Tuesday, August 16, 2022

ಪ್ರಧಾನ ಮಂತ್ರಿಗಳ ಹೆಸರಿನಲ್ಲಿ ನಡೆಯುತ್ತಿದೆ ಕೋಟಿ ಕೋಟಿ ಲೂಟಿ..? – ARE WE STUPID..?

Must read

ಕೇಂದ್ರ ಸರ್ಕಾರ ಪಿಎಂ ಕೇರ್ಸ್ ಫಂಡ್​ನ ಖಾಸಗಿ ಫಂಡ್ ಎಂದು ಹೇಳಿದೆ. ಅರ್ಥಾತ್ ಆ ಫಂಡ್​ಗೂ ಕೇಂದ್ರ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಪಿಎಂ ಕೇರ್ಸ್ ಫಂಡ್​ನ ಪ್ರತಿ ದಾಖಲೆಯ ಮೇಲೆ ಪ್ರಧಾನಿಗಳ ಸಹಿ ಇದೆ. ಪ್ರಧಾನ ಮಂತ್ರಿಗಳ ಫೋಟೋ ಇದೆ. ಟ್ರಸ್ಟ್ ಡೀಡ್​ನಲ್ಲಿ ದೇಶದ ಪ್ರಧಾನಿಗಳು, ರಕ್ಷಣಾ ಸಚಿವರು, ಗೃಹ ಮಂತ್ರಿಗಳು ಹಾಗೂ ಹಣಕಾಸು ಸಚಿವರ ಹೆಸರುಗಳಿವೆ. ಹಾಗಿದ್ದರೂ ಇದು ಸರ್ಕಾರಿ ಫಂಡ್ ಅಲ್ಲ ಎಂದಿದ್ದಾರೆ. ಹಾಗಾದ್ರೆ ಏನಿದರ ಅರ್ಥ. ಪ್ರಧಾನಿಗಳ ಕಚೇರಿಯಲ್ಲಿ ಡೊನೇಷನ್ ಸಂಗ್ರಹ ಮಾಡುತ್ತಿರುವವರು ಯಾರು..? ಇದ್ಯಾವ ಡೊನೇಷನ್..?
ಪಿಎಂ ಕೇರ್ಸ್ ಫಂಡ್​ಗೂ ಕೇಂದ್ರ ಸರ್ಕಾರಕ್ಕೂ ಸಂಬಂಧವೇ ಇಲ್ಲ ಎಂದ ಮೇಲೆ, ದೇಶದ ಪ್ರಧಾನಿಗಳು ಹಾಗೂ ಕೇಂದ್ರ ಮಂತ್ರಿಗಳ ಹೆಸರನ್ನ ಬಳಸಿಕೊಂಡು, ಪ್ರಧಾನಿಗಳ ಕಚೇರಿಯಲ್ಲೇ ಕುಳಿತು, ಸರ್ಕಾರದ GOV ಎನ್ನುವ url ಬಳಕೆ ಮಾಡುತ್ತಿರುವುದು ಯಾರು..? ಪಿಎಂ ಕೇರ್ಸ್ ಫಂಡ್​ನ ದಾಖಲೆಗಳಲ್ಲಿ ಇರುವ ನರೇಂದ್ರ ಮೋದಿ ಎನ್ನುವ ಆ ಖಾಸಗಿ ವ್ಯಕ್ತಿ ಯಾರು..? ಇದು ಜನರಿಗೆ ಅರ್ಥವಾಗುವುದಿಲ್ಲವೇ..? ARE WE STUPID..?

Latest article