Tuesday, August 16, 2022

ಸಿದ್ದರಾಮೋತ್ಸವ ಮೂಲಕ ನಾವೆಲ್ಲ ಒಂದಾಗಿದ್ದೇವೆ ಎನ್ನುವ ಸಂದೇಶ ಕೊಡುತ್ತಿದ್ದೇವೆ -ಜಿ.ಪರಮೇಶ್ವರ್

Must read

ದಾವಣಗೆರೆ: ಕಾಂಗ್ರೆಸ್​ನಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಮ್ಮ ಪಕ್ಷದ ಬಗ್ಗೆ ಟೀಕೆ ಟಿಪ್ಪಣಿ ಮಾಡುತ್ತಿರುವ ಬಿಜೆಪಿಯಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮದಿಂದ ಆತಂಕ ಸೃಷ್ಟಿಯಾಗಿದೆ ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್​ ಹೇಳಿದ್ದಾರೆ.

ದಾವಣಗೆರೆಯಲ್ಲಿ ಟಿವಿ5 ಕನ್ನಡದ ಜೊತೆ ಮಾತನಾಡಿದ ಅವರು, ಇಷ್ಟೊಂದು ಬೃಹತ್​ ಸಂಖ್ಯೆಯಲ್ಲಿ ಅಭಿಮಾನಿಗಳ ಜೊತೆ ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಿಸುತ್ತಿರುವುದನ್ನು ನೋಡಿ ಸಾಮಾನ್ಯವಾಗಿ ಬಿಜೆಪಿ ಅವರಿಗೆ ಆತಂಕವಾಗಿದೆ ಎಂದು ರಾಜ್ಯ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಇನ್ನು ಸಿದ್ದರಾಮೋತ್ಸವ ಮೂಲಕ ಬೃಹತ್​ ಮಟ್ಟದಲ್ಲಿ ಕಾಂಗ್ರೆಸ್​ ಪಕ್ಷ ಸಂಘಟನೆಯಾಗುತ್ತಿದೆ. ಈ ಮೂಲಕ ನಾವೆಲ್ಲ ಒಂದಾಗಿದ್ದೇವೆ ಎಂದು ರಾಜ್ಯಕ್ಕೂ ಹಾಗೂ ಇಡೀ ದೇಶಕ್ಕೂ ಸಂದೇಶ ಕೊಡುತ್ತಿದ್ದೇವೆ ಎಂದಿದ್ದಾರೆ.

Latest article