ಶಿವಮೊಗ್ಗ: ಡೆತ್ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಶಿವಮೊಗ್ಗ ಡಿಸಿ ಕಚೇರಿ ಎಫ್ಡಿಎ ಅಧಿಕಾರಿ ಧರ್ಮಸ್ಥಳದಲ್ಲಿ ಪತ್ತೆಯಾಗಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಎಫ್ಡಿಎ ಅಧಿಕಾರಿ ಗಿರಿರಾಜ್ ಕರ್ತವ್ಯದ ಒತ್ತಡ ಹಾಗೂ ಹಿರಿಯ ಅಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದು ಡೆತ್ನೋಟ್ ಬರೆದಿಟ್ಟು ಕಾಣೆಯಾಗಿದ್ದರು.
ಕಳೆದ 11 ದಿನಗಳ ಹಿಂದೆ ನಾತ್ತೆಯಾಗಿದ್ದ ಗಿರಿರಾಜ್ ಅಸ್ವಸ್ಥಗೊಂಡು ಧರ್ಮಸ್ಥಳದಲ್ಲಿ ನಿನ್ನೆ ರಾತ್ರಿ ಪತ್ತೆಯಾಗಿದ್ದಾರೆ. ಕೂಡಲೇ ದೇವಾಲಯ ಸಮಿತಿ ಸದಸ್ಯರು ಪೊಲೀಸರಿಗೆ ಹಾಗೂ ಅವರ ಮೊಬೈಲ್ನಲ್ಲಿದ್ದ ಸ್ನೇಹಿತರ ನಂಬರ್ಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡಿರುವ ಗಿರಿರಾಜ್ ಅವರನ್ನು ಸದ್ಯ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.