Tuesday, October 26, 2021

ಜನಗಳ ಹಣವನ್ನ ಸಂಕಷ್ಟ ಕಾಲದಲ್ಲಿ ನುಂಗಿಹಾಕಿತೇ ಪಿಎಂ ಕೇರ್ಸ್..? – ಉಪರಾಷ್ಟ್ರಪತಿಗಳೂ ಈ ಖಾಸಗಿ ಟ್ರಸ್ಟ್ಗೆ ಹಣ ಹಾಕಿ ಎಂದರಲ್ಲಾ..? – ARE WE STUPID..?

Must read

ಸರ್ಕಾರದ ನಿಧಿಯೆಂದರೆ ಅಲ್ಲಿ ಸೂರ್ಯನ ಬೆಳಕಿನಂತ ಪಾರದರ್ಶಕತೆ ಇರಬೇಕು. ಜನಗಳ ಸೇವೆಗೆಂದೇ ನಿಧಿಯನ್ನ ಕಲೆಕ್ಟ್​ ಮಾಡಿದ್ದರೆ ಅದು ಸರ್ಕಾರದ ಖಜಾನೆಯಲ್ಲಿಯೇ ಇರಬೇಕಲ್ಲವೇ? ಸರ್ಕಾರದ ಖಜಾನೆಯಲ್ಲಿ ಹಣವನ್ನ ಇಡದೇ ದೇಶದ ಪ್ರಧಾನಮಂತ್ರಿಗಳು ಪಿಎಂ ಕೇರ್ಸ್​ ಫಂಡ್​ಗೆ ಕರೆಕೊಟ್ಟು ಹಣ ಸಂಗ್ರಹಿಸಿ ಅದನ್ನ ತಾವೇ ಮುಖ್ಯಸ್ಥರಾಗಿರುವ ಖಾಸಗಿ ಟ್ರಸ್ಟ್​ಗೆ ಹಾಕಿಕೊಂಡರೆ ಇವರ ಉದ್ದೇಶದ ಬಗ್ಗೆಯೇ ಅನುಮಾನ ಹುಟ್ಟುವುದಿಲ್ಲವೇ?

ದೇಶದ ಪ್ರಧಾನಮಂತ್ರಿಗಳ ಕಾರ್ಯಾಲಯ, ದೇಶದ ಪ್ರೆಸ್​ ಇನ್ಫರ್ಮೇಷನ್​ ಬ್ಯೂರೋ ಕಡೆಯಿಂದಲೇ ಪಿಎಂ ಕೇರ್ಸ್​ ಫಂಡ್​ಗೆ ದಾನ ಕೊಡಿ ಎಂದು ಮನವಿ ಮಾಡಿರಲಿಲ್ಲವೇ? ಕೇಂದ್ರ ಪ್ರೆಸ್ ಇನ್ಫರ್ಮೇಷನ್​ ಬ್ಯೂರೋದಿಂದ ಮಾಹಿತಿ ಹೊರಟರೇ ಅದು ಸರ್ಕಾರದದ್ದೆಂದೇ ಅರ್ಥೈಸಿಕೊಳ್ಳಬೇಕಲ್ಲವೇ? ಹೀಗೆ ತಮ್ಮ ವ್ಯಾಪ್ತಿಗೆ ಬರುವ ಎಲ್ಲ ಇಲಾಖೆಗಳನ್ನೂ ಬಳಸಿಕೊಂಡು ಇಲ್ಲವೇ ದುರ್ಬಳಕೆ ಮಾಡಿಕೊಂಡು ಹಣ ಎತ್ತಿದ್ದು ಪಿಎಂ ಕೇರ್ಸ್​ ಫಂಡ್​ಗಾಗಿ. ಆಮೇಲೆ ಗೊತ್ತಾಗಿದ್ದು ಇದೊಂದು ಖಾಸಗಿ ಟ್ರಸ್ಟ್​ ಎಂದು. ಎಂಥ ವಿಪರ್ಯಾಸ..!

ಪಿಎಂ ಕೇರ್ಸ್​ ಫಂಡ್​ ವಿಷಯದಲ್ಲಿ ಇನ್ನೂ ಒಂದು ಹಂತಕ್ಕೆ ಮುಂದೆ ಹೋಗಿ ಇವರು ಜನರನ್ನ ನಂಬಿಸಿದ್ದಾರೆ. ದೇಶದ ಉಪರಾಷ್ಟ್ರಪತಿಗಳು, ಕ್ಯಾಬಿನೆಟ್​ ಮಿನಿಸ್ಟರ್​ ಮತ್ತು ಕ್ಯಾಬಿನೆಟ್​ ಸಚಿವರು ಕೂಡ ರಾಜ್ಯಸಭೆಯ ಸದಸ್ಯರಿಗೆ ಮತ್ತು ಸರ್ಕಾರಿ ನೌಕರರಿಗೆ ಪಿಎಂ ಕೇರ್ಸ್​ ಫಂಡ್​ ಗೆ ಹಣ ನೀಡುವಂತೆ ಕೋರಿಕೊಂಡಿದ್ದರು. ದೇಶದ ಉಪರಾಷ್ಟ್ರಪತಿಗಳೇ ಪಿಎಂ ಕೇರ್ಸ್​ಗೆ ದೇಣಿಗೆ ಕೊಡಿ ಎಂದ ಮೇಲೆ ಜನ ಇದನ್ನು ಸರ್ಕಾರದ ನಿಧಿಯೆಂದೇ ಭಾವಿಸಿದ್ದಾರೆ. ಆದರೆ ಆಮೇಲೆ ಎಲ್ಲವೂ ಉಲ್ಟಾ-ಪಲ್ಟಾ..! ದೇಶದ ಉಪರಾಷ್ಟ್ರಪತಿಗಳನ್ನೂ ಇವರ ಖಾಸಗಿ ಟ್ರಸ್ಟ್​ನ ಪ್ರಚಾರ ಮತ್ತು ದೇಣಿಗೆ ಹಣಕ್ಕೆ ಬಳಸಿಕೊಂಡುಬಿಟ್ಟರಲ್ಲಾ ಎಂಬುದು ಅತ್ಯಂತ ಆಘಾತ ಮತ್ತು ನೋವಿನ ವಿಷಯವಲ್ಲವೇ?

ಖಾಸಗಿ ಉದ್ದೇಶಕ್ಕೆ ದೇಶದ ಪ್ರಧಾನಿ, ರಕ್ಷಣಾ ಸಚಿವ, ಗೃಹ ಸಚಿವ ಮತ್ತು ವಿತ್ತ ಸಚಿವೆ ಒಟ್ಟಾಗಿ ಒಂದು ಟ್ರಸ್ಟ್​ ಮಾಡಿಕೊಂಡಿದ್ದಾರೆ. ಅದರ ಹೆಸರು ಪಿಎಂ ಕೇರ್ಸ್​ ಫಂಡ್​. ನೋಡುವುದಕ್ಕೆ ಸರ್ಕಾರದ ನಿಧಿಯಂತೆ ಕಾಣಬೇಕು. ಜನ ಯಥೇಚ್ಛವಾಗಿ ಹಣವನ್ನ ದಾನ ಕೊಡಬೇಕು. ಕೊಟ್ಟ ಹಣವೆಲ್ಲಾ ಇವರ ಪಾಲಾಗಬೇಕು! ARE WE STUPID..?

Also read:  ದೇಶದ ಪ್ರಧಾನಮಂತ್ರಿಗಳು ಖಾಸಗಿ ವ್ಯಕ್ತಿಯಾಗ್ತಾರಾ..? ಸ್ವಾತಂತ್ರ್ಯಗೊಂಡು 75 ವರ್ಷಗಳ ಬಳಿಕ ಬಯಲಾದ ಸತ್ಯ..! – ARE WE STUPID..?

More articles

Latest article