2019ರಲ್ಲಿ ಚಂದನವನದಲ್ಲಿ ನಡೆದ ಮದುವೆ ಸಂಭ್ರಮದ ಸಣ್ಣ ಝಲಕ್..

2019ರಲ್ಲಿ ಚಂದನವನದಲ್ಲಿ ನಡೆದ ಮದುವೆ ಸಂಭ್ರಮದ ಸಣ್ಣ ಝಲಕ್..

2019ನೇ ವರ್ಷವನ್ನ ಯಶಸ್ವಿಯಾಗಿ ಪೂರೈಸಿ 2020ಕ್ಕೆ ಕಾಲಿಡ್ತಿದೆ ನಮ್ಮ ಸ್ಯಾಂಡಲ್​ವುಡ್. ಹಾಗೇ 2019ರಲ್ಲಿ ಚಂದನವನ ಸಾಕಷ್ಟು ಸಂಭ್ರಮಗಳಿಗೆ ಸಾಕ್ಷಿಯಾಗಿದೆ.

ಸ್ಯಾಂಡಲ್​​ವುಡ್​ನಲ್ಲಿ ಜೋರಾಗಿದೆ ಮದುವೆ ಸಂಭ್ರಮ

ದೊಡ್ಮನೆ ಯುವ, ಆ್ಯಕ್ಷನ್​ ಪ್ರಿನ್ಸ್​ ಧ್ರುವಾಗೇ ಕಂಕಣ ಭಾಗ್ಯ

2019 ನಮ್ಮ ಸ್ಯಾಂಡಲ್​​ವುಡ್​ನ ಸಾಕಷ್ಟು ಸೆಲೆಬ್ರೆಟಿಗಳಿಗೆ ಸಿಹಿ ನೆನಪುಗಳನ್ನ ತಂದುಕೊಟ್ಟ ವರ್ಷ. ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾದ ವರ್ಷ.ಅದ್ರಲ್ಲೂ ಈ ವರ್ಷದಲ್ಲಿ ಹೆಚ್ಚು ಸುದ್ದಿ ಮಾಡಿದ್ದೇ ದೊಡ್ಮನೆ ಯುವರಾಜ್​ಕುಮಾರನ ಮದುವೆ. ದೊಡ್ಮನೆಯಲ್ಲಿ ಏನೇ ಸಂಭ್ರಮವಾದ್ರೂ ಅಭಿಮಾನಿಗಳಿಗೆ ಸಂತೋಷ-ಸಡಗರ. ಅದ್ರಂತೆ ಕಳೆದ ವರ್ಷ ಅಂದ್ರೆ 2018 ಜುಲೈ ನಲ್ಲಿ ಯುವರಾಜ್​ಕುಮಾರ್ ಗೆಳತಿ ಶ್ರೀದೇವಿ ಭೈರಪ್ಪ ಜೊತೆ ಎಂಗೇಜ್​ ಆಗಿದ್ರು. ಅದ್ರಂತೆ ಈ ವರ್ಷ ಮೇ 26 ರಂದು ಬೆಂಗಳೂರಿನ ಮೇನ್​ ಪ್ಯಾಲೇಸ್​ನಲ್ಲಿ ಅದ್ದೂರಿಯಾಗಿ ಮದುವೆಯಾದ್ರು ಈ ಜೋಡಿ.

ದೊಡ್ಮನೆ ಮದುವೆ ಅಂದ್ರೆ ಕೇಳ್ಬೇಕಾ ಇಡೀ ಸ್ಯಾಂಡಲ್​​ವುಡ್​ ಗಣ್ಯರು ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ರು. ಅಷ್ಟೇ ಅಲ್ಲಾ ಟಾಲಿವುಡ್​ ಮೆಗಾಸ್ಟಾರ್ ಚಿರಂಜೀವಿ ಕೂಡ ಯುವ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ರು.

ಚಂದನವನದಲ್ಲಿ ಯುವ ಮದುವೆ ನಂತ್ರ ಸಖತ್​ ಸುದ್ದಿ ಮಾಡಿದ ಮತ್ತೊಬ್ಬ ಸ್ಟಾರ್ ಮದುವೆ ಅಂದ್ರೆ ಆ್ಯಕ್ಷನ್​ ಪ್ರಿನ್ಸ್​ ಧ್ರುವಾ ಸರ್ಜಾ ವಿವಾಹ ಮಹೋತ್ಸವ. ಕಳೆದ ವರ್ಷ ಡಿಸೆಂಬರ್​​ನಲ್ಲಿ ಎಂಗೇಜ್​ಮೆಂಟ್ ಮಾಡಿಕೊಂಡ ಧ್ರುವಾ ಪ್ರೇರಣಾ ಜೋಡಿ ಈ ವರ್ಷ ಅಂದ್ರೆ 2019 ನವೆಂಬರ್ 24 ರಂದು ಜೆ.ಪಿ.ನಗರದ ಸಂಸ್ಕ್ರತಿ ಬೃಂದಾವನ ಕನ್ವೆನ್ಷನ್ ಹಾಲ್​ನಲ್ಲಿ ಅದ್ದೂರಿಯಾಗಿ ಮದುವೆ ಮಾಡಿಕೊಂಡ್ರು.

ನವೆಂಬರ್ 24 ರಂದು ಬೆಳಿಗ್ಗೆ ಮದುವೆ ಮತ್ತು ಸಂಜೆ ಆರತಕ್ಷತೆ ಕಾರ್ಯಕ್ರಮ ನೆರವೇರಿದ್ದು, ಸ್ಯಾಂಡಲ್​​ವುಡ್​ನ ಗಣ್ಯಾತಿಗಣ್ಯರು ಧ್ರುವಾ ಮದುವೆಗೆ ಆಗಮಿಸಿ ಶುಭಕೋರಿದ್ರು. 24 ರಂದು ಸ್ಯಾಂಡಲ್​​ವುಡ್​ ಸೆಲೆಬ್ರೆಟಿಗಳಿಗೆ ಆಹ್ವಾನವಿದ್ದು,25 ರಂದು ಕೇವಲ ಅಭಿಮಾನಿಗಳಿಗಾಗಿಯೇ ಮತ್ತೊಂದು ಕಾರ್ಯಕ್ರಮ ಏರ್ಪಡಿಸಿದ್ದು ವಿಶೇಷವಾಗಿತ್ತು.

ಮತ್ತೊಂದು ಅದ್ದೂರಿ ಮದುವೆಗೆ ಸಾಕ್ಷಿಯಾದ ಚಂದನವನ

ಪುತ್ರಿ ಮದುವೆಗೆ ಮ್ಯಾಜಿಕಲ್​ ವರ್ಲ್ಡ್​ ಸೃಷಿಸಿದ್ದ ಕ್ರೇಜಿಸ್ಟಾರ್..

2019 ರ ಮತ್ತೊಂದು ಅದ್ದೂರಿ ಮದುವೆ ಕ್ರೇಜಿಸ್ಟಾರ್ ಪುತ್ರಿ ಗೀತಾಂಜಲಿ ಮದುವೆ . ಪ್ಯಾಲೇಸ್​ ಗ್ರೌಂಡ್​​ನ ವೈಟ್ ಪೆಟಲ್ಸ್​ನಲ್ಲಿ ಕನಸಿನ ಲೋಕವನ್ನೇ ಸೃಷ್ಟಿ ಮಾಡಿ, ಮುದ್ದಿನ ಮಗಳ ಮದುವೆಯನ್ನ ಅದ್ದೂರಿಯಾಗಿ ಮಾಡಿದ್ರು ಕ್ರೇಜಿಸ್ಟಾರ್. ಸಿನಿಮಾ ರೀತಿಯಲ್ಲೇ ಅದ್ದೂರಿ ಸೆಟ್ ಹಾಕಿ, ಗಾಜಿನ ವಿನ್ಯಾಸದ ಮಂಟಪ ನಿರ್ಮಾಣ, ಮಗಳ ಮದುವೆಯನ್ನ ಗ್ರ್ಯಾಂಡ್​ ಆಗಿ ನೆರವೇರಿಸಿದ್ರು. ಕ್ರೇಜಿಸ್ಟಾರ್ ಪುತ್ರಿ ಗೀತಾಂಜಲಿ ಮತ್ತು ಉದ್ಯಮಿ ಅಜೇಯ್​ ಮದುವೆಗೆ ಅಭಿಮಾನಿಗಳಿಗೂ ಆಹ್ವಾನ ನೀಡಿದ್ದ ಕ್ರೇಜಿಸ್ಟಾರ್, ವಿವಿಧ ಬಗೆಯ, ವಿಭಿನ್ನ ರೀತಿಯ ಅಡುಗೆಗಳನ್ನ ಮಾಡಿಸಿದ್ರು.

ಮೇ 29 ರಂದು ಈ ಅದ್ದೂರಿ ವಿವಾಹಕ್ಕೆ ಸ್ಯಾಂಡಲ್​ವುಡ್​ ಸೆಲೆಬ್ರೆಟಿಗಳು ಮಾತ್ರವಲ್ದೆ, ಸೂಪರ್ ಸ್ಟಾರ್ ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ, ಪ್ರಭು ಸೇರಿದಂತೆ ಚಿತ್ರರಂಗದ ಸಾಕಷ್ಟು ದಿಗ್ಗಜರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ರಿಷಿ ಬಾಳಲ್ಲಿ ಸ್ವಾತಿ, ಕಿರಣ್​ ಬಾಳಲ್ಲಿ ಹಿತಾ ಎಂಟ್ರಿ

ಸದ್ದಿಲ್ಲದೇ ಹಸೆಮಣೆ ಏರಿದ ಯಜ್ಞಾ, ಅರ್ಚನಾ..!

2019 ವರ್ಷವಿಡೀ ಮದುವೆ ಸಂಭ್ರಮದಲ್ಲೇ ಭಾಗಿಯಾಗಿದ್ದ ಜೋಡಿ ಅಂದ್ರೆ ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ, ಸ್ವಾತಿ ಜೋಡಿ. ಇದೇ ವರ್ಷ ಏಪ್ರಿಲ್​ನಲ್ಲಿ ಈ ಜೋಡಿ ಹೈದ್ರಾಬಾದ್​ನಲ್ಲಿ ಅದ್ದೂರಿಯಾಗಿ ಎಂಗೇಜ್​ಮೆಂಟ್ ಮಾಡಿಕೊಂಡ್ರು, ಆನಂತ್ರ ನವೆಂಬರ್ 10 ರಂದು ಚೈನ್ನೆನಲ್ಲಿ ಅದ್ದೂರಿಯಾಗಿ ಹಸಮೆಣೆ ಏರಿದ್ರು. ಮದುವೆಯಾಗಿ 10 ದಿನಗಳಿಗೆ ಸರಿಯಾಗಿ ಬೆಂಗಳೂರಿನ ಮೂನ್​ಗೇಟ್ ಇವೆಂಟ್ಸ್​ನಲ್ಲಿ ಆರತಕ್ಷತೆ ಕಾರ್ಯಕ್ರಮ ಕೂಡ ನೆರವೇರಿತು.

ರಿಷಿ ಮತ್ತು ಸ್ವಾತಿ ರಿಸೆ ನ್ ಕಾರ್ಯಕ್ರಮಕ್ಕೆ ಸ್ಯಾಂಡಲ್​ವುಡ್​ನ ಸೆಲೆಬ್ರೆಟಿಗಳಾದ ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ದಂಪತಿ, ರಾಕಿಂಗ್​ ಸ್ಟಾರ್ ಯಶ್, ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್,ಹಿರಿಯ ನಟ ಅನಂತ್​ನಾಗ್​ ದಂಪತಿ,ನಿಖಿಲ್​ ಕುಮಾರ್ ಸ್ವಾಮಿ, ರಾಗಿಣಿ,ಹೀಗೆ ಸಾಕಷ್ಟು ಸ್ಟಾರ್​ಗಳು ಈ ಮದುವೆಗೆ ಸಾಕ್ಷಿಯಾಗಿದ್ರು.

ಕರಾವಳಿ ಕುವರಿ ಯಜ್ನಾಶೆಟ್ಟಿ ಕೂಡ ಈ ವರ್ಷ ಸದ್ದಿಲ್ಲದೇ ಹಸೆಮಣೆ ಏರಿದ್ದಾರೆ. ಸಂದೀಪ್​ ಶೆಟ್ಟಿ ಎಂಬೋರ ಜೊತೆ ಹೊಸಬಾಳಿಗೆ ಕಾಲಿಟ್ಟಿರೋ ಯಜ್ಷಾಶೆಟ್ಟಿ ಮಂಗಳೂರಿನಲ್ಲಿ. ಕುಟುಂಬಸ್ಥರು ಮತ್ತು ಕೆಲವೇ ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಆಂದ್ಹಾಗೆ ಮದುವೆಗೆ ಕೇವಲ ನಟ ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ, ಪ್ರಮೋದ್​ ಶೆಟ್ಟಿ ಮಾತ್ರ ಸಾಕ್ಷಿಯಾಗಿದ್ರು.

ಸ್ಯಾಂಡಲ್​ವುಡ್​ನ ತಾರಾ ಜೋಡಿ ಸಿಹಿಕಹಿ ಚಂದ್ರು, ಮತ್ತು ಸಿಹಿಕಹಿ ಗೀತಾ ದಂಪತಿಯ ಪುತ್ರಿ ಹಿತಾ ಚಂದ್ರಶೇಖರ್, ಬಹುಕಾಲದ ಗೆಳೆಯ, ನಟ ನಿರೂಪಕ ಕಿರಣ್ ಶ್ರೀನಿವಾಸ್​ರನ್ನ ವರಿಸಿದ್ದಾರೆ. ಇದೇ ತಿಂಗಳ ಡಿಸೆಂಬರ್ 1 ರಂದು ಕುಟುಂಸ್ಥರು ಮತ್ತು ಆತ್ಮೀಯರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ಇವರಿಬ್ಬರ ವಿವಾಹ ನೆರವೇರಿದೆ. ಒಂಥರಾ ಬಣ್ಣಗಳು ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ಈ ಜೋಡಿ ಪ್ರೀತಿಸಿ , ನಂತ್ರ ಕುಟುಂಸ್ಥರ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದಾರೆ.

ಕನ್ನಡದ ರ್ಯಾಪ್​ ಸಿಂಗರ್​ ಅಲೋಕ್​ ಅಲಿಯಾಸ್ ಆಲ್​ ಓಕೆ ಕೂಡ ಇದೇ ವರ್ಷ ಹೊಸಬಾಳಿಗೆ ಕಾಲಿಟ್ಟಿದ್ದಾರೆ. ನಾಬ್​ ಕನ್ನಡಿಗ,ಯಾಕಿಂಗೆ, ಡೋಂಟ್​ವರಿ ಹೀಗೆ ಹಲವು ಹಿಟ್ ಸಾಂಗ್​​ಗಳನ್ನ ನೀಡಿರೋ ಆಲ್ ಓಕೆ , ಗೆಳತಿ ನಿಶಾ ಜೊತೆ ಹಸೆಮಣೇ ಏರಿದ್ದಾರೆ. ಬ್ರಾಹ್ಮಣ ಮತ್ತು ತಮಿಳು ಅಯ್ಯರ್ ಸಂಪ್ರದಾಯದಂತೆ ವಿವಾಹ ಮಹೋತ್ಸವ ನವೆಂಬರ್ 6 ನೇ ತಾರೀಖ್​ ನಂದು ಜರುಗಿದೆ. ಅಲೋಕ್ ಮತ್ತು ನಿಶಾರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಅಲೋಕ್ ಮತ್ತು ನಿಶಾ ನಟರಾಜನ್ ಈಗ ಹೊಸ ಜೀವನ ಆರಂಭಿಸಿದ್ದಾರೆ.

ಆ ದಿನಗಳು ಸಿನಿಮಾ ಖ್ಯಾತಿಯ ನಾಯಕಿ ಅರ್ಚನಾ ಕೂಡ ಸದ್ದಿಲ್ಲದೇ ಸಖತ್​ ಸಿಂಪಲ್​ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನವೆಂಬರ್ 13 ರಂದು ಜಗದೀಶ್​ ಎಂಬೋರ ಜೊತೆ ಸಪ್ತಪದಿ ತುಳಿದಿದ್ದಾರೆ. ಅಂದ್ಹಾಗೇ ಈ ಮದುವೆ ಹೈದ್ರಾಬಾದ್​ನಲ್ಲಿ ನೆರವೇರಿದೆ.

ಇನ್ನು ಈ ವರ್ಷದಲ್ಲಿ ಹಸೆಮಣೆ ಏರಿದ ಮತ್ತೊಬ್ಬ ನಟಿ ನೇಹಾಪಾಟೀಲ್. ಫೆಭ್ರವರಿ 22 ರಂದು ಸಾಫ್ಟ್​ವೇರ್ ಇಂಜಿನಿಯರ್ ಪ್ರಣವ್ ಜೊತೆ ಅದ್ದೂರಿಯಾಗಿ ವಿವಾಹ ಮಾಡಿಕೊಂಡಿದ್ದಾರೆ.

ಇನ್ನು 45 ರ ಹರೆಯದ ಗ್ಲಾಮ್​ ಡಾಲ್​ ಸುಮನ್​ ರಂಗನಾಥ್​ ಇದೇ ವರ್ಷ ಅಂದ್ರೆ ಜೂನ್​ 7 ರಂದು, ಅಮೇರಿಕಾದಲ್ಲಿ ಸಾಫ್ಟ್ ವೇರ್​ ಎಂಜಿನಿಯರ್​ ಆಗಿರೋ ಸಜನ್​ ಅವ್ರನ್ನ ವಿವಾಹವಾದ್ರು. ಕುಟುಂಬಸ್ಥರ ಸಮ್ಮುಖದಲ್ಲಿ ಸಖತ್​ ಸಿಂಪಲ್​ ಆಗಿ ಮದುವೆ ನೆರವೇರಿದೆ.

ಅರ್ಚನಾಶರ್ಮಾ, ಎಂಟರ್​​ಟೈನ್ಮೆಂಟ್​ ಬ್ಯುರೋ,ಟಿವಿ5

Related Stories

No stories found.
TV 5 Kannada
tv5kannada.com