ಮಧುಗಿರಿ ಶೈಕ್ಷಣಿಕ ಜಿಲ್ಲೆ ಡಯಟ್ ನ ಫ್ರೀನ್ಸಿಪಲ್ ಆಗಿರುವ ರಾಮಕೃಷ್ಣಯ್ಯ ಹನುಮಂತರಾಜು ಎಂಬುವರಿಗೆ ಹೋಟೆಲ್ ಬಿಲ್ ಪಾಸ್ ಮಾಡಿಕೊಡಲು 17 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದ್ದು ಈ ಸಂಬಂಧ ಹನುಮಂತರಾಜು ಎನ್ನುವವರು ಲೋಕಾಯುಕ್ತಗೆ ದೂರು ನೀಡಿದ್ದರು.
ತುಮಕೂರು ಲೋಕಾಯುಕ್ತ ಡಿವೈಎಸ್ ಪಿ ರವೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು ಲಂಚದ ಹಣ ಪಡೆಯುವಾಗ ರೇಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಭ್ರಷ್ಟ ಫ್ರೀನ್ಸಿಪಲ್ ರಾಮಕೃಷ್ಣಯ್ಯನನ್ನ ಸದ್ಯ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.