Top

ಪೂರ್ವ ಸಿರಿಯಾದಲ್ಲಿ ಹೆಚ್ಚುವರಿ ಸೇನೆ ಮತ್ತು ಶಸ್ತ್ರಸಜ್ಜಿತ ವಾಹನಗಳ ನಿಯೋಜಿಸಿದ ಅಮೆರಿಕ

ಈ ಕ್ರಮವು ಈಗ ಟರ್ಕಿಯ ಗಡಿಯಲ್ಲಿ ಬೀಡುಬಿಟ್ಟಿರುವ ರಷ್ಯಾದ ಪಡೆಗಳೊಂದಿಗೆ ಹಲವಾರು ಘರ್ಷಣೆಯನ್ನು ಅನುಸರಿಸುತ್ತದೆ.

ಪೂರ್ವ ಸಿರಿಯಾದಲ್ಲಿ ಹೆಚ್ಚುವರಿ ಸೇನೆ ಮತ್ತು ಶಸ್ತ್ರಸಜ್ಜಿತ ವಾಹನಗಳ ನಿಯೋಜಿಸಿದ ಅಮೆರಿಕ
X

ಯುಎಸ್ ಹೆಚ್ಚುವರಿ ಸೈನ್ಯ ಮತ್ತು ಬ್ರಾಡ್ಲಿ ಹೋರಾಟದ ವಾಹನಗಳನ್ನು ಪೂರ್ವ ಸಿರಿಯಾಕ್ಕೆ ಕಳುಹಿಸಿದೆ - ಪೋಟೋ ಕೃಪೆ: ಡಾರ್ಕೊ ಬಂಡಿಕ್/ಎಪಿ

ವಾಷಿಂಗ್ಟನ್‌: ವಿಶ್ವದ ದೊಡ್ಡಣ ಅಮೆರಿಕ ದೇಶವು ಪೂರ್ವ ಸಿರಿಯಾದಲ್ಲಿ ಹೆಚ್ಚುವರಿ ಸೇನೆ ಮತ್ತು ಶಸ್ತ್ರ ಸಜ್ಜಿತ ವಾಹನಗಳನ್ನು ನಿಯೋಜನೆ ಮಾಡಿದ್ದು, ಕಳೆದ ಹಲವು ದಿನಗಳಿಂದ ಪೂರ್ವ ಸಿರಿಯಾದಲ್ಲಿ ಅಮೆರಿಕ ಮತ್ತು ರಷ್ಯಾ ಪಡೆಗಳ ನಡುವೆ ಘರ್ಷಣೆಗಳು ಉಂಟಾಗುತ್ತಿದೆ. ಅಲ್ಲದೇ, ಇತ್ತೀಚೆಗೆ ನಡೆದ ವಾಹನ ಅಪಘಾತದಲ್ಲಿ ಅಮೆರಿಕದ ನಾಲ್ವರು ಯೋಧರಿಗೆ ಗಾಯಗಳಾಗಿದ್ದವು. ಈ ಬೆಳವಣಿಗೆ ಬೆನ್ನಲ್ಲೇ ಅಮೆರಿಕವು ಪೂರ್ವ ಸಿರಿಯಾದಲ್ಲಿ ತನ್ನ ಸೇನಾ ಬಲವನ್ನು ಹೆಚ್ಚಿಸಿಕೊಂಡಿದೆ.

ಸದ್ಯ ಈಶಾನ್ಯ ಸಿರಿಯಾ ಪ್ರದೇಶದಲ್ಲಿ ರೇಡಾರ್‌ ವ್ಯವಸ್ಥೆಯನ್ನು ಮಾಡಲಾಗಿದ್ದು, ಯುದ್ಧ ವಿಮಾನಗಳ ಗಸ್ತು ಕೂಡ ಹೆಚ್ಚಿಸಲಾಗಿದೆ. ಅಮೆರಿಕ ಮತ್ತು ಮೈತ್ರಿ ಸೇನೆಯ ರಕ್ಷಣೆಯೇ ಇದರ ಮುಖ್ಯ ಉದ್ದೇಶವಾಗಿದೆ. ಅಮೆರಿಕವು ಸಿರಿಯಾದಲ್ಲಿ ಬೇರೆ ಯಾವುದೇ ರಾಷ್ಟ್ರಗಳೊಂದಿಗೆ ಸಂಘರ್ಷ ಬಯಸುವುದಿಲ್ಲ. ಆದರೆ, ಅವಶ್ಯಕತೆ ಇದ್ದಲ್ಲಿ ಮೈತ್ರಿ ಸೇನೆಯನ್ನು ರಕ್ಷಿಸಲು ಸಿದ್ಧವಾಗಿದೆ ಎಂದು ಅಮೆರಿಕದ ಕೇಂದ್ರ ಕಮಾಂಡರ್‌ನ ವಕ್ತಾರ ನೇವಿ ಕ್ಯಾಪ್ಟನ್‌ ಬಿಲ್‌ ಅರ್ಬನ್‌ ಅವರು ತಿಳಿಸಿದರು.

ಅಮೆರಿಕವು ಈಶಾನ್ಯ ಸಿರಿಯಾದಲ್ಲಿ 6ಕ್ಕೂ ಹೆಚ್ಚು ಬ್ರಾಡ್ಲಿ ಯುದ್ಧ ವಾಹನಗಳು, ಸುಮಾರು 100 ಹೆಚ್ಚುವರಿ ಸೇನೆಯನ್ನು ನಿಯೋಜಿಸಿದೆ. ಇದು ಅಮೆರಿಕ ಮತ್ತು ಮೈತ್ರಿ ರಾಷ್ಟ್ರದ ಮೇಲೆ ದಾಳಿ ನಡೆಸದಂತೆ ರಷ್ಯಾಕ್ಕೆ ಎಚ್ಚರಿಕೆಯಾಗಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

Next Story

RELATED STORIES