Monday, January 30, 2023

‘ಚಿಲ್ಲರೆ’ ಬುದ್ಧಿ ತೋರಿಸುತ್ತಿರುವ ಕಂಜೂಸ್​ ಸರ್ಕಾರ..!

Must read

ರಾಜ್ಯ ಸರ್ಕಾರ ಮತ್ತೆ-ಮತ್ತೆ ‘ಚಿಲ್ಲರೆ’ ಬುದ್ಧಿ ತೋರುತ್ತಿಸುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಆಯುಧ ಪೂಜೆ ಹಿನ್ನೆಲೆ ಸಾರಿಗೆ ಇಲಾಖೆ ಕೊಟ್ಟಿದ್ದು ‘ಚಿಲ್ಲರೆ’ ರೂಪಾಯಿ. ಪೂಜೆ ವಿಷಯದಲ್ಲೂ KSRTC ಕಂಜೂಸ್​ತನ ತೋರಿದ್ದು, ಬಸ್​ಗಳ ಪೂಜೆಗೆಂದು 50 ರೂಪಾಯಿ ಕೊಡಲಾಗಿದೆ. ಸರ್ಕಾರ 50 ರೂಪಾಯಿ ನೀಡಿದ ಹಿನ್ನೆಲೆ ಅದಕ್ಕೆ ತಕ್ಕಂತೆ ಚಾಲಕರು ಬಸ್ಸುಗಳಿಗೆ ಕೇವಲ ವಿಭೂತಿ ಹಚ್ಚಿ ಕೈತೊಳೆದುಕೊಂಡಿದ್ದಾರೆ.

ಆಯುಧ ಪೂಜೆಗಾಗಿ ಚಿಲ್ಲರೆ ಕೊಟ್ಟು ಚಿಲ್ಲರೆ ಬುದ್ಧಿ ತೋರಿರುವ ರಾಜ್ಯ ಸರ್ಕಾರ, ವಿಭಾಗೀಯ ಕಾರ್ಯಾಗಾರಕ್ಕೆ 1,000 ರೂಪಾಯಿ, ಪ್ರಾದೇಶಿಕ ಕಾರ್ಯಾಗಾರಕ್ಕೆ 2,000 ರೂಪಾಯಿ ನಿಗದಿಗೊಳಿಸಿತ್ತು. ಇನ್ನು ಅನಗತ್ಯವಾಗಿ ಕೋಟಿ-ಕೋಟಿ ಖರ್ಚು ಮಾಡುವ ಸರ್ಕಾರ, ಪೂಜೆಗೆ 50 ರೂಪಾಯಿ ಬಿಡಿಗಾಸು ಕೊಟ್ಟ ಹಿನ್ನೆಲೆ KSRTC ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ.

ಇದೀಗ ಬೊಮ್ಮಾಯಿ ಸರ್ಕಾರ ಕಂಜೂಸ್ ಸರ್ಕಾರನಾ? ಅನ್ನೋ ಅನುಮಾನ ಶುರುವಾಗಿದೆ. KSRTCಯಿಂದ ಕೋಟಿ-ಕೋಟಿ ಬೊಕ್ಕಸ ತುಂಬಿಕೊಳ್ಳೋ ಸರ್ಕಾರ, ಅಷ್ಟು ಆದಾಯ ಕೊಟ್ರು, KSRTCಗೆ ಕೊಟ್ಟಿದ್ದು ಮಾತ್ರ ಚಿಲ್ಲರೆ. ಇದರಿಂದ ದುಡಿಯುವ ವರ್ಗಕ್ಕೆ ಅರ್ಧ ಕೆಜಿ ಸ್ವೀಟ್ ಕೊಡೋ ಯೋಗ್ಯತೆ ಸರ್ಕಾರಕ್ಕೆ ಇಲ್ವಾ? ಅಂತಾ KSRTC ಸಿಬ್ಬಂದಿ ಕಿಡಿ ಕಾರಿದ್ದಾರೆ.

Latest article