Monday, November 29, 2021

ಪಿಎಂ ಕೇರ್ಸ್ ಫಂಡ್​ಗೂ ಸರ್ಕಾರಕ್ಕೂ ಸಂಬಂಧವೇ ಇಲ್ಲ..! ARE WE STUPID..?

Must read

ನೀವೇನಾದ್ರೂ ಪಿಎಂ ಕೇರ್ಸ್​​ ಫಂಡ್​ಗೆ ಹಣ ಹಾಕಿದ್ದೀರಾ. ಅಥವಾ ಪಿಎಂ ಕೇರ್ಸ್​ ಫಂಡ್​ಗೆ ಹಣ ಹಾಕಬೇಕು ಎನ್ನುವ ಯೋಚನೆ ಮಾಡಿದ್ದೀರಾ. ಆದ್ರೆ ಅದಕ್ಕೂ ಮುನ್ನ ಒಂದು ಬಾರಿ ಯೋಚನೆ ಮಾಡಿ. ಯಾಕಂದ್ರೆ, ಪಿಎಂ ಕೇರ್ಸ್​ ಫಂಡ್​ಗೂ ನಮ್ಮ ಭಾರತ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. Actually ಹೇಳಬೇಕು ಅಂದ್ರೆ, ಪಿಎಂ ಕೇರ್ಸ್​ ಫಂಡ್​ಗೂ ಪ್ರಧಾನಮಂತ್ರಿಗಳಿಗೂ ಸಂಬಂಧವಿಲ್ಲ. ಇದನ್ನ ನಾವು ಹೇಳ್ತಾ ಇಲ್ಲ. ಸ್ವತಃ ಪ್ರಧಾನ ಮಂತ್ರಿಗಳ ಕಾರ್ಯಾಲಯವೇ ಸ್ಪಷ್ಟಪಡಿಸಿದೆ. ಅದೂ ಕೂಡ ದೆಹಲಿ ಹೈಕೋರ್ಟ್​ ಮುಂದೆ.

ಪಿಎಂ ಕೇರ್ಸ್​ ಫಂಡ್​ನ್ನ ಸರ್ಕಾರದ ಸಂಸ್ಥೆಯ ಅಂಗ ಎಂದು ಭಾವಿಸಿದ ಪ್ರತಿಯೊಬ್ಬರು ಕೂಡ ಇದನ್ನ ಕೇಳಿ ಆಶ್ಚರ್ಯಗೊಳ್ಳುತ್ತಾರೆ. ಆದರೆ ಪಿಎಂ ಕೇರ್ಸ್​ ಫಂಡ್​ಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪ್ರಧಾನ ಮಂತ್ರಿಗಳ ಕಚೇರಿಯೇ ಸ್ಪಷ್ಟಪಡಿಸಿದೆ. ಪಿಎಂ ಕೇರ್ಸ್​ ಫಂಡ್​ಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್​ನಲ್ಲಿ ನಡೆದ ವಿಚಾರಣೆಯ ವೇಳೆ ಸ್ವತಃ ಪ್ರಧಾನಮಂತ್ರಿ ಕಾರ್ಯಾಲಯದ ಹೆಚ್ಚುವರಿ ಕಾರ್ಯದರ್ಶಿ ಪ್ರದೀಪ್​ ಕುಮಾರ್​ ಶ್ರೀವಾಸ್ತವ್​ ಈ ಮಾಹಿತಿಯನ್ನ ನೀಡಿದ್ದಾರೆ.

ಪಿಎಂ ಕೇರ್ಸ್​ಗೂ ಸರ್ಕಾರಕ್ಕೂ ಸಂಬಂಧವಿಲ್ಲ..!

ಪಿಎಂ ಕೇರ್ಸ್​ ಫಂಡ್​ ಒಂದು ಪ್ರೈವೆಟ್​ ಫಂಡ್​ ಆಗಿದ್ದು, ಇದಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಪಿಎಂ ಕೇರ್ಸ್​ ಫಂಡ್​ನ್ನ ಓರ್ವ ಖಾಸಗಿ ಆಡಿಟರ್ ಮೂಲಕ ಪಾರ್ದರ್ಶಕತೆಯಿಂದ ಆಡಿಟ್​ ಮಾಡಲಾಗುತ್ತಿದೆ. ಹೀಗಾಗಿ ಇದು ಅನುಚ್ಛೇದ 12ರ ಅಡಿಯಲ್ಲಿ ಅಂದರೆ ಆರ್​ಟಿಐ ಅಡಿಯಲ್ಲಿ ಬರುವುದಿಲ್ಲ. ಈ ಸಂಸ್ಥೆಗೆ ಬರುವ ಹಣದ ಮಾಹಿತಿಯನ್ನ ವೆಬ್​ಸೈಟ್​ ಮೂಲಕ ನೀಡಲಾಗುತ್ತಿದೆ.             — ಪ್ರದೀಪ್​ ಕುಮಾರ್​ ಶ್ರೀವಾಸ್ತವ್​, ಹೆಚ್ಚುವರಿ ಕಾರ್ಯದರ್ಶಿ, ಭಾರತ ಸರ್ಕಾರ

ಕೊರೊನಾ ಸಮಯದಲ್ಲಿ ದೇಶದಲ್ಲಿ ಸಾಕಷ್ಟು ಜನ ಆರ್ಥಿಕ ಸಮಸ್ಯೆಯಿಂದ ಕಂಗೆಟ್ಟಿದ್ದರು. ಅಂತಹ ಸಂದರ್ಭದಲ್ಲಿ ಪಿಎಂ ಕೇರ್ಸ್​ ಫಂಡ್​ನ್ನ ಸರ್ಕಾರದವರೇ ನೋಡಿಕೊಳ್ಳುತ್ತಿದ್ದಾರೆ ಎನ್ನುವ ನಂಬಿಕೆಯಿಂದ ದೇಶದ 130 ಕೋಟಿ ಜನ ಬಡವರ ಸೇವೆಗೆಂದು ತಮಗಾದಷ್ಟು ಹಣವನ್ನ ದಾನ ಮಾಡಿದ್ದರು. ಪುಟ್ಟ ಪುಟ್ಟ ಮಕ್ಕಳು ತಾವು ಕೂಡಿಟ್ಟ ಪಿಗ್ಗಿ ಬ್ಯಾಂಕ್​ನಿಂದ ಕೂಡ ಹಣವನ್ನ ನೀಡಿದ್ದರು. ಆ ಮೂಲಕ ತಾವು ಭಾರತ ದೇಶದ ಪ್ರಧಾನಮಂತ್ರಿಗಳ ಫಂಡ್​ಗೆ ಹಣ ನೀಡಿದ್ದೆವು ಎಂದೇ ಭಾವಿಸಿದ್ದರು. ಆದರೆ ಇಂದು ಪಿಎಂ ಕೇರ್ಸ್​ ಫಂಡ್​ ಭಾರತ ದೇಶದ ಪ್ರಧಾನ ಮಂತ್ರಿಗಳದ್ದು ಅಲ್ಲ ಎಂದು ಸರ್ಕಾರವೇ ಸ್ಪಷ್ಟಪಡಿಸಿದೆ. ಅದು ನರೇಂದ್ರ ಮೋದಿ ಎನ್ನುವ ಖಾಸಗಿ ವ್ಯಕ್ತಿಯ ಫಂಡ್​ ಎಂದು ಹೇಳಿದೆ.

Also read:  ಪಿಎಂ ಕೇರ್ಸ್​ ಫಂಡ್​ನಲ್ಲಿ ಮೋಸ ನಡೆಯಿತಾ? ಮಾತಾಡಿ ಪ್ಲೀಸ್​..! - ARE WE STUPID..?

ಕಳೆದ ಒಂದೂವರೆ ವರ್ಷದಿಂದ ಸುಮ್ಮನಿದ್ದ ಸರ್ಕಾರ ಈಗ ದಿಢೀರ್​ ಎಂದು ಪಿಎಂ ಕೇರ್ಸ್​ ಫಂಡ್​ಗೂ ಸರ್ಕಾರಕ್ಕೂ ಸಂಬಂಧವೇ ಇಲ್ಲ ಎಂದು ಹೇಳಿದೆ. ಇದೊಂದು ಖಾಸಗಿ ಫಂಡ್​ ಎಂದು ಸ್ಪಷ್ಟಪಡಿಸಿದೆ. ಆದರೆ ಒಂದೂವರೆ ವರ್ಷದ ಹಿಂದೆ ಪಿಎಂ ಕೇರ್ಸ್​ ಫಂಡ್​ ಬಗ್ಗೆ ಸರ್ಕಾರವೇ ಪ್ರಚಾರ ಮಾಡಿತ್ತು. ಪ್ರಧಾನಮಂತ್ರಿಗಳ ಫೋಟೋ ಹಾಕಲಾಗಿತ್ತು. ಪ್ರಧಾನಿಗಳ ಕಚೇರಿಯ ವಿಳಾಸವನ್ನೇ ನೀಡಲಾಗಿತ್ತು. ಅದರಂತೆ ಸಾವಿರಾರು ಕೋಟಿ ರೂಪಾಯಿ ಹಣವನ್ನ ಜನರಿಂದ ವಸೂಲಿ ಮಾಡಲಾಗಿತ್ತು. ಆದರೆ ಈಗ ಅದಕ್ಕೂ ಸರ್ಕಾರಕ್ಕೂ ಸಂಬಂಧವೇ ಇಲ್ಲ ಎನ್ನುತ್ತಿದ್ದಾರೆ. ಪಿಎಂ ಕೇರಸ್​ ಫಂಡ್​ ಎನ್ನುವುದು ಖಾಸಗಿ ವ್ಯಕ್ತಿಯ ​ಟ್ರಸ್ಟ್​ ಎನ್ನುತ್ತಿದ್ದಾರೆ.. ಇದು ದೇಶಪ್ರೇಮದ ಹೆಸರಿನಲ್ಲಿ ನಡೆಯುತ್ತಿರುವ ದೋಖಾ ಅಲ್ಲವೇ..? ARE WE STUPID..?

Also read:  ಪಿಎಂ ಕೇರ್ಸ್ ಫಂಡ್​ಗೆ ಸಂಬಂಧಿಸಿದ ದಾಖಲೆ ಪಡೆಯುವುದು ಹೇಗೆ ಗೊತ್ತಾ..?

Latest article