Tuesday, October 26, 2021

ದೇಶದ ಸಂವಿಧಾನಕ್ಕೆ ಪಿಎಂ ಕೇರ್ಸ್ ಫಂಡ್ ಎನ್ನು ಖಾಸಗಿ ಟ್ರಸ್ಟ್ ಡೋಂಟ್ ಕೇರ್..! – ARE WE STUPID..?

Must read

ಪಿಎಂ ಕೇರ್ಸ್​ ಫಂಡ್​ ಹೆಸರಿನ ಟ್ರಸ್ಟ್​ ರಚನೆಯಾಗಿರುವುದು 2020 ಮಾರ್ಚ್​ 27ರಂದು. ಟ್ರಸ್ಟ್​ ಡೀಡ್​ನಲ್ಲಿ ಇದರ ಬಗ್ಗೆ,  ಇಲ್ಲಿನ ಟ್ರಸ್ಟಿಗಳ ಬಗ್ಗೆ ಎಲ್ಲ ವಿವರಗಳೂ ಇವೆ. ದೇಶದ ಪ್ರಧಾನ ಮಂತ್ರಿಳ ಕಾರ್ಯಾಲಯ ಈ ಟ್ರಸ್ಟ್​ನ ವಿಳಾಸವೆಂದೂ ಅಲ್ಲಿ ನಮೂದಾಗಿದೆ. ಸಾಲದ್ದಕ್ಕೆ ಸರ್ಕಾರಕ್ಕೆ ಮಾತ್ರ ಸಿಗುವ GOV.IN ಎಂಬ URL ವಿಳಾಸವನ್ನೂ ಪ್ರಭಾವ ಬಳಸಿ ಇವರು ಪಡೆದುಕೊಂಡಿದ್ದಾರೆ. ಇದೇ ಟ್ರಸ್ಟ್​ ಅನ್ನ ದೆಹಲಿಯ ಸಬ್​ ರಿಜಿಸ್ಟ್ರಾರ್,​ ರಿಜಿಸ್ಟರ್​ ಮಾಡಿಕೊಟ್ಟಿದ್ದಾರೆ ಕೂಡ ಎಂದ ಮೇಲೆ  ಇವರು ಇದೆಲ್ಲವನ್ನೂ ವ್ಯವಸ್ಥಿತವಾಗಿ ಜನಗಳಿಗೆ ಮೋಸ ಮಾಡಲೆಂದೇ ಮಾಡಿಕೊಂಡಿದ್ದಾರೆ ಎಂದಾಯಿತಲ್ಲವೇ..? ಜನಗಳ ಹಣವನ್ನ ಖಾಸಗಿಯಾಗಿ ಲಪಟಾಯಿಸಲು ಒಂದು ಸಿಂಡಿಕೇಟ್​ ರಚನೆ ಮಾಡಿಕೊಂಡಿದ್ದಾರೆ ಎಂದಾಯಿತಲ್ಲವೇ..? ಈಗ ಏನೂ ಗೊತ್ತಿಲ್ಲದವರಂತೆ, ತಾವೂ ಯಾರಿಗೂ ಉತ್ತರವನ್ನೇ ಕೊಡಬೇಕಿಲ್ಲವೆಂಬಂತೆ. ಈ ಟ್ರಸ್ಟ್ ಖಾಸಗಿ ಎಂದು ಬಿಟ್ಟರೆ ಎಲ್ಲವೂ ಮುಗಿದು ಹೋಯಿತು. ದೇಶ ಪ್ರೇಮವನ್ನ ಗುತ್ತಿಗೆ ತೆಗೆದುಕೊಂಡವರಂತೆ ಮಾತನಾಡುವ ಇವರ ಈ ಟ್ರಸ್ಟ್​ನ ಹಣ ಸರ್ಕಾರದ್ದೆಂದು ಘೋಷಣೆ ಆಗಬೇಕಲ್ಲವೇ..?

ಈ ಟ್ರಸ್ಟ್​ ಡೀಡ್​ನಲ್ಲಿ ಇನ್ನೊಂದು ಆಘಾತಕಾರಿ ವಿಷಯವಿದೆ. ಈ ಟ್ರಸ್ಟ್​ ಅನ್ನು, ಭಾರತದ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಭಾರತದ ಸಂಸತ್ತು ಮಾಡುವ ಯಾವುದೇ ಕಾನೂನಿನ ಅಡಿಯಲ್ಲಿಯೂ ಈ ಟ್ರಸ್ಟ್​ ರಚನೆಯಾಗಿಲ್ಲ. ಅಲ್ಲದೇ ಯಾವುದೇ ರಾಜ್ಯ ಶಾಸನ ಸಭೆಯ ನಿಯಮಗಳ ಪ್ರಕಾರವೂ ಈ ಟ್ರಸ್ಟ್​ ರಚನೆಯಾಗಿಲ್ಲ. ಈ ಟ್ರಸ್ಟ್​ನ ಮೇಲೆ ಯಾವುದೇ ರಾಜ್ಯದ ಅಥವಾ ರಾಜ್ಯಗಳ ಅಥವಾ ಕೇಂದ್ರ ಸರ್ಕಾರದ ಪ್ರತ್ಯಕ್ಷ ಅಥವಾ ಪರೋಕ್ಷ ನಿಯಂತ್ರಣವಿರುವುದಿಲ್ಲ ಎಂಬ ನಿಯಮವನ್ನ ಮಾಡಿಕೊಳ್ಳಲಾಗಿದೆ.

ಈ ಟ್ರಸ್ಟ್​ ಇಷ್ಟರ ಮಟ್ಟಿಗೆ ಖಾಸಗಿ ಎನ್ನುವ ಬದಲು, ನಮಗೆ ಈ ದೇಶದ ಸಂವಿಧಾನ ಅನ್ವಯವಾಗುವುದಿಲ್ಲ, ಈ ದೇಶದ ಸಂಸತ್ತು ರಚಿಸಲ್ಪಟ್ಟ ಕಾನೂನು ನಮಗೆ ಅನ್ವಯವಾಗುವುದಿಲ್ಲ. ಯಾವುದೇ ರಾಜ್ಯ ಸರ್ಕಾರದ ಅಥವಾ ಸರ್ಕಾರಗಳ ನಿಯಮಗಳಿಗೆ ನಾವು ಡೋಂಟ್​ ಕೇರ್​..! ಒಟ್ಟಿನಲ್ಲಿ ನಾವು ಈ ದೇಶಕ್ಕೆ ಸೇರಿದವರೇ ಅಲ್ಲ, ನಾವು ಅನ್ಯಗ್ರಹ ಜೀವಿಗಳು ಎಂದು ಹೇಳಬಹುದಿತ್ತಲ್ಲ. ದೇಶದ ಸಂವಿಧಾನ, ಸಂಸತ್ತು, ಶಾಸನಸಭೆ, ಕಾನೂನು ಮತ್ತು ನೀತಿ ನಿಯಮ ಇದು ಯಾವುದಕ್ಕೂ ಸೇರದವರು ಸರ್ವಾಧಿಕಾರಿಗಳಾಗಿರಬೇಕು ಇಲ್ಲವೇ ಏಲಿಯನ್​ ಆಗಿರಬೇಕು..

Also read:  ತೆರಿಗೆ ಕಟ್ಟಿ ಕಟ್ಟಿ ನಮ್ಮ ನಿಮ್ಮ ಜೀವನವೇ ಮುಗಿದು ಹೋಗುತ್ತೆ.. ನಾವು ಕಟ್ಟಿದ ತೆರಿಗೆ ಹಣ ಯಾರ ಜೇಬು ಸೇರ್ತಿದೆ ಗೊತ್ತಾ..?

ಈ ಪಿಎಂ ಕೇರ್ಸ್​ ಫಂಡ್​ನಲ್ಲಿರುವ ರಾಷ್ಟ್ರ ಲಾಂಛನಕ್ಕೆ ಒಂದು ಗೌರವವಿದೆ. ಪ್ರಧಾನ ಮಂತ್ರಿ ಎನ್ನುವ ಪದವಿಗೆ ಒಂದು ಮರ್ಯಾದೆ, ಗೌರವ ಮತ್ತು ಘನತೆ ಇದೆ. PMO ಅಂದರೆ ಪ್ರಧಾನ ಮಂತ್ರಿಗಳ ಕಾರ್ಯಾಲಯ. ಈ ವಿಳಾಸಕ್ಕೆ ವಿಶ್ವಮಟ್ಟದ ಗೌರವಿದೆ. GOV.IN ಎಂಬ URL ಸರ್ಕಾರದ ಸಂಸ್ಥೆಗಳಿಗಲ್ಲದೇ ಇನ್ಯಾರಿಗೂ ಸಿಗುವ ಸಾಧ್ಯತೆಯೇ ಇಲ್ಲ. ಇವೆಲ್ಲವೂ ಇದ್ದಮೇಲೆಯೇ ಇದು ಸರ್ಕಾರದ್ದೆನ್ನುವ ವಿಶ್ವಾಸ ಸಾರ್ವಜನಿಕರಿಗೆ ಮೂಡುವುದು. ಇಂತಹ ಎಲ್ಲ ವಿಷಯಗಳನ್ನೂ ಬಳಸಿ, ನಂಬಿಸಿ ಜನರಿಂದ ಹಣ ಕಲೆಕ್ಟ್​ ಮಾಡಲಾಗಿದೆ ಈಗ ಈ  ನಿಧಿ ಖಾಸಗಿ ಟ್ರಸ್ಟ್​ ಪಾಲಾಗಲು  ಹೇಗೆ  ಸಾಧ್ಯ..? ARE WE STUPID..?

More articles

Latest article