ಪ್ಲೇ ಆಫ್ ಮೈಲುಗಲ್ಲು ತಲುಪಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಈ ಬಾರಿ 3ನೇ ತಂಡವಾಗಿ ಪ್ಲೇ ಆಫ್ ಪ್ರವೇಶ ಪಡೆದಿರುವ ಆರ್ಸಿಬಿ “ಈ ಸಲ ಕಪ್ ನಮ್ದೇ” ಎಂಬ ಜೋಶ್ನಲ್ಲಿದೆ. ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಕೊನೇ ಕ್ಷಣದವರೆಗೂ ಹೋರಾಡಿ ರೋಚಕ ಗೆಲುವು ಸಾಧಿಸಿದ ಆರ್ಸಿಬಿ ತಂಡ ಇಂದು ಎಲಿಮಿನೇಟರ್ನಲ್ಲಿ ಗೆಲ್ಲುವ ತವಕದಲ್ಲಿದೆ.
ಬ್ಯಾಟಿಂಗ್, ಬೌಲಿಂಗ್ ಆರ್ಸಿಬಿ ಇಂದಿನ ಪಂದ್ಯದಲ್ಲಿ ಗೆದ್ದರೆ ಮಾತ್ರ ಮುಂದಿನ ಸೆಮಿ ಫೈನಲ್ ಪಂದ್ಯಕ್ಕೆ ಅವಕಾಶ ಪಡೆಯಲಿದೆ. ಆರ್ಸಿಬಿ ಫೈನಲ್ ಪ್ರವೇಶಿಸುವ ಕ್ಷಣಕ್ಕಾಗಿ ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ. ಇದೆಲ್ಲವೂ ಇಂದಿನ ಪಂದ್ಯದಲ್ಲಿ ನಿರ್ಧಾರವಾಗಲಿದ್ದು, ಕೆಕೆಆರ್ ಕೂಡ ಅಷ್ಟೇ ಬಲಿಷ್ಟವಾದ ತಂಡವಾದ್ದರಿಂದ ಬಹಳ ಚಾಣಕ್ಷತೆಯಿಂದ ಆಟ ಮುಂದುವರೆಸಲು ಬೆಂಗಳೂರು ಬಳಗ ಕಾತುರದಿಂದ ಕಾತುರದಲ್ಲಿದೆ. ಇವತ್ತಿನ ಪಂದ್ಯ ಸಂಜೆ 7.30ಕ್ಕೆ ಶಾರ್ಜಾದಲ್ಲಿ ಕೆಕೆಆರ್ ತಂಡದ ಮಾರ್ಗನ್, ಆರ್ಸಿಬಿ ತಂಡದ ಕೊಹ್ಲಿ ನಾಯಕತ್ವದಲ್ಲಿ ಪಂದ್ಯ ನಡೆಲಿದೆ. ಎರಡೂ ತಂಡಗಳು ಕೂಡ ಜಿದ್ದಾಜಿದ್ದಿಗೆ ಸಜ್ಜಾಗಿ ನಿಂತಿವೆ. ಇವತ್ತಿನ ಎರಡೂ ತಂಡಗಳಿಗೂ ಅಗ್ನಿ ಪರೀಕ್ಷೆಯಾಗಿದೆ.