Tuesday, May 17, 2022

ದಕ್ಷಿಣ ಕನ್ನಡದಲ್ಲಿ ಮತ್ತೆ ‘ನೈತಿಕ ಪೊಲೀಸ್ ಗಿರಿ’: ಇಬ್ಬರ ಬಂಧನ

Must read

ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಂಹಿತ್ ರಾಜ್ ಹಾಗೂ ಸಂದೀಪ್ ಪೂಜಾರಿ ಬಂಧಿತ ಆರೋಪಿಗಳು.

ನಿನ್ನೆ ಮೂಡಬಿದ್ರೆಯಲ್ಲಿ ಅನ್ಯಕೋಮಿನ ಯುವತಿಯರನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ ದಂಪತಿಯನ್ನು ಅಡ್ಡಗಟ್ಟಿದ ಏಳೆಂಟು ಜನರ ತಂಡ ಅವಾಚ್ಯ ಶಬ್ದಗಳಿಂದ ನಿಂಧಿಸಿ ಅಗೌರವ ತೋರಿರುವ ಆರೋಪ ಕೇಳಿಬಂದಿದೆ.

ಘಟನೆ ಸಂಬಂಧ ಐಪಿಸಿ ಸಕ್ಷನ್ 354, 153A, 504, 506 ಅಡಿ ಪ್ರಕರಣ ದಾಖಲಾಗಿದ್ದು, ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

Latest article