Thursday, October 6, 2022

‘ತಾಯಿ ಹೃದಯದ ಸಿಎಂ ಬೊಮ್ಮಾಯಿ ನಡೆದಾಡುವ ರಾಜದೇವರು‘

Must read

ತುಮಕೂರು: ಸಿಎಂ ಬೊಮ್ಮಾಯಿ ನಡೆದಾಡುವ ರಾಜದೇವರು ಎಂದು ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಅವರನ್ನು ಚಿತ್ರದುರ್ಗ ಗುರುಪೀಠ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹಾಡಿ ಹೊಗಳಿದ್ದಾರೆ.

ತುಮಕೂರಿನ ಗಾಜಿನ ಮನೆಯಲ್ಲಿ ನಡೆಯುತ್ತಿರುವ ಭೋವಿ ಸಮಾಜದ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮೇಶ್ವರ ಸ್ವಾಮೀಜಿ, ಮಂಜುನಾಥ್ ಪ್ರಸಾದ್ ಅವರನ್ನು ತಮ್ಮ ಪ್ರಧಾನಿ ಕಾರ್ಯದರ್ಶಿ ಆಗಿ ಮಾಡಿದ್ದು ದೊಡ್ಡ ಗೌರವ. ಬೇರೆ ಬೇರೆ ಅಧಿಕಾರಿಗಳನ್ನು ನೇಮಿಸಿಕೊಳ್ಳುವಂತೆ ಒತ್ತಡ ಇತ್ತು. ಅದರಲ್ಲೂ ಭೋವಿ ಜನಾಂಗಕ್ಕೆ ಅವರು‌ ನ್ಯಾಯ ಕೊಟ್ಟಿದ್ದಾರೆ.  ಸಿಎಂ‌ ಅವರದ್ದು ತಾಯಿ ಹೃದಯ ಅವರ ಬಳಿ ಇರುವ ಕೋಪ ತಂದೆಯದ್ದು. ತಾಯಿ ಹೃದಯ, ತಾಯಿ ವಾತ್ಸಲ್ಯ, ತಾಯಿಯ ಮಿಡಿತ ಎಲ್ಲವೂ ಬಸವರಾಜ ಬೊಮ್ಮಾಯಿಯಲ್ಲಿದೆ. ತಾಯಿ ತನ್ನ ಮಗುವನ್ನು ನೋಡಿಕೊಂಡಂತೆ ನಮ್ಮ ರಾಜ್ಯದಲ್ಲಿ ಇಂಥಹ ಮುಖ್ಯಮಂತ್ರಿ ಸಿಕ್ಕಿದ್ದಾರೆ. ತಾಯಿ ಹೃದಯ ಮುಖ್ಯಮಂತ್ರಿ ಸಿಕ್ಕಿದ್ದು ನಮ್ಮ ಹೆಮ್ಮೆ ಎಂದಿದ್ದಾರೆ.

ಇನ್ನು ಮೈಕ್ರೋ ಮೈನಾರಿಟಿ ಮಡಿವಾಳರಿಗೂ ಹುಡುಕಿ ಸಹಾಯ ಮಾಡಿದ್ದಾರೆ ಸಾಮಾಜಿಕ ನ್ಯಾಯ ಕೊಟ್ಟ ಸಿಎಂ ಇವರು. ಅಂಬೇಡ್ಕರ್​​ ಸಂವಿಧಾನದ ಆಶಯದಂತೆ ಎಲ್ಲಾ ಸಮುದಾಯಕ್ಕೂ ಸಾಮಾಜಿಕ ನ್ಯಾಯ ಒದಗಿಸಿದ ಮುಖ್ಯಮಂತ್ರಿ ಎಂದರೆ ಅದು‌ ಬಸವರಾಜು ಬೊಮ್ಮಾಯಿ, ಲಿಂಗಾಯತ ಸಮುದಾಯದ ಅಧಿಕಾರಕ್ಕೆ ಬಂದರೆ ಬೇರೆ ಸಮುದಾದ ಜನ ಮಾತನಾಡಿಸೋದು ಕಷ್ಟ ಎಂದು ಹೇಳುತ್ತಾರೆ. ಆದರೆ ಸಿಎಂ ಬೊಮ್ಮಾಯಿ ಅವರು ಅದಕ್ಕೆ ಅಪವಾದ. ಅವರ ಸಮುದಾಯಕ್ಕಿಂತ ಬೇರೆ ಸಮುದಾಯದವರು ಅವರಿಂದ ಹೆಚ್ಚಿಗೆ ಲಾಭ ಪಡೆದಿದ್ದಾರೆ. ನಮಗೆ ಸಾಮಾಜಿಕ ನ್ಯಾಯ ಕೊಡುವ ಮುಖ್ಯಮಂತ್ರಿ ಲಭಿಸಿದ್ದಾರೆ ಎಂದರು.

Latest article