Wednesday, June 29, 2022

ಪಠ್ಯದಲ್ಲಿ ಹೆಗಡೇವಾರ್ ಪಾಠ ಅಳವಡಿಸುವ ಸರ್ಕಾರದ ನಿರ್ಧಾರದ ವಿರುದ್ಧ ಸಿಎಂ ಇಬ್ರಾಹಿಂ ಕಿಡಿ

Must read

ಬೆಂಗಳೂರು: 10ನೇ ತರಗತಿ ಪಠ್ಯದಲ್ಲಿ ಕೆ.ಬಿ ಹೆಗಡೇವಾರ್ ಪಾಠ ಅಳವಡಿಸುವ ಸರ್ಕಾರದ ನಿರ್ಧಾರದ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಈ ಬಗ್ಗೆ ಪತ್ರದ ಮೂಲಕ ಆಕ್ರೋಶ ಹೊರಹಾಕಿರುವ ಸಿಎಂ ಇಬ್ರಾಹಿಂ , ಪಠ್ಯದಿಂದ ಭಗತ್ ಸಿಂಗ್ ಕೈಬಿಡಲಾಗಿದೆ. ಇದು ಕೇವಲ ಸಿಖ್ ಸಮುದಾಯಕ್ಕೆ ಮಾಡಿದ ಅಪಮಾನವಲ್ಲ. ಇಡೀ ದೇಶದ ನಾಗರಿಕರಿಗೆ ಮಾಡಿದ ಅಪಮಾನ. ಭಗತ್ ಸಿಂಗ್​ ಜೀವನ ಚರಿತ್ರೆಯನ್ನು ಪಠ್ಯ ತೆಗೆಯುವುದು ಶೋಚನೀಯ. ಇದನ್ನು ತೀರ್ವವಾಗಿ ಖಂಡಿಸುತ್ತೇನೆ ಎಂದಿದ್ದಾರೆ.

ಇನ್ನು ಪಠ್ಯದಲ್ಲಿ ಹೆಗಡೇವಾರ್ ಪಾಠ ಹಾಕಲು ಭಗತ್ ಸಿಂಗ್ ತೆಗೆಯಲಾಗಿದೆ. ಸ್ವತಃ ಶಿಕ್ಚಣ ಸಚಿವರು ಆರ್​ಎಸ್​ಎಸ್​ನವರು. ಹೀಗಂದ ಮಾತ್ರಕ್ಕೆ ಆರ್​ಎಸ್​ಎಸ್ ಸಂಸ್ಕೃತಿಯನ್ನು ಪಠ್ಯದಲ್ಲಿ ಅನುಸರಿಸುವುದು ಸರಿಯಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Latest article