Tuesday, October 26, 2021

ಪಿಎಂ ಕೇರ್ಸ್ ಫಂಡ್ ಎನ್ನುವ ರಹಸ್ಯ ಬಯಲಾಗುತ್ತೋ ಇಲ್ವೋ..? – ARE WE STUPID..?

Must read

ಪಿಎಂ ಕೇರ್ಸ್​ ಫಂಡ್​ ಸರ್ಕಾರಕ್ಕೆ ಸೇರಿದ ನಿಧಿ ಅಲ್ಲ ಎಂದು ಬಿಟ್ಟಿದೆ ಸರ್ಕಾರ. ದೆಹಲಿ ಕೋರ್ಟ್​ ಮುಂದೆ ಈ ಹೇಳಿಕೆ ಕೊಟ್ಟಾಗಿದೆ. ಇದು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಬರುವುದಿಲ್ಲ. ಏಕೆಂದರೆ ಇದು ಸರ್ಕಾರದ ನಿಧಿ ಅಲ್ಲವೇ ಅಲ್ಲಾ ಎಂದಿದ್ದಾರೆ ಕೇಂದ್ರ ಸರ್ಕಾರದ ಪ್ರತಿನಿಧಿ ಪ್ರದೀಪ್​ ಕುಮಾರ್. ಅಲ್ಲಿಗೆ ಮುಗಿಯಿತಲ್ಲಾ..! ಇದು ನಂಬಿಕೆ ದ್ರೋಹದ ಹೊಸ ಮುಖವಲ್ಲವೇ..? ನಯವಂಚನೆಯ ಹೊಸ ವೇಷ ಇದಲ್ಲವೇ..? ಜನಗಳಿಂದ ಕೋವಿಡ್​ಗಾಗಿ ಸಂಗ್ರಹಿಸಿದ ಈ ಹಣ ಇದೀಗ ದೆಹಲಿ ನ್ಯಾಯಾಲಯದಲ್ಲಿ ವಾದ ಪ್ರತಿವಾದಕ್ಕೆ ಕಾರಣವಾಗಿದೆ.

ಮೊಟ್ಟ ಮೊದಲಿಗೆ ದೇಶದ ಪ್ರಧಾನ ಮಂತ್ರಿಗಳು ಪಿಎಂ ಕೇರ್ಸ್​ ಫಂಡ್​ಗೆ ದೇಣಿಗೆ ಕೊಟ್ಟ ದೇಶ ವಿದೇಶದ ಜನರಲ್ಲಿ ಬೇಷರತ್​ ಕ್ಷಮೆ ಕೇಳಬೇಕು. ತಾವು ದೇಶದ ಹೆಸರು ಹೇಳಿ, ಕೋವಿಡ್​ ಎನ್ನುವ ಸಾಂಕ್ರಾಮಿಕ ರೋಗದ ಹೆಸರಲ್ಲಿ ಚಂದಾ ಹಣವನ್ನ ಎತ್ತಿ ಕೊನೆಗೆ ಅದನ್ನ ಖಾಸಗಿ ಟ್ರಸ್ಟ್​ಗೆ ಸೇರಿಸಿರುವ ಮಹಪರಾಧದ ಆರೋಪಕ್ಕೆ ಈ​ ಕ್ಷಮೆ ಕೇಳಬೇಕು. ಈ ಪ್ರಕರಣ ನಿಜಕ್ಕೂ ಕ್ಷಮೆಗೂ ಅರ್ಹವಾಗಿದ್ದರೆ ಅದನ್ನ ಜನತೆ ತೀರ್ಮಾನಿಸಲಿ. ಪಿಎಂ ಕೇರ್ಸ್​ ಫಂಡ್​ ಅನ್ನ ಕೂಡಲೇ ಕೇಂದ್ರ ಸರ್ಕಾರಕ್ಕೆ ಸೇರಿದ ನಿಧಿಯೆಂದೂ ದೇಶದ ಪ್ರಧಾನಿ ಘೋಷಿಸಬೇಕು. ಜೊತೆಗೆ ಸರ್ಕಾರದ ಹೆಸರು ಹೇಳಿ ನಿಧಿ ಕಲೆಕ್ಟ್​ ಮಾಡಿದ ಇಡೀ ವ್ಯವಹಾರದ ಬಗ್ಗೆ ಇಂಚಿಂಚು ಮಾಹಿತಿಯನ್ನೂ ಜನಗಳ ಮುಂದಿಡಬೇಕಲ್ಲವೇ..?

ಎಲ್ಲವೂ ಸರ್ಕಾರದ್ದೆಂದು ನಂಬಿಸಿ ಜನಗಳ ಮುಂದೆ ಹಣಕ್ಕೆ ಬೇಡಿಕೆ ಇಟ್ಟು ಜನ ಹಣ ಕೊಟ್ಟ ಮೇಲೆ ಖಾಸಗಿ ಟ್ರಸ್ಟ್​ಗೆ ಸಾಗಿಸಿರುವ ಈ ಪ್ರಕರಣ ದೇಶ ಹಿಂದೆಂದೂ ಕೇಳಿರಲಿಲ್ಲ. ಇದೇ ಪ್ರಕರಣ ಇದೀಗ ನ್ಯಾಯಾಲಯದ ಕಟಕಟೆಯಲ್ಲಿದೆ. ದೇಶದ ಪ್ರಧಾನಿಯೊಬ್ಬರು ಇಂತಹ ಕೆಲಸ ಮಾಡಿದ್ದಾರೆಂದರೆ ಇದನ್ನ ಊಹಿಸಿಕೊಳ್ಳುವುದಕ್ಕೂ ಕಷ್ಟ. ಯಾವ ದೇಶದಲ್ಲಿಯೂ, ದೇಶದ ಅಧ್ಯಕ್ಷರೋ, ಪ್ರಧಾನಿಗಳೋ ಇಂತಹ ಕೆಲಸವನ್ನ ಮಾಡಿಲ್ಲ. ಬಡವಾತಿ ಬಡವನೂ ತನ್ನ ಕೈಲಾದಷ್ಟು ಹಣವನ್ನ ಈ ಪಿಎಂ ಕೇರ್ಸ್​ ಫಂಡ್​ಗೆ ದಾನವಾಗಿ ನೀಡಿದ್ದಾನೆ. ಆದರೆ ಇದೇ ಫಂಡ್​ ಬಗ್ಗೆ ದೇಶದ ಪ್ರಧಾನಿ ಲೆಕ್ಕವನ್ನೂ ಕೊಡದೆ, ಆರ್​ಟಿಐ ವ್ಯಾಪ್ತಿಗೂ ಈ ನಿಧಿಯನ್ನ ತರದೇ, ಖಾಸಗಿ ಟ್ರಸ್ಟ್​ಗೆ ಈ ಹಣವನ್ನ ಹಾಕಿಸಿಕೊಂಡಿದ್ದಾರೆ ಎಂದರೆ, ಇದು ಎಲ್ಲವೂ ಗೊತ್ತಿದ್ದೂ ಮಾಡಿರುವ ಸಂಚಲ್ಲವೇ..? ARE WE STUPID..?

Also read:  ಪಿಎಂ ಕೇರ್ಸ್ ಫಂಡ್​ಗೂ ಸರ್ಕಾರಕ್ಕೂ ಸಂಬಂಧವೇ ಇಲ್ಲ..! ARE WE STUPID..?

More articles

Latest article