Thursday, January 20, 2022

ದಿಢೀರನೆ ಬಂಡೆ ಕುಸಿದು 7 ಜನ ಜಲಸಮಾಧಿಯಾದ ಭೀಕರ ವಿಡಿಯೋ ಈಗ ಎಲ್ಲೆಡೆ ವೈರಲ್!

Must read

ಬ್ರೆಜಿಲ್​ನ ಮಿನಾಸ್ ಗೆರೈಸ್ ರಾಜ್ಯದ ಸರೋವರದಲ್ಲಿ ಏಕಾಏಕಿ​ ಬಂಡೆ ಕುಸಿದು 7 ಮಂದಿ ಜಲಸಮಾಧಿಯಾಗಿರುವ ಘಟನೆ ನಡೆದಿದೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದ್ದು ಗೆರೈಸ್ ರಾಜ್ಯದ ಸರೋವರದಲ್ಲಿ ದೋಣಿ ಸವಾರಿ ಮಾಡುತ್ತಿದ್ದವರ ಮೇಲೆ ದಿಢೀರ್ ಬೃಹತ್​ ಗಾತ್ರದ ಬಂಡೆಯೊಂದು ಕುಸಿದಿರುವ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಅವಘಡದಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಜೊತೆಗೆ 32 ಮಂದಿಗೆ ಗಾಯಗಳಾಗಿದ್ದು, 20 ಜನರು ನಾಪತ್ತೆಯಾಗಿದ್ದಾರೆ.

 

ಮೂರು ಪ್ರವಾಸಿ ದೋಣಿಗಳು ನಾಪತ್ತೆಯಾಗಿದ್ದು, ಕಾಣೆಯಾದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Latest article