Sunday, October 2, 2022

ಮೂಲೆ ಗುಂಪಾದ್ರಾ ಬಿಜೆಪಿ ಘಟಾನುಘಟಿ ನಾಯಕರು: ಜನ ಸ್ಪಂದನ ಸಮಾವೇಶಕ್ಕೆ ಈಶ್ವರಪ್ಪ ಗೈರು..!

Must read

ಬೆಂಗಳೂರು: ಬಿಜೆಪಿ ಸರ್ಕಾರ ಮೂರು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಇಂದು ಬಿಜೆಪಿ ನಾಯಕರು ಅದ್ಧೂರಿ ಜನ ಸ್ಪಂದನೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಬಿಜೆಪಿ ಮುಖಂಡರು ಕೋಟ್ಯಂತರ ರೂಪಾಯಿ ವ್ಯಹಿಸಿ ದೊಡ್ಡಬಳ್ಳಾಪುರದಲ್ಲಿ ನಡೆಸುತ್ತಿರುವ ಬೃಹತ್​ ಸಮಾವೇಶಕ್ಕೆ ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ಗೈರಾಗಿದ್ದಾರೆ.

ಕಾಲು ನೋವಿನಿಂದ ಬಳಲುತ್ತಿರುವ ಕೆ.ಎಸ್​ ಈಶ್ವರಪ್ಪ ಚಿಕಿತ್ಸೆಯ ಕಾರಣ ಶಿವಮೊಗ್ಗದಿಂದ ದೊಡ್ಡಬಳ್ಳಾಪುರದವರೆಗೆ ಪ್ರಯಾಣ ಮಾಡಲಾಗದೇ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ ಎನ್ನಲಾಗಿದೆ.

ಇನ್ನು ರಾಜ್ಯಾದ್ಯಂತ ನಿರೀಕ್ಷೆಗೂ ಮೀರಿ ಮಳೆಯಾಗಿದ್ದು, ಜನರ ಬದುಕು ಅತಂತ್ರವಾಗಿದೆ. ಇಂತಹ ಸಂದರ್ಭದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಬೇಕಾದ ಸಚಿವರು ಹಾಗೂ ಶಾಸಕರು ಸಮಾವೇಶ ನಡೆಸುತ್ತಾ ಕಾಲಹರಣ ಮಾಡುತ್ತಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

Latest article