Tuesday, October 26, 2021

ದೇಶ ಸಂಕಷ್ಟದಲ್ಲಿದ್ದಾಗ ಸಂಗ್ರಹಿಸಿದ್ದ ಹಣ ಜನಕ್ಕಲ್ಲದೇ ಸ್ವಂತಕ್ಕಾ..? – ARE WE STUPID..?

Must read

ಇವತ್ತಿಗೆ ಇದೇ ದೇಶದ ಪ್ರಜೆ ಏನಾಗಿದ್ದಾನೆ ಗೊತ್ತಾ? ಅವನ ಅಸಹಾಯಕತೆಗಳು, ಕಷ್ಟ ಮತ್ತು ದಾರಿದ್ರ್ಯಗಳ ಬಗ್ಗೆ ಅರಿವಿದೆಯೇ? ಅವನು ಮನೆಯಲ್ಲಿ ತಂದೆಯನ್ನ, ತಾಯಿಯನ್ನ ಸಹೋದರ, ಸಹೋದರಿಯನ್ನ ಕಳೆದುಕೊಂಡಿದ್ದಾರೆ. ಅವರು ಕೋವಿಡ್​ ಪೀಡಿತರಾದಾಗ ಹೇಗಾದರೂ ಅವರನ್ನ ಉಳಿಸಿಕೊಳ್ಳಬೇಕೆಂದು ಸಿಕ್ಕ ಸಿಕ್ಕ ಆಸ್ಪತ್ರೆಗಳಿಗೆ ಅಲೆದಿದ್ದಾನೆ. ಸಾಲಸೋಲ ಮಾಡಿ ಆಸ್ಪತ್ರೆಯ ಬಿಲ್​ ತುಂಬಿದ್ದಾನೆ. ಪರಿಸ್ಥಿತಿ ಕೈಮೀರಿ ಅವರು ಸತ್ತೇ ಹೋದಾಗ ಅವರ ಸಂಸ್ಕಾರಕ್ಕೂ ಹಣವಿಲ್ಲದೇ ಪರದಾಡಿದ್ದಾನೆ. ಇದೇ ವೇಳೆ ಲಾಕ್​ಡೌನ್​ ಮತ್ತು ಆರ್ಥಿಕ ಕುಸಿತದ ಕಾರಣದಿಂದ ಅವನು ಕೆಲಸ ಕಳೆದುಕೊಂಡಿದ್ದಾನೆ ಇಲ್ಲವೇ ಅವನ ಸಂಬಳ ಕಡಿತವಾಗಿದೆ.

ನಗರ ಪ್ರದೇಶಗಲ್ಲಿ ಬದುಕು ದುಸ್ತರವಾದಾಗ ಹಳ್ಳಿಗಳ ಕಡೆ ಗಂಟು ಮೂಟೆ ಕಟ್ಟಿಕೊಂಡು ಹೊರಟಿದ್ದಾನೆ. ಮಾಡಿದ ಸಾಲಕ್ಕೆ ಬಡ್ಡಿಕಟ್ಟಲೂ ಇಂದಿಗೂ ಪರದಾಡುತ್ತಿದ್ದಾನೆ. ತನ್ನವರನ್ನ ಕಳೆದುಕೊಂಡ ಭಾವನಾತ್ಮಕ ಹೊಡೆತ ಒಂದು ಕಡೆಯಾದರೆ ಆರ್ಥಿಕ ನಷ್ಟ ಅವನನ್ನ ಜರ್ಝರಿತಗೊಳಿಸಿದೆ. ಮೇಲೆ ಹೇಳಿದ ಎಲ್ಲ ಸನ್ನಿವೇಶಗಳೂ ಕೋವಿಡ್​ ನಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಶುರುವಾದ ಸನ್ನಿವೇಶಗಳಲ್ಲವೇ? ಈ ರೋಗ ಮತ್ತು ರೋಗದ ಪರಿಣಾಮಗಳ ವಿರುದ್ಧವಾಗಿ ಹೋರಾಡಲೆಂದೇ ಕಲೆಕ್ಟ್​ ಮಾಡಿದ ಫಂಡ್​ ಅಲ್ಲವೇ ಪಿಎಂ ಕೇರ್ಸ್ ಫಂಡ್! ಈಗ ಹೇಳಿ ಇಷ್ಟು ಕಷ್ಟಗಳಿಗೆ ಇದೇ ಫಂಡ್​ ಯಾವ ಬಿಡಿಗಾಸನ್ನ ಕೊಟ್ಟಿದೆ ಎಂದು.

ಇನ್ನೊಂದು ಕಡೆ ಅಪ್ಪ ಅಮ್ಮನನ್ನ ಕಳೆದುಕೊಂಡು ಅನಾಥರಾದ ಅದೆಷ್ಟೋ ಮಕ್ಕಳಿಗೆ ಸಿಗಬೇಕಿದ್ದ ಪರಿಹಾರ ಸಿಗಲೇ ಇಲ್ಲ. ಕೇಂದ್ರ ಬಿಡಿಗಾಸಿನ ಪರಿಹಾರ ಕೊಡದೆ, ಪರಿಹಾರ ಕೊಡುವುದು ರಾಜ್ಯ ಸರ್ಕಾರಗಳ ಹೆಗಲಿಗೆ ಹಾಕಲಿಲ್ಲವೇ? SDRF ಫಂಡ್​ನಿಂದ ರಾಜ್ಯಗಳು ತಲಾ 50,000 ಪರಿಹಾರ ಕೊಡಲಿ ಎಂದು ಸುಪ್ರೀಂ ಕೋರ್ಟ್​ನ ಮುಂದೆ ಅಫಿಡವಿಟ್​ ಹಾಕಲಿಲ್ಲವೇ? ಹಾಗಾದರೆ ಪಿಎಂ ಕೇರ್ಸ್​ ಫಂಡ್​ ಸಂಗ್ರಹಿಸಿದ ಹಣ ಎಲ್ಲಿ ಹೋಯಿತು? ಪರಿಹಾರದ ಜವಾಬ್ದಾರಿಯನ್ನ ರಾಜ್ಯ ಸರ್ಕಾರಗಳಿಗೆ ವಹಿಸುವುದಿದ್ದರೆ ಪಿಎಂ ಕೇರ್ಸ್​ ಫಂಡ್​ಗಾಗಿ ಚಂದಾ ಎತ್ತಿದ್ದು ಏಕೆ? ಅದನ್ನೂ ರಾಜ್ಯ ಸರ್ಕಾರಗಳಿಗೆ ಬಿಟ್ಟು ಸುಮ್ಮನಾಗಬೇಕಿತ್ತಲ್ಲವೇ? ಹಣ ಸಂಗ್ರಹಕ್ಕಾದರೆ ಕೇಂದ್ರ, ಖರ್ಚಿಗಾದರೆ ರಾಜ್ಯ ಸರ್ಕಾರಗಳು ಹೊಣೆಯಾಗಬೇಕೆ? ಜೊತೆಗೆ ಈ ಹಣ ಕೇಂದ್ರ ಸರ್ಕಾರದ ಬೊಕ್ಕಸಕ್ಕೂ ಹೋಗದೇ, ಖಾಸಗಿ ಟ್ರಸ್ಟ್​ನ ಖಜಾನೆಗೆ ಹೋಗಿ ಸೇರುವ ಮೂಲಕ ದೇಶಕ್ಕೆ ಮತ್ತು ಜನಕ್ಕೆ ಇವರು ವಂಚಿಸಿಲ್ಲವೇ? ARE WE STUPID..?

Also read:  ಪಿಎಂ ಕೇರ್ಸ್ ಫಂಡ್ ಹೇಗೆ ಖಾಸಗಿ ವ್ಯಕ್ತಿಯ ಫಂಡ್ ಆಗುತ್ತೆ..? - ARE WE STUPID..?

More articles

Latest article