Wednesday, June 29, 2022

ರಾಹುಲ್‌ ಗಾಂಧಿ ED ತನಿಖೆ ಹಿಂದೆ ಯಾರ ಕೈವಾಡವೂ ಇಲ್ಲ-ಸಚಿವ ಆರಗ ಜ್ಞಾನೇಂದ್ರ

Must read

ಹುಬ್ಬಳ್ಳಿ: ರಾಹುಲ್‌ ಗಾಂಧಿ ED ತನಿಖೆ ಹಿಂದೆ ಯಾರ ಕೈವಾಡವೂ ಇಲ್ಲ. ಯಾರು ತಪ್ಪು ಮಾಡಿದ್ದಾರೆ, ಯಾರು ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ ಅವರನ್ನು ED ವಿಚಾರಣೆಗೆ ಕರೆಯುತ್ತಾರೆ, ಕರೆಯಬೇಡಿ ಎಂದು ನಾವು ಹೇಳಲಾಗುತ್ತದೆಯೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನಿಸಿದ್ದಾರೆ.

ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ದೇಶದಲ್ಲಿ ಗಾಂಧಿ ಕುಟುಂಬಕ್ಕೆ ಒಂದು ಕಾನೂನು, ಜನಸಾಮಾನ್ಯರಿಗೆ ಒಂದು ಕಾನೂನು ಇದೆಯೇ..? ಎಲ್ಲರಿಗೂ ಒಂದೇ ಕಾನೂನು ಇದೆ. ಈ ವಿಚಾರಕ್ಕೆ ಇಡೀ ದೇಶದಾದ್ಯಂತ ಕಾಂಗ್ರೆಸ್‌ನವರು ಪ್ರತಿಭಟನೆ ಮಾಡುತ್ತಿದ್ದಾರೆ. ಅವರಿಗೆ ನಾಚಿಕೆಯಾಬೇಕು, ಕಾನೂನು, ಕಾಯ್ದೆ ಇವರೇ ಗೌರವಿಸದಿದ್ದರೆ, ಇನ್ಯಾರು ಗೌರವಿಸಬೇಕು. ED ವಿಚಾರಣೆಯಲ್ಲಿ ತಪ್ಪು ಮಾಡದಿದ್ದರೆ ಹೊರಗೆ ಬರುತ್ತಾರೆ, ಇಲ್ಲ ಶಿಕ್ಷೆ ಅನುಭವಿಸುತ್ತಾರೆ ಎಂದರು.

ಪಿಎಸ್‌ಐ ನೇಮಕಾತಿ ಹಗರಣದ ತನಿಖೆ ವಿಚಾರವಾಗಿ ಮಾತನಾಡಿದ ಅವರು, ಪ್ರಕರಣ ಸಂಬಂಧ ಸಂಪೂರ್ಣ ತನಿಖೆಗೆ ಆದೇಶ ಕೊಟ್ಟಿದ್ದೇವೆ, ಯಾರು ಕೂಡ ಮಧ್ಯೆ ಪ್ರವೇಶ ಮಾಡುವುದಿಲ್ಲ. ಒಳ್ಳೆಯ ಸಿಐಡಿ ಬ್ಯಾಚ್ ಮಾಡಿ ತನಿಖೆಗೆ ಬಿಟ್ಟಿದ್ದೇವೆ. ಯಾರ್ಯಾರು ಪೊಲೀಸ್ ಅಧಿಕಾರಿಗಳಿದ್ದರು, ಯಾರ್ಯಾರು ಬ್ರೋಕರ್‌ಗಳಿದ್ರು, ಯಾರ್ಯಾರು ನೇರವಾಗಿ ಹಣ ಕೊಟ್ಟಿದ್ದಾರೆ, ಯಾರ್ಯಾರು ಪರೀಕ್ಷೆಯಲ್ಲಿ ಅಕ್ರಮ ಮಾಡಿದ್ದಾರೆ ಅವರೆಲ್ಲರನ್ನೂ ಜೈಲಿಗೆ ಕಳುಹಿಸುವ ಕೆಲಸ ಆಗುತ್ತಿದೆ. ನಿನ್ನೆ ಕೂಡ ಒಬ್ಬರನ್ನು ಜೈಲಿಗೆ ಕಳುಹಿಸಿದ್ದಾರೆ ಎಂದರು.

Latest article