Wednesday, June 29, 2022

ಯುವತಿಯೊಂದಿಗೆ ಮೂವರು ಮಕ್ಕಳು ಮನೆ ಬಿಟ್ಟಿದ್ದೇಕೆ..?

Must read

ಬೆಂಗಳೂರು: ನಗರದ ಸೋಲದೇವನಹಳ್ಳಿಯಲ್ಲಿ ನಾಪತ್ತೆಯಾಗಿರುವ ಓರ್ವ ಯುವತಿ ಹಾಗೂ ಮೂವರು ಮಕ್ಕಳು ಮಂಗಳೂರಿನ ಪಾಂಡೇಶ್ವರದಲ್ಲಿ ಪತ್ತೆಯಾಗಿದ್ದಾರೆ.

ಆಟೋ ಚಾಲಕರೊಬ್ಬರ ಸಮಯ ಪ್ರಜ್ಞೆಯಿಂದ ನಾಲ್ವರು ಪೊಲೀಸರ ಬಳಿ ತಲುಪಿದ್ದಾರೆ. ಡಿಸಿಪಿ ಹರಿರಾಂ ಶಂಕರ್ ಸದ್ಯ ವಿಚಾರಣೆ ನಡೆಸುತ್ತಿದ್ದು, ಈ ವೇಳೆ ನಾಲ್ವರು ಮನೆ ಬಿಟ್ಟು ಬಂದಿದ್ದೇಕೆ ಎನ್ನುವ ವಿಚಾರವನ್ನು ಬಾಯ್ಬಿಟ್ಟಿದ್ದಾರೆ.

ಪೊಲೀಸರಿಗೆ ಮಾಹಿತಿ ನೀಡಿರುವ 21 ವರ್ಷದ ಯುವತಿ ವರ್ಷಿಣಿ, ನಾವು 4ಜನ ತುಂಬಾ ಕ್ಲೋಸ್ ಫ್ರೆಂಡ್ಸ್ , ಮನೆಯವರು ನಮ್ಮನ್ನು ಬೇರೆ ಮಾಡಲು ಯತ್ನಿಸಿದ್ದರು. ನಮ್ಮ ಮನೆಯಲ್ಲಿ ಹಾಗೂ ಪರಿಸರದಲ್ಲಿ ನಮ್ಮನ್ನ ನೋಡಿದ್ರೆ ಬೈಯುತ್ತಿದ್ದರು. ನಮಗಿಂತ ಚಿಕ್ಕವರ ಮುಂದೆಯೂ ನಮಗೆ ಬೈಯುತ್ತಿದ್ದರು. ನಮ್ಮನ್ನು ದೂರ ಮಾಡಿಬಿಡ್ತಾರೆ ಎಂದು ನಾವು ಮನೆ ಬಿಟ್ಟು ಹೋಗಲು ಪ್ಲಾನ್​ ಮಾಡಿದೆವು ಎಂದು ತಿಳಿಸಿದ್ದಾರೆ.

ಬೆಂಗಳೂರಿನಿಂದ ಮೊದಲು ರೈಲು ಮೂಲಕ ಬೆಳಗಾವಿಗೆ ತೆರಳಿದ್ದ ನಾಲ್ವರು, ಅಲ್ಲಿಂದ ಮೈಸೂರಿಗೆ ತೆರಳಿ ಮತ್ತೆ ಬೆಂಗಳೂರಿಗೆ ಹೋಗಿ ನಿನ್ನೆ ಸಂಜೆ ಮೆಜೆಸ್ಟಿಕ್​ನಿಂದ ಮಂಗಳೂರಿಗೆ ಬಂದೆವು ಎಂದು ಪೊಲೀಸರೆದುರು  ತಿಳಿಸಿದ್ದಾರೆ ಎನ್ನಲಾಗಿದೆ.

Latest article