Monday, November 29, 2021

ಮೈಸೂರಿನ ಗುಂಡಿಗಳಲ್ಲಿ ರಸ್ತೆಗಾಗಿ ಹುಡುಕಾಟ..! ಎಷ್ಟು ಲೂಟಿ ಹೊಡೆದಿದ್ದಾರೆ..? – ARE WE STUPID..?

Must read

ಸಾಂಸ್ಕೃತಿಕ ನಗರ ಮೈಸೂರು ಗುಂಡಿಗಳ ನಗರವಾಗಿ ಮಾರ್ಪಾಡಾಗಿದೆ. ನಗರದ ರಸ್ತೆಗಳಲ್ಲಿ ಗುಂಡಿಯನ್ನು ಹುಡುಕುವ ಬದಲು, ಗುಂಡಿಗಳಲ್ಲಿ ರಸ್ತೆಯನ್ನ ಹುಡುಕುವಂತಾ ಸ್ಥಿತಿ ಬಂದೊದಗಿದೆ.. ಜನ ನಿತ್ಯ ಒಂದಿಲ್ಲೊಂದು ಗುಂಡಿಯಲ್ಲಿ ಬಿದ್ದು ಕೈಕಾಲು ಪೆಟ್ಟು ಮಾಡಿಕೊಳ್ಳುತ್ತಲೇ ಇದ್ದಾರೆ. ವಾಹನಗಳು ಗುಂಡಿಗಳಲ್ಲಿ ಚಲಿಸುವುದರಿಂದ ನಿತ್ಯ ರಿಪೇರಿ ಬರುತ್ತಿವೆ.. ಇಷ್ಟೆಲ್ಲಾ ಆದರೂ ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಗಮನವನ್ನೇ ಹರಿಸದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ನಗರದ ಮುಕ್ಯ ರಸ್ತೆಗಳೇ ಗುಂಡಿಗಳಿಂದ ಕೂಡಿದ್ದು, ಜನ ಸಂಕಷ್ಟ ಎದುರಿಸುತ್ತಿದ್ದಾರೆ.. ಮೈಸೂರಿನ ಮುಖ್ಯ ರಸ್ತೆಯಲ್ಲೇ 10ಕ್ಕೂ ಹೆಚ್ಚು ಗುಂಡಿಗಳಿವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಪಾಲಿಕೆ ಸದಸ್ಯರು ಅನುದಾನ ಇಲ್ಲ ಎಂದಯ ಕೈಕಟ್ಟಿ ಕುಳಿತಿದ್ದಾರೆ.. ಟೆಂಡರ್​ದಾರರು ಕಳಪೆ ಕಾಮಗಾರಿ ಮಾಡಿ ಹಣ ಪಡೆದು ಕಣ್ತಪ್ಪಿಸಿಕೊಂಡಿದ್ದಾರೆ.. ಟೆಂಡರ್​ದಾರರ ಈ ಕಳ್ಳಾಟಕ್ಕೆ ಸ್ವತಃ ಪಾಲಿಕೆ ಸದಸ್ಯರೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ಎರಡು ತಿಂಗಳ ಹಿಂದಷ್ಟೇ ಮುಚ್ಚಿದ ಗುಂಡಿಗಳು ಮತ್ತೆ ಅದೇ ರೀತಿ ಕಾಣಿಸಿಕೊಂಡಿದೆ ಅಂದ್ರೆ, ಸಾರ್ವಜನಿಕರ ಹಣವನ್ನ ಹೇಗೆ ಕೊಳ್ಳೆ ಹೊಡೆದಿದ್ದಾರೆ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇರೆ ಬೇಕಿಲ್ಲ. ಸಾರ್ವಜನಿಕರ ಹಣ ಪಡೆದು ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳದ ಜವಾಬ್ದಾರಿ ಪಾಲಿಕೆ ಅಥವಾ ಸರ್ಕಾರದ್ದು. ಆದರೂ ಕಣ್ಮುಚ್ಚಿ ಕುಳಿತಿದ್ದಾರೆ ಅಂದ್ರೆ, ಈ ಕಳಪೆ ಕಾಮಗಾರಿಯಲ್ಲಿ ಪಾಲಿಕೆ ಅಧಿಕಾರಿಗಳು ಕೂಡ ಭಾಗವಹಿಸಿರಬಹುದು ಎನ್ನುವ ಅನುಮಾನ ಮೂಡದೇ ಇರೋದಿಲ್ಲ.

ಪ್ರತಿ ವರ್ಷ ಮಳೆ ಬಂದಾಗೆಲ್ಲಾ ನಗರದ ರಸ್ತೆಗಳಲ್ಲಿ ಗುಂಡಿ ಬೀಳುತ್ತವೆ.. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅವುಗಳನ್ನ ಮುಚ್ಚುವ ಕಾರ್ಯವನ್ನ ಮಾಡಲಾಗುತ್ತೆ. ಆದ್ರೆ ಎರಡೇ ತಿಂಗಳಲ್ಲಿ ಆ ಗುಂಡಿಗಳು ಪುನಃ ಕಾಣಿಸಿಕೊಳ್ಳುತ್ತವೆ. ಹಾಗಾದ್ರೆ, ಕೋಟ್ಯಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣಕ್ಕೆ ಬೆಲೆಯೇ ಇಲ್ವಾ..? ಅಥವಾ ಜನರ ಹಣವನ್ನ ಲೂಟಿ ಮಾಡೋಕೆ ಅಂತಾನೇ ಗುಂಡಿ ಮುಚ್ಚುವ ಕಾರ್ಯವನ್ನ ಮಾಡಲಾಗುತ್ತಾ..? ಅಭಿವೃದ್ಧಿಯ ಬಗ್ಗೆ ಉದ್ದುದ್ದ ಭಾಷಣ ಮಾಡುವ ಶಾಸಕರು, ಸಂಸದರು, ಸಚಿವರು ಈಗೇಕೆ ಬಾಯಿ ಮುಚ್ಚಿಕೊಂಡಿದ್ದಾರೆ..? ನಿಮ್ಮ ಮೌನದ ಹಿಂದಿನ ಅರ್ಥವೇನು..? ARE WE STUPID..?

Also read:  ಕೊಟ್ಟವನು ಕೋಡಂಗಿ.. ಇಸ್ಕೊಂಡೋನು ಈರಭದ್ರ..! ಪಿಎಂ ಕೇರ್ಸ್ ಫಂಡ್​ನ ಕಥೆ ಇದು..! - ARE WE STUPID..?

 

Latest article