Tuesday, August 16, 2022

‘ನಂಬಿಕೆ ದ್ರೋಹ ಮಾಡಿರುವ ಒಂದು ನಿದರ್ಶನವೂ ಸಿದ್ದರಾಮಯ್ಯ ಅವರ ಚರಿತ್ರೆಯಲ್ಲಿ ಇಲ್ಲ‘

Must read

ದಾವಣಗೆರೆ: ಇಂದು ಜನ ಸಾಗರ ದಾವಣಗೆರೆ ಕಡೆ ಹರಿದು ಬರುತ್ತಿರುವುದನ್ನು ನೋಡಿದರೆ, ಸಿದ್ದರಾಮಯ್ಯ ಅವರ ಮೇಲೆ ಜನರಿಗೆ ಇಷ್ಟೊಂದು ಪ್ರೀತಿ ಇಷ್ಟೊಂದು ಅಭಿಮಾನ ಇದೆ ಎಂದು ನೋಡಿ ನಮಗೆ ಆಶ್ಚರ್ಯ ಹಾಗೂ ಖುಷಿಯಾಗುತ್ತದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಹೇಳಿದ್ದಾರೆ.

ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ನಮ್ಮ ರಾಜ್ಯದಲ್ಲಿ ಯಾರಾದರೂ ಹೇಳುವುದನ್ನೇ ಮಾಡುತ್ತಾರೆ ಎಂದರೆ,  ಅಂತಹ ಒಬ್ಬ ರಾಜಕರಣಿ ಇದ್ದರೆ ಅದು ಸಿದ್ದರಾಮಯ್ಯ ಮಾತ್ರ. ಸಿದ್ದರಾಮಯ್ಯ  ಅವರಿಗೆ ಅಧಿಕಾರ ಸಿಕ್ಕಾಗ ಅವರ ಸಿದ್ಧಾಂತ ಹಾಗೂ ನಂಬಿಕೆಯ ಮೇಲೆಗೆ ಕೆಲಸ ಮಾಡಿದ್ದಾರೆ ಹೊರತು ನಂಬಿಕೆ ದ್ರೋಹ ಮಾಡಿರುವ ಒಂದು ನಿದರ್ಶನವೂ ಅವರ ಜೀವನ ಚರಿತ್ರೆಯಲ್ಲಿ ಬರುವುದಿಲ್ಲ ಎಂದರು.

ಇನ್ನು ಸಿದ್ದರಾಮಯ್ಯನವರ ಬದ್ಧತೆ,ಅವರ ಪ್ರಾಮಾಣಿಕತೆ, ಅವರ ನೇರನುಡಿ. ಇದ್ದದನ್ನು ಇದ್ದ ಹಾಗೆ ನೇರವಾಗಿ ಹೇಳುತ್ತಾರೆ. ಸಿದ್ದರಾಮಯ್ಯ ಯಾಕೆ ಜನ ನಾಯಕರಾಗಿದ್ದಾರೆ ಎಂದರೆ, ಅವರು ಜನರಿಗೆ ನೀಡಿರುವ ಸೇವೆಗಳಿಂದ. ಅವರ ಆಡಳಿತದಲ್ಲಿ ಎಲ್ಲಾ ವರ್ಗದವರಿಗೂ ಸಹಾಯ ಮಾಡಿದರು. ಬಡವರ ಸೇವೆ ಮಾಡಿರುವ ಏಕೈಕ ಮುಖ್ಯಮಂತ್ರಿ ಎಂದರೆ ಅದು ಸಿದ್ದರಾಮಯ್ಯನವರು.

Latest article