Sunday, October 2, 2022

ಹಿಂದೂಗಳ ಗಣಪತಿ ಉತ್ಸವಕ್ಕೆ ಅಡ್ಡ ಬಂದ್ರೆ ಸರಿ ಇರಲ್ಲ-ಈಶ್ವರಪ್ಪ ಎಚ್ಚರಿಕೆ

Must read

ಬೆಂಗಳೂರು: ಹಿಂದೂಗಳ ಗಣಪತಿ ಉತ್ಸವಕ್ಕೆ ಅಡ್ಡ ಬಂದ್ರೆ ಸರಿ ಇರಲ್ಲ. ನೀವು ನಿಮ್ಮ ಹಬ್ಬ ಮಾಡಲ್ವಾ? ನಾವು ಬೆಂಬಲ ಕೊಡಲ್ವಾ? ನಮ್ಮ ಹಬ್ಬದ ತಂಟೆಗೆ ಬರಬೇಡಿ ಎಂದು ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ಶಿವಮೊಗ್ಗದಲ್ಲಿ ಗಣೇಶ ಹಬ್ಬ ಆಚರಣೆ ಬಗ್ಗೆ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಬೆಳಗ್ಗೆ ಸರ್ಕಾರಿ ಕಾರ್ಯಕ್ರಮ ಕೂಡ ಯಶಸ್ವಿಯಾಯ್ತು. ಬಿಜೆಪಿಯ ಅಮೃತಮಹೋತ್ಸವ ಕಾರ್ಯಕ್ರಮ ಕೂಡ ಯಶಸ್ವಿಯಾಗಿತ್ತು. ಎಲ್ಲರೂ ಕೂಡ ಮನೆಗೆ ಹೋಗಿದ್ದೇವು. ಅಷ್ಟರೊಳಗೆ ಕೆಲ ಕಿಡಿಗೇಡಿಗಳು ಸಾರ್ವಕರ್ ಪೋಟೋ ತೆಗೆದುಹಾಕಿದ್ದಾರೆ. ಎಸ್​ಡಿಪಿಐ ಕಾರ್ಯಕರ್ತರು ಸಾವರ್ಕರ್​​​ ಫೋಟೋ ತೆಗೆದು ಹಾಕಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತವರಣ ಆರಂಭವಾಗಿದೆ. ಈ ಮಧ್ಯೆ ಗಾಂಧಿಬಜಾರ್​ನಲ್ಲಿ ಚಾಕು ಇರಿದಿದ್ದಾರೆ. ಪೊಲೀಸರು ಬಹಳ ಶ್ರಮ ಹಾಕಿ ಆರೋಪಿಗಳನ್ನು ಬಂಧಿಸಿದ್ದು, ಒಬ್ಬನ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದರು.

ಇನ್ನು ಎಸ್​ಡಿಪಿಐ ಮನಸ್ಥಿತಿ ಬದಲಾಗಿಲ್ಲ. ಹಿಂದೂಗಳನ್ನು ಕೊಲೆ ಮಾಡುವ ಮನಸ್ಥಿತಿ ಬದಲಾಗಿಲ್ಲ. ಕೇರಳದಿಂದಲೂ ಹೊರಗಡೆಯಿಂದ ಬಂದವರಿಂದಲೂ ಈ ರೀತಿ ಆಗುತ್ತಿದೆ. ನಮ್ಮ ಶಿವಮೊಗ್ಗದವರು ಶಾಂತಿ ಪ್ರಿಯರು. ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ಮಾಡುವುದಾಗಲಿ ಆಗಬಾರದು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸಿಎಂಗೆ ಮನವಿ ಮಾಡಿದ್ದೇನೆ ಎಂದರು.

Latest article