Tuesday, May 17, 2022

ಕೊಲ್ಲಾಪುರ ಮಹಾಲಕ್ಷ್ಮಿ ದೇವಾಲಯದಲ್ಲಿ ಬಾಂಬ್​ ಬೆದರಿಕೆ: ಮುಂದೇನಾಯ್ತು..?

Must read

ಮಹಾರಾಷ್ಟ್ರ: ಪ್ರಸಿದ್ದ ಕೊಲ್ಲಾಪುರ ಮಹಾಲಕ್ಷ್ಮಿ ದೇವಾಲಯದಲ್ಲಿ ಬಾಂಬ್​ ಇದೆ ಎಂದು ಸುಳ್ಳು ಮಾಹಿತಿ ನೀಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಾಳಾಸಾಹೇಬ್ ಕುರಣೆ ಹಾಗೂ ಸುರೇಶ್ ಲೋಂಢೇ ಬಂಧಿತ ಆರೋಪಿಗಳು.

ಆರೋಪಿಗಳು ಕರೆ ಮಾಡಿ ಕೊಲ್ಲಾಪುರ ಮಹಾಲಕ್ಷ್ಮಿ ದೇವಾಲಯದಲ್ಲಿ ಬಾಂಬ್ ಎಂದು ಮಾಹಿತಿ ನೀಡಿದ್ದರು. ಕೂಡಲೇ ದೇವಾಲಯದ ಸುತ್ತಮುತ್ತ ಹೈ ಅಲರ್ಟ್ ಮಾಡಲಾಗಿದ್ದು, ಶ್ವಾನ ದಳ ಹಾಗೂ ಬಾಂಬ್ ಸ್ಕ್ವಾಡ್ ಸಿಬ್ಬಂದಿ ಭೇಟಿ ನೀಡಿ ಸಂಪೂರ್ಣ ದೇವಾಲಯ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆಯ ಬಳಿಕ ಸುಳ್ಳು ಮಾಹಿತಿ ಎಂದು ಖಚಿತವಾಗಿದ್ದು, ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

Latest article