Tuesday, August 16, 2022

ಕೊರೊನಾ ಭೀತಿ ಟಫ್​ ರೂಲ್ಸ್​​..! ನಿಮಗೆ ನಮಗಷ್ಟೇ.. ಇವರಿಗಿಲ್ಲ..!

Must read

ಅಲ್ಲಿವರೆಗೂ ಅಂತಹದ್ದೇನೂ ಇರಲಿಲ್ಲ. ಹೊಸ ವರ್ಷದ ಸಂಭ್ರಮಕ್ಕೆ ಅಂತೊಂದಷ್ಟು ಸ್ಟ್ರಿಕ್ಟ್​ ರೂಲ್ಸ್​ ಇತ್ತು ಅಷ್ಟೇ. ದಿನ ನಿತ್ಯ ಬೆಂಗಳೂರಿನಲ್ಲಿ ದಾಖಲಾಗುತ್ತಿದ್ದ ಪ್ರಕರಣಗಳ ಸಂಖ್ಯೆಯೂ ಕಡಿಮೆಯೇ ಇತ್ತು. ಆದ್ರೆ ಮೂರನೇ ಅಲೆಯ ಆರಂಭದಂತೆ ಕಾಣಿಸಿಕೊಂಡ ಕೊರೊನಾ ಪ್ರಕರಣ ಜೊತೆ ಜೊತೆಗೇ ಓಮೈಕ್ರಾನ್​ ಸೋಂಕಿನ ಆರ್ಭಟ.. ರಾಜ್ಯಾದ್ಯಂತ ಏಕಾ ಏಕಿ ಹೆಚ್ಚುತ್ತಿದ್ದಂತೆ, ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಜ್ಞರ ಸಭೆ ಕರೆದರು.

ಮುಖ್ಮಮಂತ್ರಿಗಳ ಸಭೆ ಮುಗಿಯುತ್ತಿದ್ದಂತೆ ಹೊರ ಬಂದವರೇ ಆರೋಗ್ಯ ಸಚಿವ ಡಾ. ಸುಧಾಕರ್​ ಮತ್ತು ಕಂದಾಯ ಸಚಿವ ಆರ್. ಅಶೋಕ್ ಜಂಟಿ ಸುದ್ದಿಗೋಷ್ಠಿ ನಡೆಸಿದರು.​​ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆ ನೂತನ ಕೊರೊನಾ ಮಾರ್ಗಸೂಚಿ ಹೊರಡಿಸಿದರು.

ಒಂದು ದಿನದ ನಂತರ ಸಚಿವರುಗಳು ಸುದ್ದಿಗೋಷ್ಠಿಯಲ್ಲಿ ವಿವರಿಸಿದಂತೆಯೇ ರಾಜ್ಯಾದ್ಯಂತ ಕೊರೊನಾ ಕಟ್ಟು ನಿಟ್ಟಿನ ರೂಲ್ಸ್​ ಜಾರಿಯಾದವು. ನೈಟ್​ ಕರ್ಫ್ಯೂ ರಾಜ್ಯಾದ್ಯಂತ ಎರಡು ವಾರಗಳ ಕಾಲ ವಿಸ್ತರಣೆಯಾಯಿತು. ಚಿತ್ರಮಂದಿರ, ಮಾಲ್​ಗಳಿಗೆಲ್ಲಾ 50:50 ರೂಲ್ಸ್​​ ಜಾರಿಗೆ ಬಂತು. ನಂತರದಲ್ಲಿ ವಿಪರೀತ ಜನಾಕ್ರೋಶದ ನಡುವೆಯೂ ವೀಕೆಂಡ್​ ಕರ್ಫ್ಯೂ ವಿಧಿಸಲಾಯಿತು..

ನಿಯಮ ವಿಧಿಸಿದ ಶೂರರೇ ನಿಯಮ ಧಿಕ್ಕರಿಸಿ ನಡೆಯೋದನ್ನ.. ಇಲ್ಲೆಲ್ಲಾ ಮಾಸ್ಕ್​ ನೆಪಕ್ಕೆ ಮಾತ್ರ ಇದ್ದ ಹಾಗಿದೆ ಅಷ್ಟೇ. ಆದ್ರೆ ಇಲ್ಲೆ.. ಇಲ್ಲೆಲ್ಲಾ ಸಾಮಾಜಿಕ ಅಂತರ ಇಲ್ಲ..! ಕೊರೊನಾ ಅಂತೂ ಇಂತಹಾ ವೈರಸ್​ಗಳ ನಡುವೆ ನುಸುಳೋಕೆ ಸಾಧ್ಯಾನೇ ಇಲ್ಲ..! ಹಾಗಾದ್ರೆ ನಿಯಮ ಯಾರಿಗೆ..?

ರಾಜ್ಯದ ಬಿಜೆಪಿ ಸರ್ಕಾರದ ಪ್ರತಿನಿಧಿಗಳಿಗೆ ಒಂದು ರೂಲ್ಸ್​..! ಇತರೆ ಪಕ್ಷದ ಸದಸ್ಯರಿಗೆ ಇನ್ನೊಂದು ರೂಲ್ಸ್​..! ಜನಸಾಮಾನ್ಯರಿಗಂತೂ ಹೇಳೋದೇ ಬೇಡ ಬಿಡಿ.. ಯಾಕಂದ್ರೆ ನೀವು ನಾವೂ ಅನುಭವಿಸಿದ್ದನ್ನ ಹೇಳೋವಾಗ ಕಣ್ಣುಗಳು ತುಂಬಿ ಬರುತ್ತೆ. ಕಣ್ಣೆದುರೇ ನರಳಾಡೋ ಮಕ್ಕಳು, ಹಸಿವಿನಿಂದ ಒದ್ದಾಡೋ ಮಕ್ಳು, ಕೆಲಸ ಇಲ್ಲದೆ ಪರದಾಡೋ ಶ್ರಮಿಕರು.. ಇವೆಲ್ಲವನ್ನ ಕಣ್ಣಾರೆ ಕಂಡಿರೋ ನಮಗೆ ಮತ್ತೆ ನಮ್ಮ ಜನರ ಬವಣೆಗಳನ್ನು ವಿವಿರಿಸೋದದಕ್ಕೆ ಬಹಳ ಕಷ್ಟವಾಗತ್ತೆ.. ಅದೇನಿದ್ದರೂ ಅತ್ಯಾಕರ್ಶಕವಾಗಿ ನಮ್ಮ ಜನನಾಯಕರು ಹೇಳುತ್ತಾರೆ. ಆದ್ರೆ ತಿನ್ನೋದು ಮಾತ್ರ ಬದನೇಕಾಯಿನೇ ನೋ ಡೌಟ್​​.

ಜಗ್ಗಲಿಲ್ಲ ಬಗ್ಗಲಿಲ್ಲ. ಸರ್ಕಾರದ ಯಾವುದೇ ತಂತ್ರಕ್ಕೂ ತಲೆ ಕೆಡಿಸಿಕೊಳ್ಳಲೇ ಇಲ್ಲ ಕಾಂಗ್ರೆಸ್​​ ನಾಯಕರು. ಒಂದು ಕಡೆ ಏಕಾಏಕಿ ಏರುತ್ತಿರೋ ಕೊರೊನಾ ಸೋಂಕು, ಇನ್ನೊಂದು ಕಡೆ ಪಾದಯಾತ್ರೆ ಹೊರಡಲೇ ಬೇಕೆಂದು ತೊಡೆ ತಟ್ಟಿ ಜಟ್ಟಿ ಕಟ್ಟಿ ನಿಂತ ಕಾಂಗ್ರೆಸ್​​ ನಾಯಕರು..! ಕೊನೆಗೂ ಡಿಕೆಶಿ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಪಾದಯಾತ್ರೆ ಕೊಟ್ಟೇ ಬಿಟ್ಟರು.

Also read:  ಗೂಂಡಾ ಡಿ.ಕೆ.ಶಿವಕುಮಾರ್ ಬರ್ತಾನಾ, ಜಾತಿವಾದಿ ಸಿದ್ದರಾಮಯ್ಯ ಬರ್ತಾನಾ?- ಈಶ್ವರಪ್ಪ ವಾಗ್ದಾಳಿ

ಈಗ ಕೊರೊನಾ ಮಾರ್ಗಸೂಚಿ ಧಿಕ್ಕರಿಸಿ ಪಾದಯಾತ್ರೆ ನಡೆಸಿರುವ ಕಾಂಗ್ರೆಸ್​ಗೆ ಕಾನೂನು ಕ್ರಮದ ಮೂಲಕ ಉತ್ತರ ನೀಡಲು ಬಿಜೆಪಿ ಸರ್ಕಾರ ತೀರ್ಮಾನಿಸಿದೆ. ಕನಕಪುರ ತಾಲೂಕಿನ ಸಂಗಮದಲ್ಲಿ ಕಾಂಗ್ರೆಸ್ ಪಾದಯಾತ್ರೆಗೆ ನಿನ್ನೆ ಚಾಲನೆ ದೊರಕಿತ್ತು. ಸಾವಿರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಾಲ್ಗೊಂಡು ಕಠಿಣ ಕೊರೊನಾ ನಿಯಮಗಳ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಇಂದು ಕನಕಪುರದ ತಹಶೀಲ್ದಾರ್​​ ದೂರಿನ ಮೇರೆಗೆ ಸಾತನೂರು ಪೊಲೀಸ್​ ಠಾಣೆಯಲ್ಲಿ ಕಾಂಗ್ರೆಸ್​​ನ 31 ನಾಯಕರ ಮೇಲೆ ಎನ್​ಡಿಎಂಎ ಕಾಯ್ದೆಯಡಿ ಎಫ್​​ಐಆರ್​ ದಾಖಲಿಸಿದ್ದಾರೆ.

Also read:  ಪ್ರವೀಣ್​ ಹತ್ಯೆ ಬಳಿಕ ಬಿಜೆಪಿಯಲ್ಲಿ ಹೊಸ ಪರ್ವ: ರಾಜ್ಯಾಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ ಚಿಂತನೆ

ಕೋವಿಡ್ ವೀಕೆಂಡ್ ಕರ್ಫ್ಯೂ ಉಲ್ಲಂಘನೆ ಮಾಡಿ ಮೇಕೆದಾಟು ಪಾದಯಾತ್ರೆ ಮಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಹಿತ 31 ಮಂದಿಯ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಎಫ್ಐಆರ್ ದಾಖಲಿಸಲಾಗಿದೆ. ವಿಪತ್ತು ನಿರ್ವಹಣಾ ಕಾಯ್ದೆ 2005ರ ಐಪಿಸಿ ಸೆಕ್ಷನ್ 141, 143, 290, 336ರ ಅಡಿ ಸಾತನೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾದಯಾತ್ರೆಯಲ್ಲಿ ಭಾಗವಹಿಸಿದವರು ಸಾವಿರಾರು ಜನ. ಬರೀ ಮೂವತ್ತು ಮಂದಿ ಮೇಲೆ ಎಫ್ಐಆರ್ ಹಾಕಿದ್ದೀರಿ. ಈ ಡಿ.ಕೆ ಶಿವಕುಮಾರ್ ಯಾರಿಗೂ ಹೆದರುವುದಿಲ್ಲ. ನಿಮಗೆ ತಾಕತ್ತು ಇದ್ದರೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ ಎಲ್ಲರ ವಿರುದ್ಧ ಕೇಸು ದಾಖಲಿಸಿ. ವಿಡಿಯೋ ನಾನೇ ಕಳಿಸಿಕೊಡುತ್ತೇನೆ. ಎಫ್ಐಆರ್ ದಾಖಲಿಸಿದರೆ ಸೊಪ್ಪು ಹಾಕುವರು ಯಾರು ? ಎಸ್ಪಿಗಳೇ , ಹೋಮ್ ಮಿನಿಸ್ಟರ್ ಅವರೇ ನಾನೇ ವಿಡಿಯೋ ಕಳಿಸಿಕೊಡುತ್ತೇನೆ. ಕಾನೂನಿಗೆ ಗೌರವ ಕೊಡುತ್ತೇವೆ. ಕಾನೂನು ವಿರುದ್ಧ ಆದೇಶ ಹೊರಡಿಸಿದ್ದೀರಿ. ಎಲ್ಲರ ವಿರುದ್ಧ ಕೇಸು ದಾಖಲಿಸಿ. ಯಾವುದಕ್ಕೂ ನಾವು ಹೆದರಲ್ಲ ಎಂದು ಡಿ.ಕೆ. ಶಿವಕುಮಾರ್ ಕಿಡಿ ಕಾರಿದ್ದಾರೆ.

ಪಾಪ ಎಷ್ಟೊಂದು ಕಾಳಜಿ ಜನಸಾಮಾನ್ಯರ ಮೇಲೆ.. ನಮ್ಮ ಮುಖ್ಯಮಂತ್ರಿಗಳು ಮತ್ತು ಗೃಹಸಚಿವರಿಗೆ..! ಆದ್ರೆ ಇವರ ಕಾಳಜಿ ಈವತ್ತು ಈವರದ್ದೇ ಪಾರ್ಟಿಯವರಿಂದಾಗಿ ಹಾಳಾಗಿ ಹೋಯ್ತು.. ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಬಗ್ಗೆ ಯಾರೋ ಕಿಡಿಗೇಡಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದನ್ನು ಖಂಡಿಸಿ ಶಾಸಕರ ಅಭಿಮಾನಿಗಳು ಮಠಾಧೀಶರು ಹಿಂದೂ ಪರ ಸಂಘಟನೆಗಳು ಆಳಂದ ಪಟ್ಟಣದಲ್ಲಿ ಬ್ರಹತ್ ಪ್ರತಿಭಟನೆ ನಡೆಸಿದರು. ನೂರಾರು ಜನ ಸೇರಿದ ಪ್ರತಿಭಟನಾಕಾರರು ಬಸ್ ನಿಲ್ದಾಣದ ಮುಂದೆ ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರಸ್ತೆ ತಡೆ ನಡೆಸಿದರು.

: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಯನ್ನು ಸಿಎಂ ಬೊಮ್ಮಾಯಿ ಸೇರಿದಂತೆ ಸಚಿವರು, ರಾಜ್ಯ ಬಿಜೆಪಿ ನಾಯಕರುಗಳು, ಸರ್ಕಾರದ ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿ, ರಾಜ್ಯದ ಜನರಿಗೆ ಕೋವಿಡ್ ಹರಡಲು ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಟೀಕಿಸುತ್ತಿದ್ದಾರೆ. ಈಶ್ವರಪ್ಪನವರೂ ಇದಕ್ಕೆ ಹೊರತಾಗಿಲ್ಲ ಬಿಡಿ ಇದರ ನಡುವೆಯೇ ಆಡಳಿತ ಪಕ್ಷದ ಶಾಸಕರಾದ ಹೊನ್ನಾಳಿಯ ಎಂ.ಪಿ. ರೇಣುಕಾಚಾರ್ಯ, ಸ್ವಕ್ಷೇತ್ರದ ಗ್ರಾಮವೊಂದರಲ್ಲಿ ಕೋವಿಡ್ ನಿಯಮಾವಳಿ ಉಲ್ಲಂಘನೆ ಮಾಡಿ ಜಾತ್ರಾ ಮಹೋತ್ಸವ ಆಚರಿಸಿ, ಮೆರವಣಿಗೆ ನಡೆಸಿರೋದಕ್ಕೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದರೆ, ಸರ್ಕಾರಕ್ಕೆ ಅಂತಹಾ ದೊಡ್ಡ ಇಶ್ಯೂ ಅನ್ನಿಸಲೇ ಇಲ್ಲ..!

Also read:  ಪ್ರವೀಣ್​ ಹತ್ಯೆ ಬಳಿಕ ಬಿಜೆಪಿಯಲ್ಲಿ ಹೊಸ ಪರ್ವ: ರಾಜ್ಯಾಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ ಚಿಂತನೆ

ರಾಜ್ಯಾದ್ಯಂತ ತೀವ್ರ ಆಕ್ಷೇಪ ವ್ಯಕ್ತವಾಗ್ತಾ ಇದ್ದ ಹಾಗೆ ಹೊನ್ನಾಳಿ ಶಾಸಕರು ಕ್ಷಮೆ ಯಾಚಿಸಿದ್ದಾರೆ. ಕೊರೊನಾ ವೈರಸ್​​ ರೇಣುಕಾಚಾರ್ಯರನ್ನು ಕ್ಷಮಿಸಿ, ಜಾತ್ರಾ ಮಹೋತ್ಸವದಲ್ಲಿ ಹರಡಿದ್ದವರೆಲ್ಲರಿಂದ ಹಿಂದೆ ಸರಿದು ರೇಣುಕಚಾರ್ಯರ ಬೆನ್ನು ತಟ್ಟಿ ಹೋಗಿದೆ.. Are we stupid..?

Latest article