Tuesday, October 26, 2021

ಪ್ರಧಾನಿಗಳೇ ದೇಶದ ಜನರ ಹೆಸರಲ್ಲಿ ಕಟ್ಟಿದ ಫಂಡ್​ ಪಿಎಂ ಕೇರ್ಸ್..​! – ಯಾವ ಜನರಿಗೂ ಕೇರ್​ ಮಾಡದೇ ಖಾಸಗಿ ಟ್ರಸ್ಟ್​ ಪಾಲಾಯಿತು..! – ARE WE STUPID..?

Must read

ಪಿಎಂ ಕೇರ್ಸ್​ ಫಂಡ್​. ಇದು 21ನೇ ಶತಮಾನದ ಅಚ್ಚರಿ. 20ನೇ ಶತಮಾನದ ಆರಂಭದಲ್ಲಿಯೂ ಕೆಲ ಸಾಂಕ್ರಾಮಿಕ ರೋಗಗಳು ದೇಶ ಮತ್ತು ವಿಶ್ವವನ್ನ ಕಾಡಿ ಕಂಗೆಡಿಸಿದ್ದವು. ಆದರೆ ಆಗ ಯಾರೂ ಇದೇ ಸಾಂಕ್ರಾಮಿಕ ಕಾಯಿಲೆಗಳ ಹೆಸರಲ್ಲಿ ಜನರಿಂದ ಹಣ ವಸೂಲಿ ಮಾಡಿ ತಮ್ಮ ಖಾಸಗಿ ಖಾತೆಗಳಿಗೆ ಅಥವಾ ಟ್ರಸ್ಟ್​ಗಳಿಗೆ ಹಣವನ್ನ ವರ್ಗಾಯಿಸಿಕೊಂಡಿರಲಿಲ್ಲ. ಆದರೆ 21ನೇ ಶತಮಾನದಲ್ಲಿ ದೇಶ ಕಂಡು ಕೇಳರಿಯದ ಅಚ್ಚರಿಯೊಂದು ನಡೆದು ಹೋಗಿದೆ. ಅದು ಪಿಎಂ ಕೇರ್ಸ್​ ಫಂಡ್​ ಎನ್ನುವ ಅಚ್ಚರಿ. ದೇಶದ ಪ್ರಧಾನ ಮಂತ್ರಿಗಳು ತಮ್ಮ ಪ್ರೀತಿಯ ದೇಶವಾಸಿಗಳಿಗೆ ಕರೆಕೊಟ್ಟು, ಸಾಂಕ್ರಾಮಿಕ ಕಾಯಿಲೆ ಎಲ್ಲೆಡೆ ವ್ಯಾಪಿಸಿದೆ, ನಾವು ಇದರ ವಿರುದ್ಧ ಈಗ ಮತ್ತು ಭವಿಷ್ಯದಲ್ಲಿ ಹೋರಾಡಬೇಕಿದೆ. ಹೀಗಾಗಿ ಜನ ಅಪಾರ ಪ್ರಮಾಣದಲ್ಲಿ ನೆರವು ನೀಡಬೇಕೆಂದು ಕೇಳಿಕೊಂಡಿದ್ದರು.

ದೇಶದ ಪ್ರಧಾನಿಯೊಬ್ಬರು ಈ ರೀತಿ ಕೇಳಿಕೊಂಡಾಗ ಮತ್ತು ಪಿಎಂ ಕೇರ್ಸ್​ ಫಂಡ್​ ಎನ್ನುವ ಹೆಸರಿನಲ್ಲಿಯೇ ಪಿಎಂ ಎನ್ನುವ ಶಬ್ಧವಿದ್ದಾಗ ಅದು ಸರ್ಕಾರದ ಬೊಕ್ಕಸಕ್ಕೆ ಸೇರುವ ಹಣವೆಂದೇ ಜನ ನಂಬಿದರು. ತಮ್ಮ ಶಕ್ತಿಯ ಅನುಸಾರ ದೇಣಿಗೆ ಕೊಟ್ಟರು. ತಾವು ಮೋಸ ಹೋಗುತ್ತಿರುವ ಬಗ್ಗೆ ಅವರಿಗೆ ಸಣ್ಣ ಸುಳಿವು ಕೂಡ ಇರಲಿಲ್ಲ. ಅಷ್ಟು ನೀಟಾಗಿ ಪಿಎಂ ಕೇರ್ಸ್​ ಫಂಡ್​ ಎನ್ನುವ ಖಾಸಗಿ ಟ್ರಸ್ಟ್​, ತನ್ನ ಪ್ಲಾನ್​ ಅನ್ನ ಎಕ್ಸಿಕ್ಯೂಟ್​ ಮಾಡಿತ್ತು.

ದೇಶದ ಪ್ರಧಾನಿಯೊಬ್ಬರು ಒಂದು ಖಾಸಗಿ ಟ್ರಸ್ಟ್​ ಪರ ಅರಿವಿಲ್ಲದೇ ವಕಾಲತ್ತು ವಹಿಸಿದ್ದರೆ ಅದು ಕಣ್ತಪ್ಪಿನಿಂದ ಆಯ್ತೇನೋ ಎನ್ನಬಹುದಿತ್ತು. ಆದರೆ ಇದು ಹಾಗಲ್ಲ, ಇಲ್ಲಿ ಎಲ್ಲವೂ ಪ್ರಜ್ಞಾಪೂರ್ವಕವಾಗಿ ನಡೆದಿದೆ. ಇದಕ್ಕೆ ಬೇಕಾದಷ್ಟು ಸಾಕ್ಷ್ಯಗಳೂ ಇವೆ. ದೇಶದ ಪ್ರೈಮ್​ ಮಿನಿಸ್ಟರ್​ ಎದ್ದು ಹೋಗಿ ಒಂದು ಖಾಸಗಿ ಟ್ರಸ್ಟ್​ಗೆ ಮುಖ್ಯಸ್ಥರಾಗಿದ್ದಾರೆ. ಅದೇ ಟ್ರಸ್ಟ್​ಗೆ ತಾವೇ ಚೇರ್​ ಪರ್ಸನ್​ ಆಗಿ ಸಹಿಯನ್ನೂ ಮಾಡಿದ್ದಾರೆ. ಜೊತೆಗೆ ಅವರು ಮುಖ್ಯಸ್ಥರಾಗಿರುವ ಪಿಎಂ ಕೇರ್ಸ್​ ಫಂಡ್​ ಎನ್ನುವ ಟ್ರಸ್ಟ್​ನಲ್ಲಿ ಖಾಸಗಿ ವ್ಯಕ್ತಿಗಳೆನೆಸಿಕೊಂಡವರು ಯಾರೂ ಇಲ್ಲ. ಸರ್ಕಾರದ ಭಾಗವಾಗಿರುವ ದೇಶದ ರಕ್ಷಣಾ ಮಂತ್ರಿ, ಗೃಹ ಮಂತ್ರಿ ಮತ್ತು ವಿತ್ತ ಮಂತ್ರಿ. ಇವರೆಲ್ಲರೂ ಇದೇ ಟ್ರಸ್ಟ್​ನ ಟ್ರಸ್ಟಿಗಳು ಎಂದರೆ ಎಲ್ಲವೂ ಪ್ರೀ ಪ್ಲಾನ್ಡ್​ ಅಲ್ಲವೇ..?

Also read:  ರೈತರ ಮೇಲೆ ಕಾರು ಹರಿಸಿದ ಸಚಿವರ ಪುತ್ರ; ಪ್ರಿಯಾಂಕ ಗಾಂಧಿ ಬಂಧನ ಮತ್ತು ಪ್ರಜಾಪ್ರಭುತ್ವ..!

ಅಸಲಿಗೆ ಇಲ್ಲಿ ನಡೆದಿರೋದೇನು..?

ದೇಶದ ಪ್ರಧಾನಿಗಳು ದೇಶದ ಜನಗಳಿಂದ, ದೇಶಕ್ಕಾಗಿ ದುಡ್ಡು ಸಂಗ್ರಹ ಮಾಡಿದ ಪ್ರಕರಣವಲ್ಲವೇ ಇದು. ಆದರೆ ದೇಶದ ಪ್ರಧಾನಿಗಳು ಜನಗಳಿಗೆ ಕೋವಿಡ್​ಗಾಗಿ ಹಣ ಕೊಡಿ ಎಂದು ಕರೆ ಕೊಟ್ಟಿದ್ದೂ ನಿಜ. ಇದೇ ಜನ ಅಪಾರವಾಗಿ ದೇಣಿಗೆಯನ್ನ ಪಿಎಂ ಕೇರ್ಸ್​ ಫಂಡ್​ ಕಡೆಗೆ ಹರಿಸಿದ್ದೂ ನಿಜ. ಅದು ಪಿಎಂ ಕೇರ್ಸ್​ ಫಂಡ್​ಗೆ ಬಂದಿದ್ದೂ ನಿಜ. ಆದರೆ ಪಿಎಂ ಕೇರ್ಸ್​ ಫಂಡ್​ ಮಾತ್ರ ಸರ್ಕಾರದ್ದಲ್ಲ. ಅದು ಖಾಸಗಿ ಟ್ರಸ್ಟ್​. ಇಷ್ಟೇ ವಿಷಯ. ಅಂದರೆ ದೇಶದ ಪ್ರಧಾನಿಗಳಾಗಿ ತೀರಾ ತಮ್ಮ ಖಾಸಗಿ ಟ್ರಸ್ಟ್​ಗೆ ಹಣ ಸಂಗ್ರಹಿಸಲು ದೇಶದ ಮತ್ತು ತಮ್ಮ ಘನತೆಯ ಪ್ರಧಾನಿ ಹುದ್ದೆಯ ದುರುಪಯೋಗ ಪಡಿಸಿಕೊಂಡಂತಲ್ಲವೇ..? ಅಥವಾ ಹೊಸ ದೇಶ ಪ್ರೇಮ ಹೀಗೂ ಪ್ರಕಟವಾಗುವುದೇ..? ಗೊತ್ತಿಲ್ಲ.

More articles

Latest article