Tuesday, May 17, 2022

ಏತ ನೀರಾವರಿ ಕೆನಾಲ್​ಗೆ ಬಿದ್ದು ಮಕ್ಕಳ ದಾರುಣ ಸಾವು

Must read

ಬೆಳಗಾವಿ: ಏತ ನೀರಾವರಿ ಕೆನಾಲ್​ಗೆ ಬಿದ್ದು ಮಕ್ಕಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಪ್ನಾ ವಿನಾಯಕ್ ಪುಂಡಿಪಲ್ಲೆ(11) ಮತ್ತು ವಿಜಯ ವಿನಾಯಕ ಪುಂಡಿಪಲ್ಲೆ (7) ಮೃತ ದುರ್ದೈವಿಗಳು.

ನಿನ್ನೆ ಸಂಜೆ ನಾಲ್ವರು ಮಕ್ಕಳು ಕೆನಾಲ್​ ಬಳಿ ಆಟವಾಡಲು ಹೋಗಿ ನೀರಿಗೆ ಬಿದ್ದಿದ್ದಾರೆ. ಅಲ್ಲೇ ಸಮೀಪದಲ್ಲಿದ್ದ ಸ್ಥಳೀಯರು ಕೂಡಲೇ ಮಕ್ಕಳ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ದುರಾದೃಷ್ಟವಶಾತ್​ ಇಬ್ಬರು ಮಕ್ಕಳು ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಮಕ್ಕಳ ಮೃತದೇಹ ಹೊರತೆಗೆದಿದ್ದಾರೆ. ಅಥಣಿ ತಾಲೂಕಿನ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest article