Wednesday, June 29, 2022

ಪಂಚಮಸಾಲಿ ಸಂಧಾನ ಸಭೆ ವಿಫಲ: ಮೀಸಲಾತಿಗಾಗಿ ಪಟ್ಟು ಹಿಡಿದ ಜಯ ಮೃತ್ಯುಂಜಯ ಸ್ವಾಮೀಜಿ

Must read

ಬೆಂಗಳೂರು: 2 ಎ ಮೀಸಲಾತಿಗೆ ಆಗ್ರಹಿಸಿ ಪಂಚಮ ಸಾಲಿ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ತೀವ್ರಗೊಳ್ಳುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಂಧಾನ ಸಭೆ ನಡೆಸಿದೆ.

ಸಚಿವ ಸಿ. ಸಿ. ಪಾಟೀಲ್ ನಿವಾಸಲ್ಲಿ ಮಹತ್ವದ ಸಂಧಾನ ಸಭೆ ನಡೆದಿದ್ದು, ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಪ್ರಮುಖರು ಸಭೆಯಲ್ಲಿ ಭಾಗಿಯಾಗಿದ್ದಾರೆ.

ಸಭೆಯಲ್ಲಿ ಪಂಚಮಸಾಲಿ ಮೀಸಲಾತಿ ಹಗ್ಗಜಗ್ಗಾಟ ಮುಂದುವರಿದಿದ್ದು, ಜಯಮೃತ್ಯುಂಜಯ‌ಶ್ರೀ ಮೀಸಲಾತಿಗಾಗಿ ಪಟ್ಟು ಹಿಡಿದಿದ್ದಾರೆ.

ಸಚಿವ ಸಿ. ಸಿ. ಪಾಟೀಲ್ ಶ್ರೀಗಳನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡಿದ್ದು, ಜಯಮೃತ್ಯುಂಜಯ ಶ್ರೀ ಸಚಿವರ ಮಾಹಿತಿ ಒಪ್ಪದೇ ಮೀಸಲಾತಿಗಾಗಿ ಬೇಡಿಕೆ ಇಟ್ಟಿದ್ದಾರೆ. ಹೋರಾಟ ಈ ಹಂತದವರೆಗೆ ಬಂದು ನಿಂತಿದೆ. ಇಡೀ ಸಮುದಾಯ ಹೋರಾಟದ ಹಿಂದೆ ನಿಂತಿದೆ. ಮೀಸಲಾತಿ ಸ್ಪಷ್ಟ ನಿರ್ಧಾರ ತಿಳಿಸಬೇಕು. ಇಲ್ಲವಾದರೆ ನಾವು ಸಮುದಾಯಕ್ಕೆ ಹೇಳೋದು ಕಷ್ಟ. ನಮಗೆ ಮೀಸಲಾತಿ ಬಿಟ್ಟರೆ ಬೇರೇನೂ ಬೇಡ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

ಸಂಧಾನ ಸಭೆಯಲ್ಲಿ ಪಟ್ಟುಹಿಡಿದ ಜಯಮೃತ್ಯುಂಜಯ‌ ಶ್ರೀಗಳಿಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತಿಳಿಸುವುದಾಗಿ ಸಚಿವ ಸಿ.ಸಿ ಪಾಟೀಲ್​ ತಿಳಿಸಿದ್ದಾರೆ.

Latest article