Tuesday, May 17, 2022

IIT ಗೆ ಆಯ್ಕೆಯಾದ ಪೆಟ್ರೋಲ್ ಬಂಕ್​ ಕಾರ್ಮಿಕನ ಮಗಳು:ಮೆಚ್ಚುಗೆಯ ಮಹಾಪೂರ

Must read

ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ತಂದೆ-ಮಗಳ ಫೋಟೋ ಭಾರೀ ವೈರಲ್ ಆಗ್ತಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಧ್ಯಕ್ಷ ಶ್ರೀಕಾಂತ ಮಾಧವ ವೈದ್ಯ ಅವರು ಈ ಮೆಚ್ಚುಗೆಯ ಪೋಸ್ಟ್ ಹಂಚಿಕೊಂಡಿದ್ದಾರೆ.

ಉನ್ನತ ಶಿಕ್ಷಣಕ್ಕಾಗಿ ದೇಶದ ಅತ್ಯಂತ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಕ್ಕೆ ಪ್ರವೇಶ ಪಡೆದ ಪೆಟ್ರೋಲ್ ಬಂಕ್​ ಸಿಬ್ಬಂದಿ ಮಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತ ಪಡಿಸಿದ್ದರು.

ಕೇರಳದ ಇಂಡಿಯನ್ ಆಯಿಲ್ ಪೆಟ್ರೋಲ್ ಸ್ಟೇಷನ್ ನಲ್ಲಿ ಗ್ರಾಹಕ ಪರಿಚಾರಕನ ಮಗಳು ಆರ್ಯ ರಾಜಗೋಪಾಲನ್ ಅವರು ಐಐಟಿ ಕಾನ್ಪುರಕೆ ಆಯ್ಕೆಯಾಗಿದ್ದಾರೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಶ್ಲಾಘಿಸಲ್ಪಡುತ್ತಿದೆ.

Latest article