Wednesday, June 29, 2022

ಆರ್​ಎಸ್​ಎಸ್​ ಬಗ್ಗೆ ಕಾಂಗ್ರೆಸ್​​ಗೆ ಭಯ ಯಾಕೆ..?- ಎಂ.ಪಿ ರೇಣುಕಾಚಾರ್ಯ

Must read

ಬೆಂಗಳೂರು: ಮೀಸಲಾತಿ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ ಮೀಸಲಾತಿ ನೀಡುವ ಪರಮಾಧಿಕಾರ ಸಿಎಂಗಿದೆ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಯಾರಿಗೆ ತಾನೇ ಬೇಡ. ವಾಲ್ಮೀಕಿ‌ ಸಮುದಾಯವೂ ಹೋರಾಟ ಮಾಡುತ್ತಿದೆ. ಪಂಚಮಸಾಲಿ ‌ಸಮುದಾಯವೂ ಹೋರಾಟ ನಡೆಸಿದೆ. ಕುರುಬ ಸಮುದಾಯವೂ ಕೇಳಿದೆ. ವೀರಶೈವ ಒಳಪಂಗಡಗಳೂ ಕೇಳುತ್ತಿದ್ದಾರೆ. ಎಲ್ಲರಿಗೂ ಮೀಸಲಾತಿ ಕೊಡಲಿ. ನಾನು ‌ಮೀಸಲಾತಿಗೆ ವಿರುದ್ಧ ಅಲ್ಲ ಎಂದರು.

ಅಗ್ನಿಪಥ್ ಯೋಜನೆಗೆ ವಿರೋಧ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರ ಉತ್ತಮ ಯೋಜನೆ ತಂದಿದೆ. ಎಲ್ಲರಿಗೂ ಅವಕಾಶ ಕೊಡಲು ‌ತಂದಿದೆ. ಆದರೆ ಕಾಂಗ್ರೆಸ್ ಬೆಂಕಿ‌ ಹಚ್ಚುವ ಕೆಲಸ ಮಾಡುತ್ತಿದೆ. ಹಿಂದೆ ನಿಂತು‌ ಪಿತೂರಿ ಮಾಡುತ್ತಿದೆ. ಇದರ ಹಿಂದೆ ಆರ್​ಎಸ್​ಎಸ್​ ಇದೆ ಎಂದು ಮಾತನಾಡುತ್ತಿದ್ದಾರೆ. ಆರ್​ಎಸ್​ಎಸ್​ನಂತಹ ಉತ್ತಮ ಸಂಸ್ಥೆ ಎಲ್ಲಿದೆ. ಆರ್​ಎಸ್​ಎಸ್ ಬಗ್ಗೆ ಇವರಿಗೆ ಭಯ ಯಾಕೆ..? ಎಲ್ಲದಕ್ಕೂ ಅದನ್ನೇ ಯಾಕೆ ಹೊಣೆ ಮಾಡುವುದು ಎಂದು ಪ್ರಶ್ನಿಸಿದ್ದಾರೆ.

Latest article