ಮಂಡ್ಯ: ರಾಜಣ್ಣ ಅವರ ವಿಕೃತ ಮನಸ್ಥಿತಿ ಊಹಿಸಲು ಸಾಧ್ಯವಿಲ್ಲ. ದೇಶದಲ್ಲೇ ಅವರದ್ದೇ ಆದ ವ್ಯಕ್ತಿತ್ವ ಉಳಿಸಿಕೊಂಡಿರುವ ರಾಜಕಾರಣಿ ದೇವೇಗೌಡರು. ಕೀಳು ಮಟ್ಟದ ಮಾತುಗಳನ್ನ ನಾವು ಅರಗಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಶಾಸಕ ಸಿ.ಎಸ್.ಪುಟ್ಟರಾಜು, ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್ ರಾಜಣ್ಣ ಕಿಡಿಕಾರಿದ್ದಾರೆ.
ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜಣ್ಣರಂತ ಅನೇಕರನ್ನ ಬೆಳೆಸಿದ ಹೆಗ್ಗಳಿಕೆ ದೇವೇಗೌಡರದ್ದು. ರಾಜಣ್ಣರ ಹೇಳಿಕೆ ಅಭಿಮಾನಿಗಳು, ಬೆಂಬಲಿಗರಲ್ಲಿ ನೋವುಂಟು ಮಾಡಿದೆ. ಇತಿಹಾಸವುಳ್ಳ ಕಾಂಗ್ರೆಸ್ ಪಕ್ಷ ಅವರನ್ನ ಇನ್ನು ಇಟ್ಟುಕೊಂಡಿರೋದು ಸರಿಯಲ್ಲ. ಕಾಂಗ್ರೆಸ್ ಪಕ್ಷ ಅವರ ವಿರುದ್ಧ ಶೀಘ್ರ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ರಾಜಣ್ಣ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತಪಡಿಸ್ತೇವೆ. ಇಂದು ಪಾಂಡವಪುರ, ಕೆ.ಆರ್.ಪೇಟೆಯಲ್ಲಿ ಪ್ರತಿಭಟನೆ ಆಗಿದೆ. ನಾಳೆ ಮಂಡ್ಯ, ಮಳವಳ್ಳಿ, ನಾಗಮಂಗಲದಲ್ಲಿ ಉಗ್ರ ಹೋರಾಟ ನಡೆಯಲಿದೆ. ಕಾಂಗ್ರೆಸ್ ಪಕ್ಷಕ್ಕೆ ಘನತೆ ಇದ್ದರೆ ಶಿಸ್ತು ಕ್ರಮ ಕೈಗೊಳ್ಳಬೇಕು. ದೇವೇಗೌಡರು ಸೂರ್ಯ ಇದ್ದ ಹಾಗೆ. ಮೇಲೆ ನೋಡಿ ಉಗಿದರೆ ಅವರ ಮುಖಕ್ಕೆ ಉಗುಳು ಬೀಳೋದು. ಆನೆ ನಡೆಯುವಾಗ ನಾಯಿಗಳು ಬೊಗಳಿದಂತೆ ನಿಮ್ಮ ಮಾತುಗಳು. ದೇವೇಗೌಡರ ಶಾಪ ನಿಮಗೆ ತಟ್ಟದೇ ಬಿಡುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.