Thursday, May 19, 2022

ಪಿಎಂ ಕೇರ್ಸ್ ಫಂಡ್​ಗೆ ಸಂಬಂಧಿಸಿದ ದಾಖಲೆ ಪಡೆಯುವುದು ಹೇಗೆ ಗೊತ್ತಾ..?

Must read

ದೇಶಾದ್ಯಂತ ಪಿಎಂ ಕೇರ್ಸ್​ ಫಂಡ್​ಗೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿದೆ. ಯಾಕಂದ್ರೆ, ಸ್ವತಃ ಪ್ರಧಾನಮಂತ್ರಿಗಳ ಕಾರ್ಯಾಲಯವೇ ಪಿಎಂ ಕೇರ್ಸ್ ಫಂಡ್​ಗೂ ಕೇಂದ್ರ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿಬಿಟ್ಟಿದೆ. ಹೀಗಾಗಿ ಪ್ರತಿಯೊಬ್ಬರಲ್ಲೂ ಗೊಂದಲ ಉಂಟಾಗಿದೆ. ಅನುಮಾನ ಸೃಷ್ಟಿಯಾಗಿದೆ. ಪ್ರಶ್ನೆಗಳು ಎದ್ದಿವೆ. ಆ ಎಲ್ಲಾ ಪ್ರಶ್ನೆ, ಅನುಮಾನಗಳಿಗೂ ಪಿಎಂ ಕೇರ್ಸ್​ ಫಂಡ್​ಗೆ ಸಂಬಂಧಿಸಿದ ದಾಖಲೆಗಳಲ್ಲಿ ಉತ್ತರವಿದೆ. ಆ ದಾಖಲೆಗಳನ್ನ ಪಡೆಯುವುದು ಹೇಗೆ ಎನ್ನುವುದನ್ನ ನೀವು ಕೂಡ ತಿಳಿದುಕೊಳ್ಳಿ.

ನಿಮ್ಮ ಮೊಬೈಲ್ ಅಥವಾ ಡೆಸ್ಕ್​ಟಾಪ್​ನಲ್ಲಿ ನೀವು ಕೇವಲ pmcaresfund.gov.in ಎಂದು ಟೈಪ್​ ಮಾಡಿ. Prime Minister’s Citizen Assistance and Relief in Emergency Situations Fund ಹೆಸರಿನ ವೆಬ್​ಸೈಟ್​ ಓಪನ್​ ಆಗುತ್ತೆ. ಆ ವೆಬ್​ಸೈಟ್​ನ ಮೊದಲ ಪ್ಯಾರಾಗ್ರಾಫ್​ನಲ್ಲಿ The trust deed of PM CARES Fund ಎಂದು ಬೋಲ್ಡ್​ ಲೆಟರ್​ನಲ್ಲಿ ಬರೆಯಲಾಗಿದೆ. ಅದನ್ನ ಕ್ಲಿಕ್​ ಮಾಡಿದ ಕೂಡಲೇ ನಿಮ್ಮ ಮುಂದೆ ಪಿಎಂ ಕೇರ್ಸ್​ ಫಂಡ್​ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳ ಪಿಡಿಎಫ್​ ಕಾಪಿ ತೆರೆದುಕೊಳ್ಳುತ್ತವೆ.

ಪಿಎಂ ಕೇರ್ಸ್​ ಫಂಡ್​ನ ಪ್ರತಿಯೊಂದು ದಾಖಲೆಯ ಮೇಲೂ ನರೇಂದ್ರ ಮೋದಿಯವರು ಸಹಿ ಮಾಡಿದ್ದಾರೆ. ಜೊತೆಗೆ ಆ ಟ್ರಸ್ಟ್​ನಲ್ಲಿ ರಕ್ಷಣಾ ಸಚಿವರು, ಕೇಂದ್ರ ಗೃಹಮಂತ್ರಿಗಳು, ಹಾಗೂ ಕೇಂದ್ರ ಹಣಕಾಸು ಸಚಿವರುಗಳು ಕೂಡ ಟ್ರಸ್ಟಿಗಳಾಗಿದ್ದಾರೆ. ಕೊನೆಯಲ್ಲಿ ನರೇಂದ್ರ ಮೋದಿ, ಭಾರತ ದೇಶದ ಪ್ರಧಾನಮಂತ್ರಿಗಳ ಸಹಿಯೂ ಇದೆ. ದಾಖಲೆಗಳೇ ಜಗತ್ತಿನ ಮುಂದೆ ಇದ್ದರೂ ಕೇಂದ್ರ ಸರ್ಕಾರ ಇದೊಂದು ಖಾಸಗಿ ವಿಷಯ ಎಂದು ಹೇಳಿದೆ. ಒಂದು ಸರ್ಕಾರದ ಪ್ರಮುಖ ನಾಲ್ಕು ಹುದ್ದೆಯಲ್ಲಿದ್ದವರು ಇಂತಹ ಖಾಸಗಿ ಹಣ ಸಂಗ್ರಹ ಮಾಡುತ್ತಿರುವುದೇಕೆ ಯೋಚಿಸಿ. ARE WE STUPID..?

Latest article