Monday, November 29, 2021

ಮಕ್ಕಳಿಗೆ ಕ್ಷೀರಭಾಗ್ಯವೂ ಇಲ್ಲ.. ರೈತರಿಗೆ ಬೆಂಬಲ ಬೆಲೆಯೂ ಇಲ್ಲ.. ಸರ್ಕಾರ ಏನ್ ಮಾಡುತ್ತಿದೆ..? – ARE WE STUPID..?

Must read

ಕೊರೊನಾ ನಂತರ ಶಾಲಾ ಕಾಲೇಜುಗಳು ಆರಂಭವಾಗಿವೆ. ಆದರೆ ಶಾಲೆಗಳಲ್ಲಿ ಮಕ್ಕಳಿಗೆ ನೀಡಲಾಗುತ್ತಿದ್ದ ಕ್ಷೀರಭಾಗ್ಯವನ್ನ ಸರ್ಕಾರ ಸಂಪೂರ್ಣ ನಿಲ್ಲಿಸಿದೆ. ಹೀಗಾಗಿ ತುಮಕೂರು ಜಿಲ್ಲೆಯಲ್ಲಿ ಜುಲೈ ತಿಂಗಳಿನಿಂದ 6 ಸಾವಿರಕ್ಕೂ ಹೆಚ್ಚು ಮಕ್ಕಳಲ್ಲಿ ಅಪೌಷ್ಠಿಕತೆ ಎದುರಾಗಿದೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.

ಅಂದ ಹಾಗೆ, ರಾಜ್ಯಾದ್ಯಂತ ಶಾಲೆಗಳು ಆರಂಭವಾಗಿವೆ. ಮಕ್ಕಳು ಕೂಡ ಕೊರೊನಾ ಭಯವನ್ನ ಮರೆತು ತರಗತಿಗಳಿಗೆ ಆಗಮಿಸುತ್ತಿದ್ದಾರೆ. ಆದರೆ, ಶಾಲೆಗಳಲ್ಲಿ ಮಕ್ಕಳಿಗೆ ನೀಡುತ್ತಿದ್ದ ಕ್ಷೀರಭಾಗ್ಯ ಯೋಜನೆ ಇಂದಿಗೂ ಆರಂಭವಾಗಿಲ್ಲ. ಮಕ್ಕಳ ಪೌಷ್ಠಿಕತೆ ಹೆಚ್ಚಿಸಲೆಂದೇ ಈ ಕ್ಷೀರಭಾಗ್ಯ ಯೋಜನೆಯನ್ನ ಆರಂಭಿಸಲಾಗಿತ್ತು. ಲಾಕ್​ಡೌನ್​ ಹಾಗೂ ಕೊರೊನಾದಿಂದಾಗಿ ವರ್ಷಗಟ್ಟಲೇ ಬಡ ಮಕ್ಕಳು ಪೌಷ್ಠಿಕ ಹಾಲು ಇಲ್ಲದೇ ಮನೆಗಳಲ್ಲಿ ಇದ್ದರು. ಶಾಲೆ ಆರಂಭದ ಜೊತೆಗೆ ಕ್ಷೀರಭಾಗ್ಯವೂ ಶುರುವಾಗುತ್ತೆ ಎಂದೇ ಮಕ್ಕಳು ಭಾವಿಸಿದ್ದರು. ಆದರೆ ಸರ್ಕಾರ ಕ್ಷೀರಭಾಗ್ಯ ಯೋಜನೆಯನ್ನೇ ಮರೆತು ಕುಳಿತಿದೆ. ಮಕ್ಕಳ ಬಗ್ಗೆ ಸರ್ಕಾರಕ್ಕೆ ಇರುವ ಕಾಳಜಿ ಎಂಥಾದ್ದು ಎನ್ನುವುದು ಈ ನಿರ್ಲಕ್ಷ್ಯದಿಂದ ತಿಳಿಯುತ್ತದೆ.

ಒಂದೆಡೆ ಮಕ್ಕಳಿಗೆ ಹಾಲಿಲ್ಲ.. ಇನ್ನೊಂದೆಡೆ ರೈತರ ಹಾಲಿಗೆ ಸರ್ಕಾರ ನೀಡುತ್ತಿದ್ದ ಬೆಂಬಲ ಬೆಲೆಯೂ ಕಡಿಮೆಯಾಗಿದೆ. ಹೀಗಾಗಿ ತುಮಕೂರಿನ ರೈತರು ಕೂಡ ಕಂಗಾಲಾಗಿದ್ದಾರೆ. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಅತ್ತ ಮಕ್ಕಳಿಗೆ ಹಾಲಿಲ್ಲ, ಇತ್ತ ರೈತರು ಉತ್ಪಾದನೆ ಮಾಡುವ ಹಾಲಿಗೆ ಸರಿಯಾದ ಬೆಲೆ ಇಲ್ಲ.. ಹೈನುಗಾರಿಕೆಯನ್ನ ನಂಬಿ ಬದುಕುತ್ತಿದ್ದ ಲಕ್ಷಾಂತರ ರೈತರು ಈಗ ಸಂಕಷ್ಟದಲ್ಲಿದ್ದಾರೆ. ಈ ಬಗ್ಗೆ ರೈತರು ಯಾರ ಬಳಿ ಅಳಲು ತೋಡಿಕೊಳ್ಳಬೇಕು.. ಮಕ್ಕಳು ಯಾರ ಮುಂದೆ ಹಾಲಿಗಾಗಿ ಕೈಯೊಡ್ಡಬೇಕು.. ARE WE STUPID..?

Latest article