Tuesday, August 16, 2022

ಸೆಕೆಂಡುಗಳ ಅಂತರದಲ್ಲಿ ಬಸ್ಸಿನಿಂದ ಪಾರಾದ ಸ್ಕೂಟಿ ಸವಾರ: ಪವಾಡ ಅಂದರೆ ಇದೇನಾ?

Must read

ಅಪಘಾತಗಳು ಮನುಷ್ಯನ ಜೀವನದಲ್ಲಿ ಸರ್ವೇ ಸಾಮಾನ್ಯ, ಒಮ್ಮೆ ಅಪಘಾತದಲ್ಲಿ ಸಿಲುಕಿದ ಮನುಷ್ಯ ಮತ್ತೆಂದೂ ಅಜಾಗರೂಕತೆಯಿಂದ ವಾಹನ ಚಲಾಯಿಸಲಾರ. ಅದೇ ರೀತಿಯ ಘಟನೆ ವೀಡಿಯೊದಲ್ಲಿ ಇದ್ದು, ಯು-ಟರ್ನ್ ತೆಗೆದುಕೊಳ್ಳಲು ಬಸ್ ರಸ್ತೆಯೊಂದರಲ್ಲಿ ನಿಲ್ಲುವುದನ್ನು ಕಾಣಬಹುದು.
ಬಸ್ ಚಾಲಕ ವಾಹನವನ್ನು ಬೇರೆ ಕಡೆಗೆ ತಿರುಗಿಸಲು ಪ್ರಯತ್ನಿಸಿದಾಗ, ಸ್ಕೂಟಿ ಓಡಿಸುತ್ತಿದ್ದ ವ್ಯಕ್ತಿ ಅತಿ ವೇಗವಾಗಿ ಬಸ್ಸನ್ನು ಹಾದು ಹೋಗಿದ್ದು ಅದೃಷ್ಟವಶಾತ್, ಚಾಲಕ ಪಾರಾಗಿದ್ದಾನೆ.

 

ಮಂಗಳೂರಿನ ಎಲ್ಯಾರಪದವು ಬಳಿ ಯೂ ಟರ್ನ್ ತೆಗೆದುಕೊಳ್ಳುತ್ತಿದ್ದ ಬಸ್‌ಗೆ ಸ್ಕೂಟರ್‌ನಲ್ಲಿ ವೇಗವಾಗಿ ಬಂದ ಯುವಕನೊಬ್ಬ ಡಿಕ್ಕಿ ಹೊಡೆಯುವುದನ್ನು ಪವಾಡಸದೃಶ ರೀತಿಯಲ್ಲಿ ತಪ್ಪಿಸಿದ ವಿಡಿಯೋ ವೈರಲ್ ಆಗಿದ್ದು, ನಂತರ ಸ್ಕೂಟರ್ ಮೀನು ಸಂಸ್ಕರಣಾ ಘಟಕದ ಬಾಗಿಲಿಗೆ ಡಿಕ್ಕಿ ಹೊಡೆದು ಅಂಗಡಿ ನಡುವೆ ಹಾದು ಹೋಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 36,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಇದರ ಕುರಿತು ಹಲವಾರು ಜನ ಕಾಮೆಂಟ್ ಮಾಡಿದ್ದು ಒಬ್ಬರು “ಸಂಪೂರ್ಣವಾಗಿ ಬಸ್‌ನ ತಪ್ಪು ಆ ರೀತಿಯಲ್ಲಿ ಯು-ಟರ್ನ್ ತೆಗೆದುಕೊಳ್ಳಲು ಯಾರು ಕಲಿಸಿದರು!?” ಎಂದರೆ, ಮತ್ತೊಬ್ಬರು, “ಇಬ್ಬರೂ ಚಾಲಕರದ್ದು ತಪ್ಪಿದೆ, ಇಬ್ಬರೂ ಆತುರದಲ್ಲಿದ್ದಾರೆ ಎಂದು ತೋರುತ್ತದೆ. ಖಾಲಿ ರಸ್ತೆಯನ್ನು ನೋಡಿದ ಬಸ್ ಚಾಲಕ ವೇಗವಾಗಿ ಯು-ಟರ್ನ್ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾನೆ ಎಂದಿದ್ದಾರೆ.

Latest article