ಮುಂದಿನ ವಿಧಾನಸಭಾ ಚುನಾವಣೆಗೆ ದಳಪತಿಗಳು ಈಗಿನಿಂದಲೇ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಈ ಸಂಬಂಧ ಮುಂದಿನ ಚುನಾವಣೆಗೆ ಕನ್ನಡದ ಮೂಲಕ ಮನೆ ಮನ ತಲುಪಲು ‘ದಳ’ ನಾಯಕರ ಪ್ಲಾನ್ ಮಾಡಿಕೊಂಡಿದ್ದಾರೆ. ಕನ್ನಡಿಗರನ್ನ ಸೆಳೆಯಲು ಜೆಡಿಎಸ್ನಿಂದ ವಿನೂತನ ಕಾರ್ಯಕ್ರಮ ಮಾಡಲು ಮುಂದಾಗಿದ್ದಾರೆ. ಬಿಜೆಪಿಯ ಹರ್ ಘರ್ ತಿರಂಗದಂತೆ ಜೆಡಿಎಸ್ನಿಂದ ಕನ್ನಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಈ ಅಭಿಯಾನಕ್ಕೆ ನವೆಂಬರ್ 1ರಿಂದ ರಾಜ್ಯಾದ್ಯಂತ ಚಾಲನೆ ನೀಡಲಾಗುವುದು.
ಹರ್ ಘರ್ ತಿರಂಗಾ ಮೂಲಕ ಬಿಜೆಪಿ ಜನರನ್ನ ಸೆಳೆದಿತ್ತು. ಇದೀಗ ಜೆಡಿಎಸ್ ಕೂಡ ಬಿಜೆಪಿ ಹಾದಿಯನ್ನೇ ಹಿಡಿದಿದ್ದು, ಕನ್ನಡ ಅಸ್ತ್ರದ ಮೂಲಕ ಜನರ ಮನ ಗೆಲ್ಲುಲು ಪ್ರಯತ್ನಿಸುತ್ತಿದೆ. ಮನೆ ಮನೆಗೆ ಹೋಗಿ ಕನ್ನಡ ಬಾವುಟ ನೀಡುವ ಮೂಲಕ ಅಭಿಯಾನ ಪ್ರಾರಂಭಿಸಲು ಜೆಡಿಎಸ್ ಪ್ಲಾನ್ ಮಾಡಿಕೊಂಡಿದೆ. ಮನೆ ಮೇಲೆ ಕನ್ನಟ ಬಾವುಟ ಹಾರಿಸುವಂತೆ ವಿನೂತನ ಅಭಿಯಾನಕ್ಕೆ ಕನ್ನಡ ಸಂಘಟನೆಗಳು , ಸಂಘ ಸಂಸ್ಥೆಗಳು ಕೂಡ ಸಾಥ್ ನೀಡಲಿವೆ. ಈಗಾಗಲೇ ಕನ್ನಡ ಸಂಘಟನೆಗಳೊಂದಿಗೆ ಮಾತುಕಥೆ ನಡೆಸುವ ದಳಪತಿಗಳು ಕನ್ನಡದ ಮೂಲಕವೇ ಹೆಚ್ಚು ಜನರನ್ನು ತಲುಪಲು ಪ್ಲಾನ್ ಮಾಡಿಕೊಂಡಿದೆ. ಇನ್ನು ಜೆಡಿಎಸ್ನ ಹೊಸ ಅಭಿಯಾನದ ಚಿತ್ರಣ ಕಣ್ಮುಂದೆ ಬರಲು ದಿನಗಣನೆ ಶುರುವಾಗಿದೆ.