ನನ್ನ ಹಿಂದೆ ಸಿಎಂ ಯಡಿಯೂರಪ್ಪ ಇದ್ದಿದ್ದಕ್ಕೆ 'ಅಧ್ಯಕ್ಷ'ರಾಗಿ ಮುಂದುವರೆದೆ- ಶಾಮನೂರು ಶಿವಶಂಕರಪ್ಪ.!

ನನ್ನ ಹಿಂದೆ ಸಿಎಂ ಯಡಿಯೂರಪ್ಪ ಇದ್ದಿದ್ದಕ್ಕೆ 'ಅಧ್ಯಕ್ಷ'ರಾಗಿ ಮುಂದುವರೆದೆ- ಶಾಮನೂರು ಶಿವಶಂಕರಪ್ಪ.!

ದಾವಣಗೆರೆ: ವಚನಾನಂದ ಸ್ವಾಮೀಜಿ ಬಹಳ ಸ್ಪೀಡಾಗಿ ಹೋಗ್ತಾ ಇದ್ದಾರೆ. ಇದೇ ಸ್ಪೇಡ್​ನಲ್ಲಿ ಹೋದರೆ ಅಪಘಾತವಾಗುತ್ತದೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ವ್ಯಂಗ್ಯವಾಡಿದ್ದಾರೆ.

ಇತ್ತೀಚೆಗೆ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಅವರು ಮುರುಗೇಶ್​ ನಿರಾಣಿಯನ್ನ ಸಚಿವರನ್ನಾಗಿ ಮಾಡಲೇಬೇಕು ಎಂದು ಸಿಎಂ ಯಡಿಯೂರಪ್ಪ ಅವರಿಗೆ ಎಚ್ಚರಿಕೆ ನೀಡಿದ್ದರು. ಒಂದು ವೇಳೇ ಸಚಿವ ಸ್ಥಾನ ನೀಡದಿದ್ದರೆ ನಮ್ಮ ಸಮುದಾಯದ ತಾಕತ್ತು ತೋರಿಸಬೇಕಾಗುತ್ತದೆ ಎಂದಿದ್ದರು.

ಇದಕ್ಕೆ ಜಿಲ್ಲೆಯ ಹರಿಹರ ತಾಲೂಕಿನ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಮಾತನಾಡಿದ ಶಾಮನೂರು ಶಿವಶಂಕರಪ್ಪ ಅವರು, ಅದೇ ರೀತಿ ಸ್ವಾಮೀಜಿಗಳು ನಿಧಾನವಾಗಿ ಸಮಾಜದ ಅಭಿವೃದ್ದಿ ಕಾರ್ಯ ಮಾಡಬೇಕು, ಸರ್ಕಾರ ವಿರುದ್ದ ಹೋದರೆ ನಮ್ಮ ಯಾವುದೇ ಕೆಲಸ ಆಗಲ್ಲ ಎಂದರು.

ಅಂತೆಯೇ ಮಾತನಾಡಿದ ಅವರು, ಸಿಎಂ ಅವರನ್ನ ಬೆನ್ನುತಟ್ಟಿ ಅವರ ಜೊತೆ ಹೋಗಬೇಕು. ಯಡಿಯೂರಪ್ಪ ನಮ್ಮವರು, ನಮ್ಮ ಮಠಗಳಿಗೆ ಸಾಕಷ್ಟು ಹಣ ನೀಡಿದ್ದಾರೆ. ಅಲ್ಲದೇ, ಸರ್ಕಾರದಲ್ಲಿ ನಮ್ಮ ಜನಾಂಗದ ಅಧಿಕಾರಿಗಳನ್ನ ಯಡಿಯೂರಪ್ಪ ಕೆಲಸ ನೀಡಿದ್ದಾರೆ. ಸಿದ್ದರಾಮಯ್ಯ ಇದ್ದ ಸಂದರ್ಭದಲ್ಲಿ ಬರೀ ಕುರುಬರೇ ಇದ್ರೂ ಎಂದು ಕಿಡಿಕಾರಿದರು.

ಅಲ್ಲದೇ, ವೀರಶೈವ ಲಿಂಗಾಯತ ಇದನ್ನು ಶಮನ ಮಾಡಿ ಒಂದು ಮಾಡುವುದು ಹೇಗೆ ಎಂದು ಗೊತ್ತಾಗ್ತಾ ಇರದ ಸಂದರ್ಭದಲ್ಲಿ, ನನ್ನನ್ನ ಯಡಿಯೂರಪ್ಪ ಅವರು ಬೆನ್ನು ತಟ್ಟಿ ನಾನಿದ್ದೇನೆ ಎಂದಿದ್ದಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿ ಮುಂದುವರೆಯುತ್ತಿದ್ದೇನೆ ಎಂದು ಶಾಮನೂರು ಶಿವಶಂಕರಪ್ಪ ಅವರು ಹೇಳಿದರು.

Related Stories

No stories found.
TV 5 Kannada
tv5kannada.com