Tuesday, October 26, 2021

ಪಿಎಂ ಕೇರ್ಸ್ ಫಂಡ್ ಸರ್ಕಾರದ ನಿಧಿ ಅಲ್ಲ..! – ವ್ಯಾಕ್ಸಿನ್​ಗೆ ಮೂರು ದರ ನಿಗದಿ ಮಾಡಿದ್ದು ಇವರೇ..! – ARE WE STUPID..?

Must read

ದೇಶದ ಪ್ರಧಾನಿಗಳಾದ ನೀವು ಹೀಗೆ ಮಾಡಿಬಿಟ್ಟಿರಾ? ನಿಮ್ಮಿಂದ ಇಂತಹ ಕೆಲಸ ನಡೆದುಹೋಯಿತೇ? ಜನ ಸರ್ಕಾರಕ್ಕೆಂದು ಕೊಟ್ಟ ದಾನದ ಹಣವನ್ನ ಖಾಸಗಿ ಟ್ರಸ್ಟ್​ಗೆ ವರ್ಗಾಯಿಸಿಕೊಂಡಿರಾ? ಸರ್ಕಾರದ ಹೆಸರು, ಪ್ರಧಾನ ಮಂತ್ರಿ ಹೆಸರಲ್ಲಿ ದೇಶದ ಜನಗಳ ಬಳಿ ಹಣ ಕೇಳಿ ಅದನ್ನ ಕೇವಲ ನಾಲ್ಕು ಜನ ಮಾತ್ರ ಇರುವ ಖಾಸಗಿ ಟ್ರಸ್ಟ್​ ಹೆಸರಿಗೆ ಕಳಿಸಿದಿರಾ? ಇಂತಹ ಪ್ರಶ್ನೆಗಳನ್ನ ಲಕ್ಷಾಂತರ ಜನ ಕೇಳಿಕೊಳ್ಳುತ್ತಿದ್ದಾರೆ. ಎಸ್​ ಇವರೇ, ದೇಶದ ಪ್ರಧಾನಮಂತ್ರಿಗಳೇ ಸೃಷ್ಟಿ ಮಾಡಿದ್ದ ಫಂಡ್​ ಹೆಸರು ಪಿಎಂ ಕೇರ್ಸ್​ ಫಂಡ್​! ಕೋವಿಡ್​ ವಿರುದ್ಧ ಹೋರಾಡಲು ಈ ಫಂಡ್​ ಅನ್ನ ಬಳಸಲಾಗುತ್ತದೆ ಎಂದಿದ್ದು ಇವರೇ. ಆದರೆ ಈ ಫಂಡ್​ ಕೋವಿಡ್​ ವಿರುದ್ಧ ಹೋರಾಡಲೇ ಇಲ್ಲ. ಯಾವ ಔಷಧಿಗೂ ಬಳಸಲಿಲ್ಲ. ಕೋವಿಡ್​ ನಿಂದ ಯಾರು ಮೃತಪಟ್ಟರೂ ಈ ಫಂಡ್​ನಿಂದ ಬಿಡಿಗಾಸಿನ ಪರಿಹಾರ ಸಿಗಲಿಲ್ಲ. ಏಕೆ ಗೊತ್ತಾ? ಈ ಪಿಎಂ ಕೇರ್ಸ್​ ಫಂಡ್​ ಅಸಲಿಗೆ ಸರ್ಕಾರದ ನಿಧಿಯೇ ಅಲ್ಲ. ಸರ್ಕಾರದ ಹೆಸರು ಹೇಳಿ ಸ್ಥಾಪಿತವಾದ ಖಾಸಗಿ ಟ್ರಸ್ಟ್​ ಇದು. ಇದಕ್ಕಿಂತ ಶಾಕಿಂಗ್​ ನ್ಯೂಸ್​ ಇನ್ನೇನಿದೆ. ಇದು ಶಾಕಿಂಗ್​ ನ್ಯೂಸ್​ ಅಲ್ಲ. ಇದೊಂದು ಆಘಾತ. ದೇಶದ ಜನರ ನಂಬಿಕೆಗೆ ಬಿದ್ದ ದೊಡ್ಡ ಪೆಟ್ಟು. ನಮ್ಮ ಪ್ರಧಾನಿಗಳೇ ಇಂತಹ ಕೆಲಸಕ್ಕೆ ಇಳಿದುಬಿಟ್ಟರಲ್ಲಾ ಎಂಬ ಆಘಾತದಿಂದ ಇನ್ನೂ ಯಾರೂ ಹೊರ ಬಂದಿಲ್ಲ.

ಇದೇ ದೇಶದಲ್ಲಿಯೇ ಕೋವಿಡ್​ ರಣಕೇಕೆ ಹಾಕುತ್ತಿದ್ದಾಗ ಜನಗಳ ಜೀವ ಉಳಿಸುವ ಸಂಜೀವಿನಿ ವ್ಯಾಕ್ಸಿನ್​ ಅನ್ನ ಮಾರಾಟಕ್ಕಿಟ್ಟಿದ್ದು. ಹಣವಿದ್ದವರು ವ್ಯಾಕ್ಸಿನ್​ ಕೊಂಡುಕೊಂಡು ಜೀವ ಉಳಿಸಿಕೊಳ್ಳಲಿ ಎಂಬ ನೀತಿ ಅಲ್ಲವಾ ಇದು. ಒಂದು ದೇಶ ಮೆಡಿಕಲ್​ ಎಮರ್ಜೆನ್ಸಿ ಸಂದರ್ಭದಲ್ಲಿದ್ದಾಗ ಜೀವ ಉಳಿಸುವ ವ್ಯಾಕ್ಸಿನ್​ ಅನ್ನ ಮಾರಾಟ ಮಾಡಿಕೊಂಡು ಕೂರುವುದಿಲ್ಲ. ಆಗ ಬಡವ ಶ್ರೀಮಂತ ಎಲ್ಲರೂ ಒಂದೇ. ಎಲ್ಲರಿಗೂ ವ್ಯಾಕ್ಸಿನ್​ ಸಿಗಬೇಕು, ಅದು ಉಚಿತವಾಗಿರಬೇಕು ಮತ್ತು ಅದು ದೇಶದ ಕರ್ತವ್ಯ ಕೂಡ. ಹೀಗಿದ್ದಾಗ, ಬೇರೆ ಬೇರೆ ವಯೋಮಾನದವರಿಗೆ ಕೇಂದ್ರ, ರಾಜ್ಯ ಸರ್ಕಾರಗಳು ವ್ಯಾಕ್ಸಿನ್​ ನೀಡಬೇಕು ಎಂಬ ನಿಯಮ ಬಂದಿದ್ದು ಇದೇ ದೇಶದಲ್ಲಿಯೇ. ಕೇಂದ್ರ ಸರ್ಕಾರಕ್ಕೆ 150  ರೂಪಾಯಿಗೆ ರಾಜ್ಯ ಸರ್ಕಾರಕ್ಕೆ 300 ರೂಪಾಯಿಗೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ 600 ರೂಪಾಯಿಗೆ ವ್ಯಾಕ್ಸಿನ್​ ದರ ನಿಗದಿಯಾಗಬೇಕೆಂದು ಮಾಡಿದ್ದು ಕೂಡ ಇದೇ ದೇಶದಲ್ಲಿಯೇ. ಇದು ವಿಧಿಯಾಟವಲ್ಲ ಖುದ್ದು ಕೇಂದ್ರ ಸರ್ಕಾರವೇ ನಡೆದುಕೊಂಡ ರೀತಿ. ಇದೇ ವಿಷಯ ಸುಪ್ರೀಂ ಕೋರ್ಟ್​ಗೆ ಬಂದು ಚಾಟಿ ಬೀಸಿದ ಮೇಲೆ ವ್ಯಾಕ್ಸಿನ್​ ಫ್ರೀ ಫ್ರೀ ಎಂದು ಬಿಟ್ಟಿತು ಕೇಂದ್ರ. ಅಷ್ಟು ಹೊತ್ತಿಗಾಗಲೇ ಭರ್ತಿಯಾಗಿ ವ್ಯಾಕ್ಸಿನ್ ಮಾರಾಟವಾಗಿತ್ತು.

Also read:  ಸೋನು ಸೂದ್ ಸಂಗ್ರಹಿಸಿದ ಹಣದ ಲೆಕ್ಕ ಸಿಕ್ಕಿದೆ..! ಪಿಎಂ ಕೇರ್ಸ್ ಫಂಡ್ ಲೆಕ್ಕ ಏನಾಯ್ತು..? – ARE WE STUPID..?

ಪಿಎಂ ಕೇರ್ಸ್​ ಫಂಡ್​ ಶುರುವಾಗಿ ಹತ್ತಿರ ಹತ್ತಿರ ಒಂದು ವರ್ಷವಾಗಿತ್ತು. ಪಿಎಂ ಕೇರ್ಸ್​ ಫಂಡ್​ನಲ್ಲಿ ಯಥೇಚ್ಛವಾಗಿ ಹಣ ಸಂಗ್ರಹವಾಗಿತ್ತು. ಆದರೆ ಜನಗಳ ವ್ಯಾಕ್ಸಿನ್​ಗಾಗಿ ಇಲ್ಲಿಂದ ಹಣ ಕೊಟ್ಟಿರಲಿಲ್ಲ. ಏಕೆ ಗೊತ್ತಾ? ಇದು ಸರ್ಕಾರದ ನಿಧಿ ಎಂದು ಬಿಂಬಿಸಿಕೊಂಡಿದ್ದ ಖಾಸಗಿ ಟ್ರಸ್ಟ್​ ಆಗಿತ್ತು. ಇದೇ ಕಾರಣಕ್ಕೆ ಪಿಎಂ ಕೇರ್ಸ್​ ಫಂಡ್​ ಎನ್ನುವ ಪ್ರಧಾನಿ ಹೆಸರಲ್ಲಿನ ನಿಧಿಯಿಂದ ದೇಶದ ಜನತೆಗೆ ಬಿಡಿಗಾಸಿನ ನೆರವಾಗಲಿಲ್ಲ. ಖಾಸಗಿ ಟ್ರಸ್ಟ್​ಗೆ ಹಣ, ಹೆಸರು ಮಾತ್ರ ದೇಶದ ಪ್ರಧಾನ ಮಂತ್ರಿಯದ್ದು. ಹೇಗಿದೆ ಐಡಿಯಾ? ಇದಲ್ವಾ ದೇಶದ ಜನತೆಗೆ ಶಾಕ್​ ಟ್ರೀಟ್ಮೆಂಟ್​? ARE WE STUPID..?

More articles

Latest article