Tuesday, August 16, 2022

ಡಿ.ಕೆ ಶಿವಕುಮಾರ್​ಗೆ ಬಿಗ್​ ರಿಲೀಫ್​​​: ED ವಿಶೇಷ ಕೋರ್ಟ್​ನಿಂದ ಜಾಮೀನು ವಿಸ್ತರಣೆ

Must read

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ಗೆ ಜಾಮೀನು ಅವಧಿ ವಿಸ್ತರಿಸಿ ದೆಹಲಿ ರೋಸ್​ ಅವೆನ್ಯೂ ನ್ಯಾಯಾಲಯ ಆದೇಶ ಹೊರಡಿಸಿದ್ದು, ಷರತ್ತುಬದ್ಧ ಜಾಮೀನು ನೀಡಿದೆ.

ಈ ಹಿಂದೆ  ಡಿ.ಕೆ ಶಿವಕುಮಾರ್​ಗೆ ನೀಡಿದ್ದ ಜಾಮೀನು ಅವಧಿ ಮುಕ್ತಾಯಗೊಳ್ಳುವ ಹಂತದಲ್ಲಿರುವ ಹಿನ್ನೆಲೆಯಲ್ಲಿ ಡಿ.ಕೆ ಶಿವಕುಮಾರ್​ ಮತ್ತೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ED ವಿಶೇಷ ಕೋರ್ಟ್​ ಪ್ರಕರಣದ ಆರೋಪಿಗಳಿಗೆ ದೇಶ ಬಿಟ್ಟು ಹೋಗಬಾರದು ಹಾಗೂ ಸಾಕ್ಷಿ ನಾಶ ಮಾಡಬಾರದು ಸೇರಿದಂತೆ ಮೂರು ಷರತ್ತುಗಳನ್ನು ವಿಧಿಸಿ ಜಾಮೀನು ವಿಸ್ತರಿಸಿದೆ.

Latest article