Sunday, October 2, 2022

ಕಾಂಗ್ರೆಸ್ಸಿನಿಂದ ಸಿಡಿ ರಿಲೀಸ್, ನಾನವನಲ್ಲ ನಾನವನಲ್ಲ ಎಂದ ಬಿಜೆಪಿ ಶಾಸಕ

Must read

ರಾಜ್ಯದಲ್ಲಿ ಸದ್ಯ ಬಹಳ ಸದ್ದು ಮಾಡುತ್ತಿರುವುದು ಪಿಎಸ್ಐ ನೇಮಕಾತಿ ಹಗರಣ. ಸದ್ಯ ಈ ವಿಷಯವಾಗಿ ಬಿಜೆಪಿ ಶಾಸಕ ಬಸವರಾಜ ದಡೇಸುಗೂರು ಆಡಿಯೋ ಲೀಕ್ ಆಗಿದೆ. ಇದೇ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಶಾಸಕ ದಡೇಸುಗೂರು, ನಾನು ಮಾತನಾಡಿದ್ದು, 2020ರಲ್ಲಿ ಎಂದು ಸ್ಪಷ್ಟನೆ ನೀಡಿದ್ದಾರೆ. ಅದು 2020ರ ಆಡಿಯೋ ಈಗಿನದ್ದಲ್ಲ. ಕ್ಷೇತ್ರದ ಸಮಸ್ಯೆ ಬಗೆಹರಿಸುವುದರ ಬಗ್ಗೆ ನಾನು ಮಾತನಾಡಿದ್ದೆ. ಆದ್ರೆ ನಾನು ಮಾತಾಡಿದ್ದನ್ನ ಪಿಎಸ್ಐಗೆ ಜೋಡಿಸಿದ್ದಾರೆ. ನನ್ನ ಆಡಿಯೋ ಎಡಿಟ್ ಮಾಡಿದ್ದಾರೆ. ಪಿಎಸ್ಐ ಅಕ್ರಮದಲ್ಲಿ ನಾನು ಹಣ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ನಾಯಕರ ಆರೋಪಗಳಿಗೂ ತಿರುಗೇಟು ನೀಡಿರುವ ಬಿಜೆಪಿ ಶಾಸಕ ದಡೇಸುಗೂರು, ನಾನು ದಾಖಲೆ ಸಮೇತ ಸದನಕ್ಕೆ ಬಂದಿದ್ದೇನೆ. ಸಿಡಿ ಕೂಡ ಜೊತೆಗೆ ತಂದಿದ್ದೇನೆ. ಸದನದಲ್ಲಿ ಇದರ ಬಗ್ಗೆ ಪ್ರಸ್ತಾಪ ಆಗಲಿ. ಅದಕ್ಕೆ ನಾನು ಉತ್ತರ ಕೊಡುತ್ತೇನೆ. ಕಾಂಗ್ರೆಸ್ನವರು ಆಡಿಯೋ, ವಿಡಿಯೋ ಏನೇ ರಿಲೀಸ್ ಮಾಡಿದರು ನನಗೆ ಸಮಸ್ಯೆ ಇಲ್ಲ. ನಾನು ಯಾವುದೇ ಹಣ ಪಡೆದಿಲ್ಲ. ಸರ್ಕಾರಕ್ಕೂ ಯಾವುದೇ ಹಣ ತಲುಪಿಸಿಲ್ಲ ಎಂದು ಬಿಜೆಪಿ ಶಾಸಕ ಬಸವರಾಜ ದಡೇಸುಗೂರು ಹೇಳಿಕೆ ನೀಡಿದರು.

Latest article