Thursday, January 20, 2022

ಸ್ವಿಫ್ಟ್ ಕಾರಿಗೆ ಟ್ರಕ್ ಡಿಕ್ಕಿ: ಭೀಕರ ಅಪಘಾತದಲ್ಲಿ ಇಡೀ ಕುಟುಂಬ ಸಾವು, ಒಂದೇ ಚಿತಾಗಾರದಲ್ಲಿ ಎಲ್ಲರ ಅಂತ್ಯ ಸಂಸ್ಕಾರ!

Must read

ಮಧ್ಯಪ್ರದೇಶದ ಸತ್ನಾ ಬಳಿ ನಡೆದ ಭೀಕರ ಅಪಘಾತದಲ್ಲಿ ಇಡೀ ಕುಟುಂಬ ಸಾವನ್ನಪ್ಪಿದೆ. ಪತಿ-ಪತ್ನಿ ಹಾಗೂ ಮಗು ಸೇರಿದಂತೆ ಕಾರು ಅಪಘಾತದಲ್ಲಿ ಕುಟುಂಬದ 4 ಮಂದಿ ಸಾವನ್ನಪ್ಪಿದ್ದು ಮಧ್ಯಪ್ರದೇಶದ ಸತ್ನಾ ಬಳಿ ನಡೆದ ಭೀಕರ ಅಪಘಾತದಲ್ಲಿ ಇಡೀ ಕುಟುಂಬ ಸಾವನ್ನಪ್ಪಿದೆ. ವೇಗವಾಗಿ ಬಂದ ಟ್ರಕ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿ ಪತಿ-ಪತ್ನಿ ಹಾಗೂ ಅವರ ಇಬ್ಬರು ಪುಟ್ಟ ಮಕ್ಕಳು ಸಾವನ್ನಪ್ಪಿದ್ದಾರೆ. ಕುಟುಂಬವು ಜಮ್ತಾಲ್‌ನಲ್ಲಿ ವಾಸಿಸುತ್ತಿತ್ತು. ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಕುಟುಂಬ ಹಿಂತಿರುಗುತ್ತಿತ್ತು ಎನ್ನಲಾಗಿದ್ದು ಇದೇ ವೇಳೆ ತಡರಾತ್ರಿ ಅಪಘಾತ ಸಂಭವಿಸಿದೆ. ಇಡೀ ಕುಟುಂಬವನ್ನು ಒಂದೇ ಚಿತಾಗಾರದಲ್ಲಿ ಸಂಸ್ಕಾರ ಮಾಡಲಾಯಿತು. ಸತ್ನಾ ಜಿಲ್ಲೆಯ ಮೈಹಾರ್‌ನ ಜಿತ್‌ನಗರ ಬಳಿ ಈ ದುರ್ಘಟನೆ ನಡೆದಿದೆ. ವೇಗವಾಗಿ ಬಂದ ಟ್ರಕ್ ಎದುರಿಗೆ ಬಂದ ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆ ತೀವ್ರವಾಗಿದ್ದು, ಪೋಷಕರು ಮತ್ತು ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜಬಲ್‌ಪುರದ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಬಾಲಕ ಮೃತಪಟ್ಟಿದ್ದಾನೆ. ಇದೇ ವೇಳೆ ಟ್ರಕ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಮೈಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಜಿತ್‌ನಗರ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ. ಮಾರುತಿ ಸ್ವಿಫ್ಟ್ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದೆ. ಮೃತರನ್ನು ಜಮ್ತಾಲ್‌ನ ಸತ್ಯಂ ಉಪಾಧ್ಯಾಯ (40), ಅವರ ಪತ್ನಿ ಮೋನಿಕಾ (35), ಪುತ್ರಿ ಇಶಾನಿ (8) ಮತ್ತು ಮಗ ಸ್ನೇಹಾ (10) ಎಂದು ಗುರುತಿಸಲಾಗಿದೆ. ಮೃತ ಸತ್ಯಂ ಉಪಾಧ್ಯಾಯ ಅವರು ಮೊಬೈಲ್ ಫೋನ್ ಅಂಗಡಿಯನ್ನು ಹೊಂದಿದ್ದರು. ಅವರ ನಿಧನಕ್ಕೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಂತಾಪ ವ್ಯಕ್ತಪಡಿಸಿದ್ದಾರೆ.

Latest article