Thursday, May 19, 2022

‌ಬ್ಯಾಡ್ ಬಾಯ್ ಅಂತಾ ಗುರುತಿಸಿಕೊಂಡಿದ್ದೇನೆ, ಆರೋಪ ಬರುತ್ತಲೇ ಇರುತ್ತದೆ- ನಲಪಾಡ್​

Must read

ಬೆಂಗಳೂರು:  ನಾನು ಸಿದ್ದು ಮೇಲೆ ಹಲ್ಲೆ ಮಾಡಿಲ್ಲ ನಮ್ಮ ಬೆಂಬಲಿಗರು ಕೂಡ ಹಲ್ಲೆ ಮಾಡಿಲ್ಲ. ಯಾರೋ ಬೇಕೆಂದೇ ಷಡ್ಯಂತ್ರ ಮಾಡ್ತಿದ್ದಾರೆ ಎಂದು ಕಾಂಗ್ರೆಸ್​​ ಮುಖಂಡ ನಲಪಾಡ್​ ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರೆ.

ನಲಪಾಡ್ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪದ ಬಗ್ಗೆ ಟಿವಿ5 ಜೊತೆ ಮಾತನಾಡಿದ ಅವರು, ನಾನು ಫೆಬ್ರವರಿ 1ರಂದು ಅಧ್ಯಕ್ಷನಾಗಬೇಕು. ಅದನ್ನು ತಪ್ಪಿಸೋಕೆ ಈ ರೀತಿ ಮಾಡುತ್ತಿದ್ದಾರೆ. ಸಿದ್ದು ನಾನೇನು ಮಾಡಿಲ್ಲ ಅಂತ ಹೇಳಿದ್ದಾನೆ. ಅವನೇ ಈಗ ಹೇಳಿದ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಲು ಹೇಗೆ ಆಗುತ್ತದೆ. ನನ್ನ ಅಧ್ಯಕ್ಷ ಸ್ಥಾನ ಯಾರೂ ತಪ್ಪಿಸೋಕೆ ಆಗಲ್ಲ. ನಿನ್ನೆ ಯೂತ್ ಕಾಂಗ್ರೆಸ್ ಸ್ನೇಹಿತರ ಸಭೆ ಕರೆದಿದ್ದೆವು. ನಾನು ಆ ಸಭೆಗೆ ಹೋಗಿದ್ದೆ ಆದರೆ ಯಾರ ಮೇಲೂ ‌ಹಲ್ಲೆ ಮಾಡಿಲ್ಲ ಎಂದರು.

ಇನ್ನು ನಾನು ‌ಬ್ಯಾಡ್ ಬಾಯ್ ಅಂತ ಗುರ್ತಿಸಿಕೊಂಡಿದ್ದೇನೆ. ಅದಕ್ಕೆ ಇಂತಹ ಆರೋಪ ಬರುತ್ತಲೇ ಇರುತ್ತದೆ. ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಅಕ್ರಮ ಮಾಡಿರಲಿಲ್ಲ. ಸುಮ್ಮನೆ ನನ್ನ ತೇಜೋವಧೆಗೆ ಈ ಪ್ರಯತ್ನ ನಡೆದಿದೆ. ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ನಾನು ಒಳ್ಳೆಯವನಾಗೋಕೆ ಹೊರಟಿದ್ದೇನೆ. ಆದರೆ ಪದೇ ಪದೇ ಈ ರೀತಿ ಆಗುತ್ತಿದೆ ಎಂದರು.

Latest article