ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಅವರನ್ನು ಭೇಟಿ ಮಾಡಿದ್ದಾರೆ ಎನ್ನುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ವಿರುದ್ಧ ಮಾಜಿ ಸಂಸದೆ ರಮ್ಯಾ ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿದ್ದರು. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮ್ಯಾ ಟ್ವೀಟ್ ವಿಚಾರ ಯಾವುದು ಗೊತ್ತಿಲ್ಲ. ಎಂ.ಬಿ ಪಾಟೀಲ್, ರಮ್ಯಾ ಇಬ್ಬರೂ ನಮ್ಮ ಪಕ್ಷದವರು. ಟ್ವೀಟ್ ವಿಚಾರದಲ್ಲಿ ಎಲ್ಲೋ ಗೊಂದಲವಾಗಿದೆ. ಅದನ್ನ ನಾವು ಸರಿಪಡಿಸಿಕೊಳ್ಳುತ್ತೇವೆ. ಈಗ ನಾನು ಇದರ ಬಗ್ಗೆ ಮಾತನಾಡಲ್ಲ. ಯಾರಿಗೆ ಏನು ದುಗಡ ಆಗಿದೆ ನಾವು ನೋಡುತ್ತೇವೆ ಎಂದಿದ್ದಾರೆ.
ಇನ್ನು ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ಮಾತನಾಡಿದ ಅವರು, ನೇಮಕಾತಿಯಲ್ಲಿ ಯಾರ್ಯಾರ ಸೀಟು ಎಷ್ಟೆಷ್ಟಿವೆ. ಯಾರಿಗೆ ಎಷ್ಟು ತಲುಪಿದೆ ಎಲ್ಲವೂ ಗೊತ್ತಿದೆ. ಪಾಪ ಹುಡುಗರ ಮೇಲೆ ಹಾಕೋಕೆ ಹೊರಟಿದ್ದಾರೆ. ಪ್ರಕರಣ ಮುಚ್ಚೋಕೆ ಇದೆಲ್ಲವನ್ನು ತರುತ್ತಿದ್ದಾರೆ. ಇವರು ಅಂಗಡಿ ತೆರೆದಿದ್ದಕ್ಕೆ ತಾನೇ ಅವರು ಬಂದಿದ್ದು. ಇವರು ವ್ಯಾಪಾರ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.