ಮಂಗಳ ಗ್ರಹ ಸ್ಪರ್ಶಿಸಿದ ಅಮೆರಿಕದ ನಾಸಾ 'ಪರ್ಸೆವೆರೆನ್ಸ್ ರೋವರ್'
'ಪರ್ಸೆವೆರೆನ್ಸ್ ರೋವರ್' ಮಂಗಳ ಗ್ರಹದ ಜೀವಗಳ ಅಸ್ತಿತ್ವದ ಬಗ್ಗೆ ಅಧ್ಯಯನ ನಡೆಸಲಿದೆ.

X
Admin 219 Feb 2021 5:28 AM GMT
ವಾಷಿಂಗ್ಟನ್: ಯುಎಸ್ನ ಬಾಹ್ಯಾಕಾಶ ಸಂಸ್ಥೆ National Aeronautics and Space Administration (NASA), ಅತಿದೊಡ್ಡ ಹಾಗೂ ಅತ್ಯಾಧುನಿಕ'ಪರ್ಸೆವೆರೆನ್ಸ್ ರೋವರ್' ಯಶಸ್ವಿ ಆಗಿ ಮಂಗಳ (Mars) ಗ್ರಹವನ್ನು ತಲುಪಿದೆ.
ಸತತ 203 ದಿನಗಳ ಸುದೀರ್ಘ ಪ್ರಯಾಣದ ನಂತರ 472 ಮಿಲಿಯನ್ ಕಿ.ಮೀ. ದೂರ ಕ್ರಮಿಸಿರುವ ನಾಸಾದ 'ಪರ್ಸೆವೆರೆನ್ಸ್ ರೋವರ್' ಮಂಗಳನ ಅಂಗಳದಲ್ಲಿ ಯಶಸ್ವಿಯಾಗಿ ಸೇರಿದೆ. ದಕ್ಷಿಣ ಕ್ಯಾಲಿಫೋರ್ನಿಯಾದ ನಾಸಾದ ಜೆಡ್ ಪ್ರೊಪಲ್ಷನ್ ಲ್ಯಾಬೋರೇಟರಿಯಲ್ಲಿ ಸ್ಥಳೀಯ ಸಮಯ ಮಧ್ಯಾಹ್ನ 3.55ಕ್ಕೆ ನಾಸಾ 'ರೋವರ್' ಮಂಗಳ ಗ್ರಹದ ಮೇಲೆ ಇಳಿದಿದೆ.
'ಪರ್ಸೆವೆರೆನ್ಸ್ ರೋವರ್' ಮಂಗಳ ಗ್ರಹದ ಜೀವಗಳ ಅಸ್ತಿತ್ವದ ಬಗ್ಗೆ ಅಧ್ಯಯನ ನಡೆಸಲಿದೆ.
ಜುಲೈ 30ರಂದು ಕೇಪ್ ಕ್ಯಾನವರೆಲ್ ಬಾಹ್ಯಾಕಾಶ ಕೇಂದ್ರದಿಂದ 'ಪರ್ಸೆವೆರೆನ್ಸ್ ರೋವರ್' ರಾಕೆಟ್ ಉಡಾವಣೆಗೊಂಡಿತ್ತು. ರೋವರ್ 1026 ಕೆ.ಜಿ ತೂಕವಿದೆ.
Next Story