Sunday, October 2, 2022

ಜನ ಸ್ಪಂದನ ಸಮಾವೇಶದಲ್ಲಿ ಕುಣಿದು ಕುಪ್ಪಳಿಸಿ ಬಿಜೆಪಿ ನಾಯಕರು

Must read

ಬೆಂಗಳೂರು: ರಾಜ್ಯದಲ್ಲಿ ಮಳೆಯ ಅವಾಂತರದ ನಡುವೆಯೇ ಬಿಜೆಪಿ ನಾಯಕರು ಅದ್ಧೂರಿಯಾಗಿ ಜನ ಸ್ಪಂದನ ಸಮಾವೇಶ ನಡೆಸಿದ್ದಾರೆ.

ಭಾರೀ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಜನರ ಸಮಸ್ಯೆ ಆಲಿಸಬೇಕಾದ ಸಚಿವರು ಹಾಗೂ ಶಾಸಕರು ಜನ ಸ್ಪಂದನ ವೇದಿಕೆಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಸಚಿವ ಎಂಟಿಬಿ ನಾಗರಾಜ್​, ಶಾಸಕ ಎಸ್​.ಆರ್​ ವಿಶ್ವನಾಥ್​, ಸಚಿವ ಮುನಿರತ್ನ ಸಾವಿರಾರು ಕಾರ್ಯಕರ್ತರ ಮುಂದೆ ಕುಲದಲ್ಲಿ ಕೀಳ್ಯಾವುದೋ ಹಾಡಿಗೆ ಕುಣಿದು ಸಂಭ್ರಮಿಸಿದ್ದಾರೆ.

ಮಳೆಯಿಂದ ಇಡೀ ರಾಜ್ಯ ನಲುಗಿದ್ದು, ಜನ ಸಾಮಾನ್ಯರು ಮನೆಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಬೆಂಗಳೂರು ಕೂಡ ಮಳೆಗೆ ತತ್ತರಿಸಿ ಹೋಗಿದೆ. ಆದರೆ ಜನರ ಕಷ್ಟಕ್ಕೆ ಸ್ಪಂದಿಸಬೇಕಾದ ಸಚಿವರು ಮಾತ್ರ ಅದ್ಯಾವುದರ ಚಿಂತೆ ಇಲ್ಲದೇ ಕುಣಿದು ಕುಪ್ಪಳಿಸುತ್ತಿದ್ದಾರೆ. ಇದೇನಾ ನಮ್ಮ ಜನಪ್ರತಿನಿಧಿಗಳ ಜನಪರ ಕಾಳಜಿ. ಜನರ ಕಷ್ಟಕ್ಕಿಂತ ಸಚಿವರಿಗೆ ವೈಯುಕ್ತಿಕ ಪ್ರತಿಷ್ಠೆ,ಕುಣಿತವೇ ಮುಖ್ಯವಾಯ್ತೇ..? ಕಣ್ಣೀರು ಸುರಿಸುವ ಜನರ ಕಷ್ಟ ಬೇಡವಾಯ್ತೇ..? ಎಂದು ಸಾರ್ವಜನಿಕರು ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ.

Latest article