Monday, November 29, 2021

ಈ ದೇಶದ ಭಾವನೆಗಳ ಜೊತೆ ಬೆರೆತಿದೆ PM ಕೇರ್ಸ್​ ಫಂಡ್..! ಆದರೆ ಮಾಹಿತಿ ಮಾತ್ರ ನೋಡೋದಿಲ್ಲ..!

Must read

ಭಾರತ.. ಇದು ಕೇವಲ ಕಲ್ಲು ಮಣ್ಣುಗಳಿಂದ ಕೂಡಿದ ದೇಶವಲ್ಲ. ಇಲ್ಲಿರುವ ಪ್ರತಿ ಕಲ್ಲಿನಲ್ಲೂ, ಹಿಡಿ ಮಣ್ಣಿನಲ್ಲೂ ಭಾವನೆಗಳು ಬೆಸೆದುಕೊಂಡಿವೆ. ಭಾರತ ಅನ್ನೋದೇ ಒಂದು ಭಾವನೆ.. ಹೀಗಾಗಿಯೇ ಈ ಮಣ್ಣಿನ ಪ್ರತಿ ಜೀವಿಯೂ ಭಾವನಾತ್ಮಕ ಜೀವಿಯಾಗಿದ್ದಾನೆ.. ಭಾರತ ಕ್ರಿಕೆಟ್​ನಲ್ಲಿ ಗೆದ್ದರೂ ಜನರ ಕಂಗಳು ತುಂಬಿ ಬರುತ್ತವೆ.. ದೇಶದ ಗಡಿ ಕಾಯುವ ಯೋಧನನ್ನ ಕಂಡರೂ ಜನರ ಕಂಗಳು ತುಂಬಿ ಬರುತ್ತವೆ. ಈ ಕಾರಣಕ್ಕಾಗಿಯೇ ಭಾರತ ಇಡೀ ಜಗತ್ತಿನಲ್ಲೇ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತೆ.

ಭಾರತೀಯ ಜನಾಂಗವೇ ಅಂಥಾದ್ದು. ಭಾವನೆಗಳ ಜೊತೆ, ಭಾವನೆಗಳನ್ನ ಗೌರವಿಸುತ್ತಾ ಬದುಕುವ ಜನಾಂಗ.. ದೇಶವೇ ಆಗಿರಲಿ, ದೇಶದ ಜನರೇ ಆಗಿರಲಿ, ಕಷ್ಟಕ್ಕೆ ಸಿಲುಕಿದವರನ್ನ ಕಂಡೊಡನೆ, ತನ್ನದೆಲ್ಲವನ್ನೂ ದಾನ ಮಾಡುವ ಗುಣ ರಕ್ತದಲ್ಲೇ ಬೆರೆತಿದೆ.. ಅದಕ್ಕೆ ಬೆಸ್ಟ್ ಎಕ್ಸಾಂಪಲ್​ಪಿಎಂ ಕೇರ್ಸ್​ ಫಂಡ್​.

ಇಡೀ ದೇಶ ಕೋವಿಡ್​ ಸಂಕಷ್ಟದಲ್ಲಿದ್ದಾಗ ನಮ್ಮ ದೇಶದ ಘನತೆವೆತ್ತ ಪ್ರಧಾನಮಂತ್ರಿಗಳು ಒಂದೇ ಒಂದು ಕರೆ ನೀಡಿದರು. ದೇಶವನ್ನ ಕಾಪಾಡಲು, ದೇಶದ ಜನರನ್ನ ಕಾಪಾಡಲು ಎಲ್ಲರೂ ಕೈಜೋಡಿಸಿ ಎನ್ನುವ ಕರೆಯದು. ಆ ಒಂದು ಕರೆ, ಜಸ್ಟ್​ ಒಂದೇ ಒಂದು ಕರೆ ಅಷ್ಟೇ.. ದೇಶದ ಮೂಲೆ ಮೂಲೆಯಿಂದಲೂ ಜನರ ಸಹಾಯ ಸಾಗರೋಪಾದಿಯಲ್ಲಿ ಹರಿದು ಬಂದಿತ್ತು.. ಪ್ರಧಾನಿಗಳಿ ಕರೆ ನೀಡಿದ ಕೇವಲ ನಾಲ್ಕೇ ನಾಲ್ಕು ದಿನಕ್ಕೆ 3,076 ಕೋಟಿ ರೂಪಾಯಿ ಪಿಎಂ ಕೇರಸ್​ ಫಂಡ್​ನಲ್ಲಿ ಸಂಗ್ರಹವಾಗಿತ್ತು.

ಪ್ರಧಾನಮಂತ್ರಿಗಳ ಆ ಕರೆಯಲ್ಲಿ ಅಂಥಾದ್ದೊಂದು ನುಡಿಯಿತ್ತು. ಈ ದೇಶವನ್ನ ಗಟ್ಟಿಗೊಳಿಸೋಕೆ, ಕೋವಿಡ್​ನಿಂದ ಬಳಲುತ್ತಿರುವವರನ್ನ ರಕ್ಷಿಸೋಕೆ, ನಮ್ಮ ನಿಮ್ಮ ಸಹೋದರರನ್ನ, ಸಹೋದರಿಯರನ್ನ ರಕ್ಷಣೆ ಮಾಡೋಕೆ, ಕೊರೊನಾ ಸಂಕಷ್ಟದಲ್ಲಿ ನಲುಗುತ್ತಿರುವವರನ್ನ ಬದುಕಿಸೋಕೆ ಸಹಾಯ ಹಸ್ತ ಚಾಚಿ ಎಂದಿದ್ದರು ಪ್ರಧಾನಿ ಮೋದಿ.. ಅದೊಂದು ಭಾವನಾತ್ಮಕ ಕರೆಯಾಗಿತ್ತು. ಆ ಒಂದು ಕರೆಗೆ ಭಾರತೀಯರಷ್ಟೇ ಅಲ್ಲ, ವಿದೇಶದಲ್ಲಿ ವಾಸಿಸುತ್ತಿರುವ ಭಾರತೀಯರು ಕೂಡ ತಮ್ಮದೆಲ್ಲವನ್ನೂ ದಾನ ಮಾಡಿದ್ದರು. ಅವರೆಲ್ಲರ ಉದ್ದೇಶ ಒಂದೇ.. ಭಾರತೀಯರ ರಕ್ಷಣೆ.. ಭಾರತ ದೇಶದ ರಕ್ಷಣೆ.

Also read:  ಹೊಂಡ ಬಿದ್ದ ರಸ್ತೆಗಳಿಂದ ಇನ್ನು ಅದೆಷ್ಟು ಹೆಣಗಳು ಬೀಳಬೇಕೋ..?

ಆದರೆ ದೇಶದ ಜನರಲ್ಲಿ ಮನವಿ ಮಾಡಿ ಹಣ ಸಂಗ್ರಹ ಮಾಡಿದ ಪ್ರಧಾನಿಗಳು, ಪಿಎಂ ಕೇರ್ಸ್​ ಫಂಡ್​ನ ಮಾಹಿತಿಯನ್ನ ನೀಡಲು ನಿರಾಕರಿಸಿದ್ದಾರೆ.. ಹಾಗಾದ್ರೆ ಪಿಎಂ ಕೇರ್ಸ್​ ಫಂಡ್​ನ್ನ ಸಂಗ್ರಹಿಸಿದ್ದೇಕೆ.. ಅದರಲ್ಲಿ ಇಷ್ಟೊಂದು ಸೀಕ್ರೆಟ್​ ಏಕೆ..? ARE WE STUPID..?

Latest article