮ ರೈತರು ತಡೆಯೋಕಾಗುತ್ತಾ.. ದೇಶದಲ್ಲಿ ಹಿಂದೆಂದೂ ಆಗದಂತಾ ಭದ್ರತಾ ವೈಫಲ್ಯ ಈಗ ಆಗುತ್ತಾ.. ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತೆ.. ರೈತರು ಪ್ರತಿಭಟನೆ ಮಾಡಿದ್ದರು ಅನ್ನೋ ವೀಡಿಯೋಗಳಿಗಿಂತ ಹೆಚ್ಚಾಗಿ ಬಿಜೆಪಿ ಬಾವುಟದ ವೀಡಿಯೋಗಳೇ ಹರಿದಾಡುತ್ತಿವೆ.. ಗೋ ಬ್ಯಾಕ್​ ಮೋದಿ ಎನ್ನುವ ಘೋಷಣೆಗಿಂತ, ನರೇಂದ್ರ ಮೋದಿ ಜಿಂದಾಬಾದ್​ ಎನ್ನುವ ಘೋಷಣೆಗಳೇ ಹೆಚ್ಚಾಗಿ ಕೇಳುತ್ತಿವೆ.. ಹೀಗಿದ್ರೂ ಪ್ರಧಾನಿಗಳು ಪ್ರಾಣ ಉಳಿಸಿಕೊಂಡು ಬಂದಿದ್ದಾರೆ ಎಂದು ಹೇಳಿದ್ದಾರೆ.. ಯಾವ ಕಾರಣಕ್ಕಾಗಿ ಇದೆಲ್ಲಾ.. ಪಂಚ ರಾಜ್ಯಗಳ ಚುನಾವಣೆಯಲ್ಲಿ ಎದುರಾಗುವ ಜನಾಕ್ರೋಶದ ಸದ್ದಡಗಿಸಲೋ ಅಥವಾ ಜನರ ಗಮನವನ್ನ ಬೇರೆಡೆ ಸೆಳೆಯಲೋ.. ಯೋಚನೆ ಮಾಡಲೇಬೇಕು.. ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾಯಮೂರ್ತಿಗಳ ವರದಿಯಿಂದ ಸತ್ಯ ಬಯಲಾಗಲೇಬೇಕು.. ಯಾಕಂದ್ರೆ ಇದು ಭಾರತ ದೇಶದ ಪ್ರಧಾನಿಗಳ ಭದ್ರತೆಯ ವಿಚಾರ.. ಈ ವಿಚಾರದಲ್ಲಿ ಎಂದಿಗೂ ತಪ್ಪು ನಡೆದಿಲ್ಲ.. ಇವತ್ತೂ ನಡೆಯಬಾರದೂ, ಮುಂದೆಯೂ ಅದಕ್ಕೆ ಅವಕಾಶ ಸಿಗಬಾರದು.. ARE WE STUPID..?

Latest article