ಬೆಳಗಾವಿ: ಹತ್ತು ವರ್ಷದ ಬಾಲಕ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ರಾಯಭಾಗ ತಾಲೂಕಿನ ಕಂಕಣವಾಡಿಯಲ್ಲಿ ನಡೆದಿದೆ. ರಾಹುಲ್ ಬ್ಯಾಕೂಡ ನಾಪತ್ತೆಯಾದ ಬಾಲಕ.
ರಾಹುಲ್ ನಿನ್ನೆ ಸಂಜೆ ಘಟಪ್ರಭಾ ಎಡದಂಡೆ ಕಾಲುವೆ ಬಳಿ ಕಣ್ಮರೆಯಾಗಿದ್ದು, ಕಾಲುವೆಯಲ್ಲಿ ಬಿದ್ದಿರುವ ಬಗ್ಗೆ ಬಾಲಕನ ತಮ್ಮ ಮಾಹಿತಿ ನೀಡಿದ್ದಾನೆ.
ರಾಯಭಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸದ್ಯ ಬಾಲಕನಿಗಾಗಿ ಪೋಷಕರು ಹಾಗೂ ಪೋಲಿಸರು ಕಾಲುವೆಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.